ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಟಗಾರರ ಮೆಗಾ ಹರಾಜಿನದ್ದೇ ಮಾತು. ಆದರೆ 5 ಫ್ರಾಂಚೈಸಿಗಳು ನಾಯಕನ ಹುಡುಕಾಟದಲ್ಲಿವೆ. ಹಳೆಯ ಫ್ರಾಂಚೈಸಿಗಳಾದ ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಗೆ ಕ್ಯಾಪ್ಟನ್ಸ್ ಅಗತ್ಯವಿದೆ. ಹೊಸ ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹ್ಮದಾಬಾದ್ಗೂ ನಾಯಕರ ಅವಶ್ಯಕತೆ ಇದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜಿಗೂ ಮುನ್ನ ಹೊಸ ಎರಡು ಹೊಸ ತಂಡಗಳಿಗೆ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡುವ ಅವಕಾಶವಿದೆ. ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿಗಳು ತಮ್ಮ ನಾಯಕರುಗಳನ್ನು ಆಯ್ಕೆ ಮಾಡಿಕೊಂಡಿದೆ ಅನ್ನುವ ಸುದ್ದಿ ಹೊರ ಬಿದ್ದಿದೆ. ಆದರೆ ಈ ಬಗ್ಗೆ ಬಿಸಿಸಿಐ ಆಗಲಿ, ಫ್ರಾಂಚೈಸಿಗಳಾಗಲಿ ಅಧಿಕೃತ ಮಾಹಿತಿ ನೀಡಿಲ್ಲ.
ಲಕ್ನೋ ತಂಡದ ನಾಯಕರಾಗಿ ಕೆಎಲ್ ರಾಹುಲ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಅಹಮದಾಬಾದ್ ಫ್ರಾಂಚೈಸಿ ಶ್ರೇಯಸ್ ಅಯ್ಯರ್ ಅವರನ್ನು ಸಂಪರ್ಕಿಸಿದ್ದು ಅವರೆನ್ನೇ ನಾಯಕರನ್ನಾಗಿ ಮಾಡುವ ಸಾಧ್ಯತೆ ಇದೆ. ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದರೆ, ಶ್ರೇಯಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.
ಲಕ್ನೋ ಫ್ರಾಂಚೈಸಿಯ ಎರಡನೇ ಆಯ್ಕೆ ಲೆಗ್ ಸ್ಪಿನ್ನರ್ ರಶೀದ್ ಖಾನ್ ಎನ್ನಲಾಗಿದೆ. ಮೂರನೇ ಆಟಗಾರನಾಗಿ ಇಶಾನ್ ಕಿಶನ್ ಆಯ್ಕೆಯಾಗಬಹುದು ಎಂದು ಹೇಳಲಾಗಿದೆ. ಅಹಮದಾಬಾದ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ ಮತ್ತು ಡೇವಿಡ್ ವಾರ್ನರ್ ಹಾಗೂ ಕ್ವಿಂಟನ್ ಡಿಕಾಕ್ ಬಗ್ಗೆ ಉತ್ಸುಕವಾಗಿದೆ ಎಂದು ಹೇಳಲಾಗಿದೆ.
ಮತ್ತೊಂದೆಡೆ ಕೆಕೆಆರ್ ಡೇವಿಡ್ ವಾರ್ನರ್ ಅವರನ್ನು ಖರೀದಿ ಮಾಡಿ ನಾಯಕನನ್ನಾಗಿ ಮಾಡುವ ಇರಾದೆಯಲ್ಲಿದೆ. ರಾಯಲ್ ಚಾಲೆಂಜರ್ಸ್ ಕೂಡ ಅದೇ ಯೋಚನೆ ಮಾಡುತ್ತಿದೆ. ಇನ್ನೊಂದೆಡೆ ಪಂಜಾಬ್ ಮಯಾಂಕ್ ಅಗರ್ವಾಲ್ಗೆ ನಾಯಕತ್ವ ನೀಡಬೇಕೋ ಬೇಡ್ವೋ ಅನ್ನೋ ಗೊಂದಲದಲ್ಲಿದೆ. ಒಟ್ಟಿನಲ್ಲಿ ಐಪಿಎಲ್ ಫ್ರಾಂಚೈಸಿಗಳ ಯೋಚನೆಗಳು ಮತ್ತು ಯೋಜನೆಗಳು ವಿಭಿನ್ನವಾಗಿವೆ.