ಕೆ.ಎಲ್.ರಾಹುಲ್, ತಮ್ಮ ಸ್ಪೋಟಕ ಬ್ಯಾಟಿಂಗ್ನಿಂದ ಕ್ರಿಕೆಟ್ ಅಂಗಳದಲ್ಲಿ ಘರ್ಜಸಿರೋ ಬ್ಯಾಟ್ಸ್ಮನ್. ಐಪಿಎಲ್ನಲ್ಲೂ ತಮ್ಮ ಖದರ್ ತೋರಿಸಿರುವ ಈ ಕನ್ನಡಿಗ ಇದೀಗ ಕಮ್ಬ್ಯಾಕ್ ನಿರೀಕ್ಷೆಯಲ್ಲಿದ್ದಾರೆ.
ಹೊಡಿಬಡಿ ಆಟದಲ್ಲಿ ಅಬ್ಬರದ ಬ್ಯಾಟಿಂಗ್ನಿಂದಲೇ ಮಿಂಚಿರುವ ರಾಹುಲ್, 2022ರ ಐಪಿಎಲ್ನಲ್ಲಿ ನಿರೀಕ್ಷಿತ ಆರಂಭ ಕಾಣಲಿಲ್ಲ. ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಬಾಲ್ನಲ್ಲೇ ಮೊಹಮ್ಮದ್ ಶಮಿ ಬೌಲಿಂಗ್ನಲ್ಲಿ ಔಟಾಗಿದ್ದ ರಾಹುಲ್, ಭಾರೀ ನಿರಾಸೆ ಮೂಡಿಸಿದ್ದರು. ಹೀಗಾಗಿ ಮಾ.31ರಂದು ನಡೆಯುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಎಂದಿನ ಬ್ಯಾಟಿಂಗ್ ಖದರ್ ತೋರಿಸೋ ನಿರೀಕ್ಷೆಯಲ್ಲಿದ್ದಾರೆ.
ಎಲ್ಲರ ಕಣ್ಣು ರಾಹುಲ್ ಮೇಲೆ
ಐಪಿಎಲ್ನ ಎಲ್ಲಾ ತಂಡಗಳ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿರುವ ಕೆ.ಎಲ್.ರಾಹುಲ್, ವಿಶೇಷವಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮದೇ ಪ್ರಾಬಲ್ಯ ಹೊಂದಿದ್ದಾರೆ. 2021ರ ಐಪಿಎಲ್ನಲ್ಲಿ ಸಿಎಸ್ಕೆ ವಿರುದ್ಧ ಬಿರುಸಿನ ಆಟವಾಡಿದ್ದ ರಾಹುಲ್, 47 ಬಾಲ್ಗಳಲ್ಲಿ ಅಜೇಯ 98 ರನ್ಗಳಿಸಿದ್ದರು. ಚೆನ್ನೈ ವಿರುದ್ಧ 2018ರಿಂದ 8 ಪಂದ್ಯಗಳನ್ನು ಆಡಿರುವ ಕನ್ನಡಿಗ ಕೆ.ಎಲ್. ರಾಹುಲ್, 52.14ರ ಸರಾಸರಿಯೊಂದಿಗೆ 365 ರನ್ಗಳಿಸಿದ್ದು, 149.6ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕ ಒಳಗೊಂಡಿದೆ.
ಈ ಬಾರಿಯ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಾರಥ್ಯವಹಿಸಿರುವ ಕೆ.ಎಲ್.ರಾಹುಲ್, ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ಹೀಗಾಗಿ ತಂಡವನ್ನು ಯಶಸ್ಸಿನೊಂದಿಗೆ ಮುನ್ನಡೆಸೋ ಜವಾಬ್ದಾರಿ ಹೊಂದಿರುವ ರಾಹುಲ್, 15ನೇ ಆವೃತ್ತಿಯಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪ್ರಾಬಲ್ಯ ಮುಂದುವರಿಸುತ್ತಾರಾ? ಎಂಬ ನಿರೀಕ್ಷೆ ಹೆಚ್ಚಾಗಿದೆ.