ipl 2022 ಭಾರತದಲ್ಲೇ ನಡೆಯಲಿದೆ ಐಪಿಎಲ್ ಟೂರ್ನಿ – ಬಿಸಿಸಿಐ ವಿಶ್ವಾಸ
ಸದ್ಯ ಭಾರತದಲ್ಲಿ ಕೋವಿಡ್ ಮೂರನೇ ಅಲೆಯ ಹಾವಳಿ ಕಡಿಮೆಯಾಗುತ್ತಿದೆ. ಹೀಗಾಗಿ 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಭಾರತದಲ್ಲೇ ನಡೆಯುವುದು ಬಹುತೇಕ ಖಚಿತವಾಗಿದೆ.
ಈಗಾಗಲೇ ಬಿಸಿಸಿಐ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮಾರ್ಚ್ 21ರಿಂದ ಮೇ ತಿಂಗಳಿನವರೆಗೆ ಆಯೋಜನೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಕಳೆದ 15 ದಿನಗಳ ಹಿಂದೆಯೇ ಬಿಸಿಸಿಐ ಫ್ರಾಂಚೈಸಿ ಮಾಲೀಕರ ಜೊತೆ ಸಭೆ ಕೂಡ ನಡೆಸಿದೆ. ಅಲ್ಲದೆ ಮಹಾರಾಷ್ಟ್ರದಲ್ಲಿ ನಾಲ್ಕು ಮೈದಾನಗಳು ಇರುವುದರಿಂದ ಮಹಾರಾಷ್ಟ್ರದಲ್ಲಿ ಟೂರ್ನಿಯನ್ನು ಆಯೋಜನೆ ಮಾಡುವ ಸಾಧ್ಯತೆ ಇದೆ. ಮುಂಬೈ ನಲ್ಲಿ ಮೂರು ಮೈದಾನಗಳಿದ್ದು, ಪುಣೆಯಲ್ಲಿ ಒಂದು ಮೈದಾನವಿದೆ ಹೀಗಾಗಿ ತಂಡಗಳ ಪ್ರಯಾಣಕ್ಕೆ ಹೆಚ್ಚಿನ ತೊಂದರೆಯಾಗುವುದಿಲ್ಲ.
ipl 2022 – BCCI is confident of organising this year’s IPL in India
ಆದ್ರೆ ಈ ಬಾರಿಯ ಟೂರ್ನಿಯಲ್ಲಿ ಪ್ರೇಕ್ಷಕರಿಗೆ ಪಂದ್ಯ ಮೋಡಲು ಅವಕಾಶ ನೀಡುವುದು ಅನುಮಾನವಾಗಿದೆ. ಪ್ರೇಕ್ಷಕರಿಲ್ಲದೇ ಪಂದ್ಯವನ್ನು ಆಡಬೇಕಾಗುತ್ತದೆ. ಈ ನಡುವೆ, ಶಾಲೆಗಳು, ಮಾಲ್ ಗಳು, ಸಿನಿಮಾ ಥಿಯೇಟರ್ ಗಳು ಓಪನ್ ಆಗಿರುವುದರಿಂದ ಐಪಿಎಲ್ ಪಂದ್ಯ ನೋಡಲು ಪ್ರೇಕ್ಷಕರಿಗೆ ಶೇ 50ರಷ್ಟು ಅನುಮತಿ ನೀಡುವ ಸಾಧ್ಯತೆಗಳಿವೆ.
ಅಂದ ಹಾಗೇ ಈ ಬಾರಿಯ ಐಪಿಎಲ್ ನಲ್ಲಿ ಹತ್ತು ತಂಡಗಳು ಭಾಗವಹಿಸಲಿವೆ. ಒಟ್ಟು 74 ಪಂದ್ಯಗಳು ನಡೆಯಲಿವೆ. ಅಹಮದಾಬಾದ್ ಮತ್ತು ಲಕ್ನೋ ತಂಡಗಳು ಹೊಸದಾಗಿ ಸೇರಿಕೊಂಡ ತಂಡಗಳಾಗಿವೆ.
ಇನ್ನು ಕೋವಿಡ್ ನಿಂದಾಗಿ ಕಳೆದ ಎರಡು ಆವೃತ್ತಿಯ ಟೂರ್ನಿಗಳನ್ನು ಯುಎಇನಲ್ಲಿ ಸಂಘಟಿಸಲಾಗಿತ್ತು. ಕಳೆದ ಬಾರಿ ಐಪಿಎಲ್ ಟೂರ್ನಿ ಭಾರತದಲ್ಲೇ ಮೊದಲು ಆಯೋಜನೆ ಮಾಡಲಾಗಿತ್ತು. ಆದ್ರೆ ಕೋವಿಡ್ ಸೋಂಕು ಹೆಚ್ಚಾದ ಕಾರಣ ಯುಎಇನಲ್ಲಿ ಸಂಘಟಿಸಲಾಗಿತ್ತು.
ಸದ್ಯದ ಸ್ಥಿತಿ ಭಾರತದಲ್ಲೇ ಐಪಿಎಲ್ ಟಊರ್ನಿಯನ್ನು ಆಯೋಜನೆ ಮಾಡಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ. ಆದ್ರೆ ಕೋವಿಡ್ ಸೋಂಕು ಮತ್ತೆ ಹಾವಳಿ ನೀಡಿದ್ರೆ ಭಾರತದಿಂದ ಶಿಫ್ಟ್ ಆಗುವ ಸಾಧ್ಯತೆಗಳಿವೆ. ಹೀಗಾಗಿ ಬಿಸಿಸಿಐ ಪ್ಲಾನ್ ಬಿಯನ್ನು ರೆಡಿ ಮಾಡಿಕೊಳ್ಳುತ್ತಿದೆ. ಮೊದಲ ಆಯ್ಕೆ ಭಾರತ. ನಂತರದ ಆಯ್ಕೆಗಳು ಯುಎಇ ಮತ್ತು ದಕ್ಷಿಣ ಆಫ್ರಿಕಾ. ಯಾಕಂದ್ರೆ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯು ಮಾತುಕತೆ ನಡೆಸಿತ್ತು.