15ನೇ ಆವೃತ್ತಿಯ ಐಪಿಎಲ್ನ ಬಲಿಷ್ಠ ತಂಡವಾಗಿರುವ ಗುಜರಾತ್ ಟೈಟನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಟೂರ್ನಿಯ 48ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.
ಮುಂಬೈನ ಡಿ.ವೈ. ಪಾಟೀಲ್ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯಕ್ಕಾಗಿ ಎರಡು ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಟೈಟನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇಂದಿನ ಜಿದ್ದಾಜಿದ್ದಿನ ಹಣಾಹಣಿಗಾಗಿ ಎರಡು ತಂಡಗಳು ಸಜ್ಜಾಗಿದ್ದು, ಯಾವುದೇ ಬದಲಾವಣೆ ಇಲ್ಲದೆ ಇಂದು ಕಣಕ್ಕಿಳಿಯುತ್ತಿವೆ.
ಟೂರ್ನಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ 8 ಗೆಲುವು ಹಾಗೂ 1 ಸೋಲು ಕಂಡಿರುವ ಗುಜರಾತ್ ಟೈಟನ್ಸ್ 16 ಟಾಯಿಂಟ್ಸ್ಗಳಿಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಟೂರ್ನಿಯಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಿರುವ ಪಂಜಾಬ್ ಕಿಂಗ್ಸ್, 9 ಪಂದ್ಯಗಳಲ್ಲಿ 4 ಗೆಲುವು, 5 ಸೋಲಿನಿಂದ 8 ಪಾಯಿಂಟ್ಸ್ ಮೂಲಕ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ಉಭಯ ತಂಡಗಳು:
ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್(ನಾಯಕ), ಶಿಖರ್ ಧವನ್, ಜಾನಿ ಬೈರ್ಸ್ಟೋವ್, ಬನುಕಾ ರಾಜಪಕ್ಸ, ಲಿಯಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮ, ರಿಷಿ ಧವನ್, ಕಗೀಸೋ ರಬಾಡ, ರಾಹುಲ್ ಚಹರ್, ಅರ್ಶದೀಪ್ ಸಿಂಗ್, ಸಂದೀಪ್ ಶರ್ಮ.
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಾಹ, ಶುಭ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ಅಲ್ಜರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಲೊಕ್ಕಿ ಫೆರ್ಗುಸನ್, ಮೊಹಮ್ಮದ್ ಶಮಿ.