IPL 2022- LSG Vs RR ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ತಾನ ರಾಯಲ್ಸ್ ತಂಡದ ಪ್ಲೇಯಿಂಗ್ ಇಲೆವೆನ್ – Rajasthan Royals Playing XI
ಮೇ 15. 15ನೇ ಆವೃತ್ತಿಯ ಐಪಿಎಲ್ ಟೂರ್ನಿ. ಮ್ಯಾಚ್ ನಂಬರ್ 63. ಸಮಯ ರಾತ್ರಿ 7.30. ಮುಂಬೈನ ಬ್ರಬೋರ್ನ್ ಅಂಗಣ. ರಾಜಸ್ತಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಮುಖಾಮುಖಿ.
ಹೌದು, ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ತಾನ ರಾಯಲ್ಸ್ ಈ ಬಾರಿಯ ಐಪಿಎಲ್ ನಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿದೆ. ಸಂಘಟಿತ ಆಟದ ಮೂಲಕ ಗಮನ ಸೆಳೆದಿರುವ ರಾಜಸ್ತಾನ ರಾಯಲ್ಸ್ ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಆಡಿರುವ 12 ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಗೆದ್ದುಕೊಂಡಿದೆ. ಐದು ಪಂದ್ಯಗಳನ್ನು ಸೋತಿದೆ. 13ನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡ ಎರಡನೇ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಹಿಂದಿನ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಮೂರು ರನ್ ಗಳಿಂದ ಲಕ್ನೋ ವಿರುದ್ಧ ರೋಚಕ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಪ್ಲೇ ಆಫ್ ಎಂಟ್ರಿಯನ್ನು ಖಚಿತ ಪಡಿಸಿಕೊಳ್ಳುವ ಉಮೇದಿನಲ್ಲಿದೆ.
ರಾಜಸ್ತಾನ ರಾಯಲ್ಸ್ ತಂಡದ ಮೆಂಟರ್ ಕುಮಾರ ಸಂಗಕ್ಕರ ಅವರ ಮಾಸ್ಟರ್ ಮೈಂಡ್ ಮತ್ತು ಸಂಜು ಸ್ಯಾಮನ್ ಅವರ ಕೂಲ್ ಕ್ಯಾಪ್ಟನ್ಸಿ ಹಾಗೂ ತಂಡದ ಸಂಘಟಿತ ಆಟದಿಂದಾಗಿ ಯಾರು ಕೂಡ ಊಹೆ ಮಾಡದ ರೀತಿಯಲ್ಲಿ ಈ ಬಾರಿಯ ಟೂರ್ನಿಯಲ್ಲಿ ಬಹುತೇಕ ಪ್ಲೇ ಆಫ್ ಗೆ ಎಂಟ್ರಿಪಡೆದುಕೊಳ್ಳಲಿದೆ.
ರಾಜಸ್ತಾನ ರಾಯಲ್ಸ್ ತಂಡದ ರನ್ ಮೆಷಿನ್ ಜೋಸ್ ಬಟ್ಲರ್ 625 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದಾರೆ. ಅಲ್ಲದೆ ಜೋಸ್ ಬಟ್ಲರ್ ತಂಡದ ರನ್ ಮೇಷಿನ್ ಆಗಿದ್ದಾರೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬ್ಯಾಟ್ ನಿಂದ ಹೆಚ್ಚು ರನ್ ಗಳು ಹರಿದು ಬರುತ್ತಿಲ್ಲ. ಆದ್ರೂ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕಿದೆ. ಒಂದು ವೇಳೆ ಯಶಸ್ವಿ ಜೈಸ್ವಾಲ್ ಜೋಸ್ ಬಟ್ಲರ್ ಜೊತೆ ಇನಿಂಗ್ಸ್ ಆರಂಭಿಸಿದ್ರೆ, ದೇವದತ್ ಪಡಿಕ್ಕಲ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಿದೆ. IPL 2022- LSG Vs RR Rajasthan Royals Playing XI
ಇನ್ನು ನಾಯಕ ಸಂಜು ಸ್ಯಾಮ್ಸನ್ ಬ್ಯಾಟ್ ನಿಂದಲೂ ಕಳೆದ ಬಾರಿಯಂತೆ ಸ್ಪೋಟಕ ರನ್ ಗಳು ಹರಿದು ಬಂದಿಲ್ಲ. ಆದ್ರೂ ಸಮಯೋಚಿತವಾಗಿ ಆಡುತ್ತಿದ್ದಾರೆ. ರಸೇಯ್ ವನ್ ಡೇರ್ ಡುಸೆನ್ ಮತ್ತು ರಿಯಾನ್ ಪರಾಗ್ ಮ್ಯಾಚ್ ಫಿನಿಶಿಂಗ್ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ.
ಇನ್ನು ರಾಜಸ್ತಾನ ರಾಯಲ್ಸ್ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ ಮತ್ತು ಕುಲದೀಪ್ ಸೇನ್ ರಾಜಸ್ತಾನ ರಾಯಲ್ಸ್ ತಂಡದ ವೇಗದ ಅಸ್ತ್ರಗಳು. ಹಾಗೇ ಆರ್. ಅಶ್ವಿನ್ ಮತ್ತು ಯುಜುವೇಂದ್ರ ಚಾಹಲ್ ಸ್ಪಿನ್ ಮಾಂತ್ರಿಕರು. ಚಾಹಲ್ ಈಗಾಗಲೇ 23 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
ಒಟ್ಟಿನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಬೌಲರ್ ಗಳು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಬ್ಯಾಟರ್ ಗಳ ನಡುವಿನ ಹಣಾಹಣಿ ಕ್ರಿಕೆಟ್ ಅಭಿಮಾನಿಗಳ ರೋಚಕತೆಯನ್ನು ಹೆಚ್ಚಿಸಲಿದೆ.
ರಾಜಸ್ತಾನ ರಾಯಲ್ಸ್ ಪ್ಲೇಯಿಂಗ್ ಇಲೆವೆನ್
ಜೋಸ್ ಬಟ್ಲರ್
ಯಶಸ್ವಿ ಜೈಸ್ವಾಲ್
ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್)
ದೇವದತ್ ಪಡಿಕ್ಕಲ್
ರಸೇಯ್ ವಾನ್ ಡೇರ್ ಡುಸೆನ್
ರಿಯಾನ್ ಪರಾಗ್
ಆರ್. ಅಶ್ವಿನ್
ಟ್ರೆಂಟ್ ಬೌಲ್ಟ್
ಪ್ರಸಿದ್ಧ್ ಕೃಷ್ಣ
ಯುಜುವೇಂದ್ರ ಚಾಹಲ್
ಕುಲದೀಪ್ ಸೇನ್