ಆಂಡ್ರೆ ರಸೆಲ್ (49* ಹಾಗೂ 3/22) ಆಲ್ರೌಂಡ್ ಪ್ರದರ್ಶನ ಹಾಗೂ ಇತರೆ ಆಟಗಾರರ ಸಂಘಟಿತ ಆಟದ ನೆರವಿನಿಂದ ಸನ್ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ಕಡಿವಾಣ ಹಾಕಿದ ಕೊಲ್ಕತ್ತಾ ನೈಟ್ರೈಡರ್ಸ್ 54 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್, 20 ಓವರ್ಗಳಲ್ಲಿ 6 ವಿಕೆಟ್ಗೆ 177 ರನ್ಗಳಿಸಿತು. ಈ ಸವಾಲು ಬೆನ್ನತ್ತಿದ ಸನ್ರೈಸರ್ಸ್ ಹೈದ್ರಾಬಾದ್ ಬ್ಯಾಟ್ಸಮನ್ಗಳ ವೈಫಲ್ಯದಿಂದಾಗಿ 20 ಓವರ್ಗಳಲ್ಲಿ 123/8 ರನ್ಗಳಿಸುವ ಮೂಲಕ 54 ರನ್ಗಳ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ ಕೆಕೆಆರ್ ತಂಡದ ಪ್ಲೇ-ಆಫ್ ಕನಸು ಇನ್ನೂ ಜೀವಂತವಾಗಿದ್ದರೆ. ಹೈದ್ರಾಬಾದ್ ಪ್ಲೇ-ಆಫ್ ರೇಸ್ನಿಂದ ಬಹುತೇಕ ಹೊರಬಿದ್ದಂತಾಗಿದೆ.
![IPL 2022: ಆಂಡ್ರೆ ರಸೆಲ್ ಆಲ್ರೌಂಡ್ ಆಟಕ್ಕೆ ಶರಣಾದ ಸನ್ರೈಸರ್ಸ್: ಕೆಕೆಆರ್ ಪ್ಲೇ-ಆಫ್ ಹೋರಾಟ ಜೀವಂತ 3 KKR 1 1](http://sportskarnataka.com/wp-content/uploads/2022/05/KKR-1-1.jpg)
ಕೆಕೆಆರ್ ಬ್ಯಾಟಿಂಗ್ ವೈಫಲ್ಯ:
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್, ಆರಂಭಿಕನಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್(7) ಅವರನ್ನ ಬಹುಬೇಗನೆ ಕಳೆದುಕೊಂಡಿತು. ನಂತರ ಜೊತೆಯಾದ ಅಜಿಂಕ್ಯಾ ರಹಾನೆ(28) ಹಾಗೂ ನಿತೀಶ್ ರಾಣ(26) 2ನೇ ವಿಕೆಟ್ಗೆ 48 ರನ್ಗಳ ಉಪಯುಕ್ತ ಜೊತೆಯಾಟವಾಡಿದರು. ಬಳಿಕ ಕಣಕ್ಕಿಳಿದ ನಾಯಕ ಶ್ರೇಯಸ್ ಅಯ್ಯರ್(15) ಹಾಗೂ ರಿಂಕು ಸಿಂಗ್(5) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
![IPL 2022: ಆಂಡ್ರೆ ರಸೆಲ್ ಆಲ್ರೌಂಡ್ ಆಟಕ್ಕೆ ಶರಣಾದ ಸನ್ರೈಸರ್ಸ್: ಕೆಕೆಆರ್ ಪ್ಲೇ-ಆಫ್ ಹೋರಾಟ ಜೀವಂತ 4 RUSSELL BILLINGS](http://sportskarnataka.com/wp-content/uploads/2022/05/RUSSELL-BILLINGS.jpg)
ರಸೆಲ್-ಬಿಲ್ಲಿಂಗ್ಸ್ ಆಸರೆ:
ಆದರೆ 6ನೇ ವಿಕೆಟ್ಗೆ ಜೊತೆಯಾದ ಸ್ಯಾಮ್ ಬಿಲ್ಲಿಂಗ್ಸ್(34) ಹಾಗೂ ಆಂಡ್ರೆ ರಸೆಲ್(49*) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಹೈದ್ರಾಬಾದ್ ಬೌಲರ್ಗಳ ಮೇಲೆ ಸ್ವಲ್ಪಮಟ್ಟಿನ ಹಿಡಿತ ಸಾಧಿಸಿದ ಈ ಜೋಡಿ 6ನೇ ವಿಕೆಟ್ಗೆ 63 ರನ್ಗಳ ಅದ್ಭುತ ಜೊತೆಯಾಟವಾಡಿ, ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು. ಆದರೆ ಕೊನೆ ಓವರ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಸೆಲ್, 20 ರನ್ಗಳಿಸಿ ತಂಡದ ಮೊತ್ತವನ್ನ 177ಕ್ಕೆ ಏರಿಸಿದರು. ಸನ್ರೈಸರ್ಸ್ ಪರ ಉಮ್ರಾನ್ ಮಲ್ಲಿಕ್ (3/33) ವಿಕೆಟ್ ಪಡೆದು ಮಿಂಚಿದರೆ. ಭುವನೇಶ್ವರ್(1/27), ಜಾನ್ಸನ್(1/30) ಹಾಗೂ ಟಿ.ನಟರಾಜನ್(1/43) ತಲಾ 1 ವಿಕೆಟ್ ಪಡೆದರು.
