IPL 2022 ಮುಂಬೈ ಇಂಡಿಯನ್ಸ್ Vs ಕೆಕೆಆರ್- ಸಂಭವನೀಯ 11ರ ಬಳಗ..!

ಏಪ್ರಿಲ್ 6, ಮ್ಯಾಚ್ ನಂಬರ್ 14ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಜಟಾಪಟಿ ನಡೆಸಲಿವೆ.
ಪುಣೆಯ ಎಮ್ ಸಿಎ ಅಂಗಣದಲ್ಲಿ ನಡೆಯಲಿರುವ ಈ ಪಂದ್ಯ ಸಾಕಷ್ಟು ಕುತೂಹಲವನ್ನು ಮೂಡಿಸಿದೆ.
ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡ, ಈ ಬಾರಿಯ ಟೂರ್ನಿಯ ಆರಂಭದಲ್ಲೇ ಸಪ್ಪೆಯಾಗಿ ಕಾಣುತ್ತಿದೆ. ಆಡಿರುವ ಎರಡೂ ಪಂದ್ಯಗಳನ್ನು ಸೋತಿರುವ ರೋಹಿತ್ ಬಳಗ ಗೆಲುವಿಗಾಗಿ ಒದ್ದಾಟ ನಡೆಸುತ್ತಿದೆ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಈ ಬಾರಿ ಬೌಲರ್ ಗಳು ಕೂಡ ಕೈಕೊಡುತ್ತಿದ್ದಾರೆ. ಬಲಿಷ್ಠ ಬೌಲಿಂಗ್ ವಿಭಾಗವಿದ್ರೂ ಲಯ ಕಂಡುಕೊಂಡಿಲ್ಲ. ಇನ್ನೊಂದೆಡೆ ಮಧ್ಯಮ ಕ್ರಮಾಂಕದಲ್ಲಿ ವೀಕ್ ಆಗಿ ಕಾಣಿಸುತ್ತಿದೆ. ಅಷ್ಟೇ ಅಲ್ಲ, ತಂಡದ ಪ್ರಮುಖ ಆಟಗಾರ ಸೂರ್ಯ ಕುಮಾರ್ ಯಾದವ್ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಸ್ಕೈ ಈ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ.
ಇನ್ನೊಂದೆಡೆ ಕೆಕೆಆರ್ ತಂಡಕ್ಕೆ ಆನೆ ಬಲ ಬಂದಿದೆ. ಆಸ್ಟ್ರೇಲಿಯಾದ ನಾಯಕ ಹಾಗೂ ಆಲ್ ರೌಂಡರ್ ಪ್ಯಾಟ್ ಕಮಿನ್ಸ್ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ.
ಕೆಕೆಆರ್ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯವನ್ನು ಗೆದ್ದುಕೊಂಡಿದೆ. ಆದ್ರೂ ಸಾಂಘಿಕ ಆಟವನ್ನಾಡಲು ಕೆಕೆಆರ್ ಎಡವುತ್ತಿದೆ. ತಂಡದ ಸ್ಟಾರ್ ಬ್ಯಾಟ್ಸ್ ಮೆನ್ ಗಳಿಂದ ನಿರೀಕ್ಷಿತ ಮಟ್ಟದ ರನ್ ಗಳು ಬಂದಿಲ್ಲ.

ಒಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ತಪ್ಪುಗಳನ್ನು ಸರಿಪಡಿಸಿಕೊಂಡು ಆಡಬೇಕಿದೆ. ಕೆಕೆಆರ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳಲು ಹೋರಾಟ ನಡೆಸಿದ್ರೆ, ಮುಂಬೈ ಇಂಡಿಯನ್ಸ್ ಗೆಲುವಿನ ಖಾತೆ ತೆರೆಯಲು ಚಿತ್ತವನ್ನಿಟ್ಟಿದೆ. IPL 2022- Mumbai indians vs Kolkata Knight Riders Predicted Playing XIs
ಕೊಲ್ಕತ್ತಾ ನೈಟ್ ರೈಡರ್ಸ್ ಸಂಭವನೀಯ ತಂಡ
ವೆಂಕಟೇಶ್ ಅಯ್ಯರ್, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ) ನಿತೇಶ್ ರಾಣಾ, ಶೆಲ್ಡನ್ ಜಾಕ್ಸನ್, ಆಂಡ್ರೆ ರಸೆಲ್, ಸುನೀಲ್ ನರೇನ್, ಪ್ಯಾಟ್ ಕಮಿನ್ಸ್, ಉಮೇಶ್ ಯಾದವ್, ಟೀಮ್ ಸೌಥಿ, ವರುಣ್ ಚಕ್ರವರ್ತಿ
ಮುಂಬೈ ಇಂಡಿಯನ್ಸ್ ಸಂಭವನೀಯ ತಂಡ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶಾನ್, ತಿಲಕ್ ವರ್ಮಾ, ಆಂಮೊಲ್ ಪ್ರೀತ್ ಸಿಂಗ್, ಕಿರಾನ್ ಪೊಲಾರ್ಡ್, ಟಿಮ್ ಡೇವಿಡ್, ಫ್ಯಾಬಿಯನ್ ಆಲೆನ್, ಬಾಸಿಲ್ ಥಂಪಿ, ಜಸ್ಪ್ರಿತ್ ಬೂಮ್ರಾ, ಟೈಮಲ್ ಮಿಲ್ಸ್, ಜಯದೇವ್ ಉನಾದ್ಕಟ್.