IPL 2022- RCB- Virat Kohli – ಆರ್ ಸಿ ಬಿ ಕ್ಯಾಂಪ್ ನಲ್ಲಿ ಕಿಂಗ್ ಕೊಹ್ಲಿ ಹವಾ..!
15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಎಲ್ಲಾ ತಂಡಗಳು ಭರ್ಜರಿ ತಯಾರಿಯಲ್ಲಿ ನಿರತವಾಗಿವೆ. ಹಾಗೇ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ
ಸಂಜಯ್ ಬಂಗಾರ್ ಮಾರ್ಗದರ್ಶನ ಮತ್ತು ಫಾಫ್ ಡುಪ್ಲೆಸಸ್ ಸಾರಥ್ಯದಲ್ಲಿ ಆರ್ ಸಿಬಿ ಆಟಗಾರರು ಬೆವರು ಸುರಿಸುತ್ತಿದ್ದಾರೆ. ಈಗಾಗಲೇ ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದಾರೆ. ಅಭ್ಯಾಸದ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟ್ಸ್ ಮೆನ್ ಗಳು ಅತ್ಯುತ್ತಮ ಫಾರ್ಮ್ ನಲ್ಲಿರುವುದು ಕಂಡು ಬರುತ್ತಿದೆ.
ಈ ನಡುವೆ ವಿರಾಟ್ ಕೊಹ್ಲಿ ಕೂಡ ಆರ್ ಸಿಬಿ ಕ್ಯಾಂಪ್ ಅನ್ನು ಸೇರಿಕೊಂಡಿದ್ದಾರೆ. ಲಂಕಾ ವಿರುದ್ಧದ ಟೆಸ್ಟ್ ಸರಣಿಯ ನಂತರ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿದ್ದರು. ಈ ವೇಳೆ ಪತ್ನಿ ಮತ್ತು ಮಗಳ ಜೊತೆ ಕಾಲ ಕೂಡ ಕಳೆದಿದ್ದರು. IPL 2022- RCB- Virat Kohli joins Royal Challengers Bangalore camp in Mumbai
ಮಾರ್ಚ್ 21ರಂದು ಮುಂಬೈ ಬಂದಿಳಿದ ಆರ್ ಸಿಬಿಯ ಮಾಜಿ ನಾಯಕನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾನೇಜ್ ಮೆಂಟ್ ರಾಯಲ್ ಆಗಿಯೇ ವೆಲ್ ಕಮ್ ಮಾಡಿದೆ. ಕಿಂಗ್ ಕೊಹ್ಲಿಯ ಆಗಮನ.. ಇದು ಸುದ್ದಿ ಅಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸಾಮಾಜಿಕ ಜಾಲ ತಾಣದಲ್ಲಿ ವಿರಾಟ್ ಫೋಟೋ ಜೊತೆ ಶೇರ್ ಮಾಡಿಕೊಂಡಿದೆ.
ವಿರಾಟ್ ಕೊಹ್ಲಿ ಆರ್ ಸಿಬಿಯ ಭಾಗವಾಗಿದ್ದಾರೆ. ತಂಡದ ಸೆಂಟ್ರಲ್ ಪಿಲ್ಲರ್ ಕೂಡ ಹೌದು. 2008ರಿಂದ ಇಲ್ಲಿಯವರೆಗೆ ಆರ್ ಸಿಬಿ ತಂಡದ ಯುವ ಆಟಗಾರನಾಗಿ, ಪ್ರಮುಖ ಆಟಗಾರನಾಗಿ, ನಾಯಕನಾಗಿ, ಇದೀಗ ಮಾಜಿ ನಾಯಕ ಮತ್ತು ಹಿರಿಯ ಆಟಗಾರನಾಗಿ ಕಣಕ್ಕಿಳಿಯಲ್ಲಿದ್ದಾರೆ.
ವಿರಾಟ್ ಕೊಹ್ಲಿ ಆರ್ ಸಿಬಿ ನಾಯಕನಾಗಿ ಕಪ್ ಗೆಲ್ಲಲಿಲ್ಲ. ಆದ್ರೆ ಅವರ ನಾಯಕತ್ವದಲ್ಲಿ ಹಲವು ದಾಖಲೆಗಳನ್ನು ಆರ್ ಸಿಬಿ ಬರೆದಿದೆ. ಸೋಲಲಿ, ಗೆಲ್ಲಲಿ, ಕಪ್ ಗೆಲ್ಲದೇ ಇರಲಿ, ಆದ್ರೂ ಆರ್ ಸಿಬಿ ಆಟಗಾರರು ಮಾಡಿರುವ ದಾಖಲೆಗಳು ಮಾತ್ರ ಐಪಿಎಲ್ ಇತಿಹಾಸ ಪುಟದಲ್ಲಿ ರಾರಾಜಿಸುತ್ತಿವೆ.
ಇದೀಗ 2022ರ ಐಪಿಎಲ್ ನಲ್ಲಿ ಆರ್ ಸಿಬಿ ಹೊಸ ಚೈತನ್ಯ ಪಡೆದುಕೊಂಡಿದೆ. ನೂತನ ನಾಯಕ ಫಾಫ್ ಡುಪ್ಲೆಸಸ್ ಸಾರಥ್ಯದಲ್ಲಿ ಆರ್ ಸಿಬಿ ಕಪ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ ಆರ್ ಸಿಬಿ ಅಭಿಮಾನಿಗಳು.