![IPL 2022: ಆಂಡ್ರೆ ರಸೆಲ್ ಆಲ್ರೌಂಡ್ ಆಟಕ್ಕೆ ಶರಣಾದ ಸನ್ರೈಸರ್ಸ್: ಕೆಕೆಆರ್ ಪ್ಲೇ-ಆಫ್ ಹೋರಾಟ ಜೀವಂತ 5 KANE WILLIAMSON](http://sportskarnataka.com/wp-content/uploads/2022/05/KANE-WILLIAMSON.jpg)
ಮುಗ್ಗರಿಸಿದ ಸನ್ರೈಸರ್ಸ್:
ಕೆಕೆಆರ್ ನೀಡಿದ 178 ರನ್ಗಳ ಟಾರ್ಗೆಟ್ ಬೆನ್ನತ್ತಿದ ಸನ್ರೈಸರ್ಸ್ ಚೇಸಿಂಗ್ನಲ್ಲಿ ಮುಗ್ಗರಿಸಿತು. ಹೈದ್ರಾಬಾದ್ ಪರ ಆರಂಭಿಕನಾಗಿ ಕಣಕ್ಕಿಳಿದ ನಾಯಕ ಕೇನ್ ವಿಲಿಯಂಸನ್(9) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ನಂತರ ಬಂದ ರಾಹುಲ್ ತ್ರಿಪಾಠಿ(9), ನಿಕೋಲಸ್ ಪೂರನ್(2), ವಾಷಿಂಗ್ಟನ್ ಸುಂದರ್(4), ಶಶಾಂಕ್ ಸಿಂಗ್(11), ಜಾನ್ಸನ್(1), ಭುವನೇಶ್ವರ್ ಕುಮಾರ್(6*), ಉಮ್ರಾನ್ ಮಲ್ಲಿಕ್(3*) ನಿರೀಕ್ಷೆಗೆ ತಕ್ಕಂತೆ ಆಡುವಲ್ಲಿ ಎಡವಿದರು. ಪರಿಣಾಮ ಸನ್ರೈಸರ್ಸ್ 123 ರನ್ಗಳಿಗೆ ತನ್ನ ಹೋರಾಟ ಅಂತ್ಯಗೊಳಿಸಿತು.
![IPL 2022: ಆಂಡ್ರೆ ರಸೆಲ್ ಆಲ್ರೌಂಡ್ ಆಟಕ್ಕೆ ಶರಣಾದ ಸನ್ರೈಸರ್ಸ್: ಕೆಕೆಆರ್ ಪ್ಲೇ-ಆಫ್ ಹೋರಾಟ ಜೀವಂತ 6 ABHISHEK SHARMA](http://sportskarnataka.com/wp-content/uploads/2022/05/ABHISHEK-SHARMA.jpg)
ಅಭಿಷೇಕ್-ಮಾರ್ಕ್ರಂ ವ್ಯರ್ಥ ಆಟ:
ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆಯೂ ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮ43(28) ಹಾಗೂ ಐಡೆನ್ ಮಾರ್ಕ್ರಂ 32(25) ಜವಾಬ್ದಾರಿಯ ಆಟವಾಡಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಕೆಕೆಆರ್ ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸಿದ ಇವರಿಬ್ಬರು, ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ನಿರ್ಣಾಯಕ ಹಂತದಲ್ಲಿ ಈ ಇಬ್ಬರು ಬ್ಯಾಟ್ಸ್ಮನ್ಗಳು ಔಟಾಗಿದ್ದು ಎಸ್ಆರ್ಎಚ್ ತಂಡಕ್ಕೆ ಆಘಾತ ನೀಡಿತು.
![IPL 2022: ಆಂಡ್ರೆ ರಸೆಲ್ ಆಲ್ರೌಂಡ್ ಆಟಕ್ಕೆ ಶರಣಾದ ಸನ್ರೈಸರ್ಸ್: ಕೆಕೆಆರ್ ಪ್ಲೇ-ಆಫ್ ಹೋರಾಟ ಜೀವಂತ 7 RUSSELL 1](http://sportskarnataka.com/wp-content/uploads/2022/05/RUSSELL-1.jpg)
ಕೆಕೆಆರ್ ಸಾಂಘಿಕ ಬೌಲಿಂಗ್:
ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಕೆಕೆಆರ್ ಬೌಲರ್ಗಳು, ಸನ್ರೈಸರ್ಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಕೆಕೆಆರ್ ಪರ ಆಂಡ್ರೆ ರಸೆಲ್ 3/22, ಟಿಮ್ ಸೌಥಿ(2/23), ಉಮೇಶ್ ಯಾದವ್(1/19), ಸುನೀಲ್ ನರೈನ್(1/34), ವರುಣ್ ಚಕ್ರವರ್ತಿ(1/25) ಉತ್ತಮ ಬೌಲಿಂಗ್ ದಾಳಿ ನಡೆಸಿದರು.