ಐಪಿಎಲ್ನಲ್ಲಿ ಈಗ ಪ್ಲೇ-ಆಫ್ನದ್ದೇ ಲೆಕ್ಕಾಚಾರ. ಗುಜರಾತ್ ಮತ್ತು ರಾಜಸ್ಥಾನ ಅಗ್ರ ಎರಡು ಸ್ಥಾನದಲ್ಲಿ ಲೀಗ್ ಹಂತವನ್ನು ಮುಗಿಸಿವೆ. ಲಖನೌ ಮೂರನೇ ಸ್ಥಾನ ಪಡೆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 4ನೇ ಸ್ಥಾನ. ಪ್ಲೇ-ಆಫ್ ಲೆಕ್ಕಾಚಾರ ಸಾಕಷ್ಟು ಕುತೂಹಲ ಮೂಡಿಸಿದೆ.
1ನೇ ಕ್ವಾಲಿಫೈಯರ್- ಮೇ 24
ಗುಜರಾತ್ ಟೈಟಾನ್ಸ್ VS ರಾಜಸ್ಥಾನ ರಾಯಲ್ಸ್
ಈಡನ್ ಗಾರ್ಡನ್, ಕೊಲ್ಕತ್ತಾ
ಮೊದಲ ಕ್ವಾಲಿಫೈಯರ್ ಮೇ 24 ರಂದು ನಡೆಯಲಿದೆ. ಲೀಗ್ ಟಾಪರ್ ಗುಜರಾತ್ ಟೈಟಾನ್ಸ್ ಮತ್ತು 2ನೇ ಸ್ಥಾನ ಪಡೆದ ರಾಜಸ್ಥಾನ ರಾಯಲ್ಸ್ ನಡುವೆ ನಡೆಯಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಈ ಮ್ಯಾಚ್ ನಡೆಯಲಿದೆ. ಈ ಪಂದ್ಯ ಗೆದ್ದವರು ನೇರವಾಗಿ ಫೈನಲ್ ಸ್ಥಾನ ಪಡೆಯಲಿದ್ದಾರೆ. ಇಲ್ಲಿ ಸೋತ ತಂಡ ಫೈನಲ್ ಸ್ಥಾನಕ್ಕಾಗಿ ಎಲಿಮಿನೇಟರ್ನಲ್ಲಿ ಆಡಬೇಕಿದೆ.
ಎಲಿಮಿನೇಟರ್- ಮೇ 25
ಲಖನೌ ಸೂಪರ್ ಜೈಂಟ್ಸ್ VS ರಾಯಲ್ ಚಾಲೆಂಜರ್ಸ್ ಬೆಂಗಳೂರು
ಈಡನ್ ಗಾರ್ಡನ್ಸ್ ಕೊಲ್ಕತ್ತಾ
ಎಲಿಮಿನೇಟರ್ ಪಂದ್ಯ ಲೀಗ್ನಲ್ಲಿ 3 ಮತ್ತು 4ನೇ ಸ್ಥಾನ ಪಡೆದ ಲಖನೌ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ನಡೆಯಲಿದೆ. ಇದು ನಾಕೌಟ್ ಮ್ಯಾಚ್. ಈ ಪಂದ್ಯ ಗೆದ್ದವರು ಕ್ವಾಲಿಫೈಯರ್ 2ರಲ್ಲಿ ಆಡಿ ಫೈನಲ್ ಸ್ಥಾನ ಗಟ್ಟಿ ಮಾಡಿಕೊಳ್ಳಬೇಕು. ಈ ಪಂದ್ಯವೂ ಕೊಲ್ಕತ್ತಾದಲ್ಲಿ ನಡೆಯಲಿದೆ.
ಕ್ವಾಲಿಫೈಯರ್-2- ಮೇ 27
ಕ್ವಾಲಿಫೈಯರ್ -1 ಸೋತ ತಂಡ VS ಎಲಿಮಿನೇಟರ್ ವಿನ್ನರ್
ನರೇಂದ್ರ ಮೋದಿ ಕ್ರೀಡಾಂಗಣ, ಅಹ್ಮದಾಬಾದ್
ಕ್ವಾಲಿಫೈಯರ್ 2 ಫೈನಲ್ ಸ್ಥಾನ ಪಡೆಯಲು ಇರುವ ಅಂತಿಮ ಪಂದ್ಯ. ಇಲ್ಲಿ ಕ್ವಾಲಿಫೈಯರ್ 1 ರಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್ನಲ್ಲಿ ಗೆದ್ದ ತಂಡ ಮುಖಾಮುಖಿಯಾಗಲಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಫೈನಲ್, ಮೇ 29
ಕ್ವಾಲಿಫೈಯರ್ 1 ವಿನ್ನರ್ VS ಕ್ವಾಲಿಫೈಯರ್ 2 ವಿನ್ನರ್
ನರೇಂದ್ರ ಮೋದಿ ಕ್ರೀಡಾಂಗಣ, ಅಹ್ಮದಾಬಾದ್
ಐಪಿಎಲ್ನ ಅಂತಿಮ ಪಂದ್ಯ ಫೈನಲ್ ಮೇ 29 ರಂದು ನಡೆಯಲಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್ 1 ಮತ್ತು ಕ್ವಾಲಿಫೈಯರ್ 2 ರ ವಿನ್ನರ್ ಗಳ ನಡುವೆ ನಡೆಯಲಿದೆ.