ಬ್ಯಾಟ್ಸ್ಮನ್ಗಳ ಜವಾಬ್ದಾರಿಯ ಆಟದ ನಡುವೆಯೂ ಮೊಸಿನ್ ಖಾನ್(4/16) ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 6 ರನ್ಗಳ ರೋಚಕ ಗೆಲುವು ಸಾಧಿಸಿತು.
ವಾಂಖೆಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 195/3 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, 20 ಓವರ್ಗಳಲ್ಲಿ 7 ವಿಕೆಟ್ಗೆ 189 ರನ್ಗಳಸಲಷ್ಟೇ ಶಕ್ತವಾಯಿತು. ಡೆಲ್ಲಿ ಪರ ರಿಷಬ್ ಪಂತ್(44), ಮಿಚೆಲ್ ಮಾರ್ಷ್(37) ಬ್ಯಾಟಿಂಗ್ನಲ್ಲಿ ಮಿಂಚಿದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
![IPL 2022: ರಾಹುಲ್-ಹೂಡ ಬ್ಯಾಟಿಂಗ್ ಅಬ್ಬರ; ಮೊಸಿನ್ ಮಿಂಚಿನ ದಾಳಿ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ 3 PANT MARSH](http://sportskarnataka.com/wp-content/uploads/2022/05/PANT-MARSH.jpg)
ಡಿಸಿ ಬ್ಯಾಟಿಂಗ್ ಆಘಾತ:
ಲಕ್ನೋ ಸೂಪರ್ ಜೈಂಟ್ಸ್ ನೀಡಿದ 196 ರನ್ಗಳ ಸವಾಲಿನ ಮೊತ್ತ ಬೆನ್ನತ್ತಿದ ಡೆಲ್ಲಿ ಆರಂಭಿಕ ಆಘಾತ ಕಂಡಿತು. ಆರಂಭಿಕರಾದ ಪೃಥ್ವಿ ಶಾ(5) ಹಾಗೂ ಡೇವಿಡ್ ವಾರ್ನರ್(3) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ ನಂತರ ಜೊತೆಯಾದ ಮಿಚೆಲ್ ಮಾರ್ಷ್ 37 ರನ್(20 ಬಾಲ್, 3 ಬೌಂಡರಿ, 3 ಸಿಕ್ಸ್) ಹಾಗೂ ನಾಯಕ ರಿಷಬ್ ಪಂತ್ 44 ರನ್(30 ಬಾಲ್, 7 ಬೌಂಡರಿ, 1 ಸಿಕ್ಸ್) ಸ್ಪೋಟಕ ಆಟವಾಡಿದರು. 3ನೇ ವಿಕೆಟ್ಗೆ 60 ರನ್ಗಳಿಸಿದ ಈ ಜೋಡಿ ತಂಡದ ಗೆಲುವಿನ ಆಸೆಯನ್ನು ಜೀವಂತವಿರಿಸಿದರು. ಈ ಗೆಲುವಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ 7ನೇ ಗೆಲುವಿನೊಂದಿಗೆ 14 ಪಾಯಿಂಟ್ಸ್ನಿಂದ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ. ಡೆಲ್ಲಿ ಕ್ಯಾಪಿಟಲ್ಸ್ 5ನೇ ಸೋಲಿನ ಆಘಾತ ಅನುಭವಿಸಿತು.
![IPL 2022: ರಾಹುಲ್-ಹೂಡ ಬ್ಯಾಟಿಂಗ್ ಅಬ್ಬರ; ಮೊಸಿನ್ ಮಿಂಚಿನ ದಾಳಿ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ 4 RISHAB PANT](http://sportskarnataka.com/wp-content/uploads/2022/05/RISHAB-PANT.jpg)
ನಂತರ ಬಂದ ಲಲಿತ್ ಯಾದವ್(3) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ ರೋವ್ಮನ್ ಪೋವಲ್ 35 ರನ್(21 ಬಾಲ್, 3 ಬೌಂಡರಿ, 2 ಸಿಕ್ಸ್) ಹಾಗೂ ಅಕ್ಸರ್ ಪಟೇಲ್ 44* ರನ್(24 ಬಾಲ್, 1 ಬೌಂಡರಿ, 3 ಸಿಕ್ಸ್) ಬಿರುಸಿನ ಬ್ಯಾಟಿಂಗ್ ನಡೆಸಿದರು. ಉಳಿದಂತೆ ಶಾರ್ದೂಲ್ ಥಾಕೂರ್(1) ಬ್ಯಾಟಿಂಗ್ನಲ್ಲಿ ಕೈಕೊಟ್ಟರೆ, ಕುಲ್ದೀಪ್ ಯಾದವ್(16*) ಉಪಯುಕ್ತ ರನ್ಗಳಿಸಿದರು.
![IPL 2022: ರಾಹುಲ್-ಹೂಡ ಬ್ಯಾಟಿಂಗ್ ಅಬ್ಬರ; ಮೊಸಿನ್ ಮಿಂಚಿನ ದಾಳಿ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ 5 MOSHIN KHAN](http://sportskarnataka.com/wp-content/uploads/2022/05/MOSHIN-KHAN.jpg)
ಮೊಸಿನ್ ಮಾರಕ ದಾಳಿ:
ಲಕ್ನೋ ಸೂಪರ್ ಜೈಂಟ್ಸ್ ಪರ ಮೊಸಿನ್ ಖಾನ್(4/16) ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದರು. ನಿರ್ಣಾಹಕ ಹಂತಗಳಲ್ಲಿ ವಿಕೆಟ್ ಕಬಳಿಸಿದ ಮೊಸಿನ್, ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ಕೆ.ಗೌತಮ್(1/23), ರವಿ ಬಿಷ್ಣೋಯಿ(1/28) ಹಾಗೂ ದುಶ್ಮಂತ ಚಮೀರ(1/44) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
![IPL 2022: ರಾಹುಲ್-ಹೂಡ ಬ್ಯಾಟಿಂಗ್ ಅಬ್ಬರ; ಮೊಸಿನ್ ಮಿಂಚಿನ ದಾಳಿ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ 6 RAHUL AND HOODA](http://sportskarnataka.com/wp-content/uploads/2022/05/RAHUL-AND-HOODA.jpg)
ರಾಹುಲ್-ಹೂಡ ಅಬ್ಬರ:
ಇನ್ನಿಂಗ್ಸ್ ಆರಂಭಿಸಿದ ಲಕ್ನೋ ಪರ ಕ್ವಿಂಟನ್ ಡಿಕಾಕ್(23) ಬಿರುಸಿನ ಆಟವಾಡಿ ಹೊರ ನಡೆದರು. ನಂತರ ಜೊತೆಯಾದ ಕೆ.ಎಲ್.ರಾಹುಲ್ 77 ರನ್(51 ಬಾಲ್, 4 ಬೌಂಡರಿ, 5 ಸಿಕ್ಸ್) ಹಾಗೂ ದೀಪಕ್ ಹೂಡ 52 ರನ್(34 ಬಾಲ್, 6 ಬೌಂಡರಿ, 1 ಸಿಕ್ಸ್) ಬ್ಯಾಟಿಂಗ್ನಲ್ಲಿ ಮಿಂಚಿದರು. ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ, 2ನೇ ವಿಕೆಟ್ಗೆ 95(61) ರನ್ಗಳ ಭರ್ಜರಿ ಜೊತೆಯಾಟದಿಂದ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಮಾರ್ಕಸ್ ಸ್ಟಾಯ್ನಿಸ್(17*), ಕೃನಾಲ್ ಪಾಂಡ್ಯ(9*) ತಂಡದ ಮೊತ್ತವನ್ನು 195ಕ್ಕೆ ತಂದು ನಿಲ್ಲಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಶಾರ್ದೂಲ್ ಥಾಕೂರ್(3/40) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.