IPL 2022- Axar Patel- ನೂರು ವಿಕೆಟ್ ಕ್ಲಬ್ ಸೇರಿಕೊಂಡ ಅಕ್ಷರ್ ಪಟೇಲ್..!

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್ ರೌಂಡರ್ ಅಕ್ಷರ್ ಪಟೇಲ್ ಐಪಿಎಲ್ ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
ಹೌದು, ಅಕ್ಷರ್ ಪಟೇಲ್ ಐಪಿಎಲ್ ನಲ್ಲಿ ನೂರು ವಿಕೆಟ್ ಪಡೆದ ಎರಡನೇ ಎಡಗೈ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಕ್ಷರ್ ಪಟೇಲ್ ಅವರು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಎರಡು ವಿಕೆಟ್ ಉರುಳಿಸಿದ್ದರು. ಈ ಮೂಲಕ ರವೀಂದ್ರ ಜಡೇಜಾ ನಂತರ ನೂರು ವಿಕೆಟ್ ಪಡೆದ ಎಡಗೈ ಸ್ಪಿನ್ನರ್ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ರವೀಂದ್ರ ಜಡೇಜಾ ಅವರು 132 ವಿಕೆಟ್ ಗಳನ್ನು ಕಬಳಿಸಿದ್ದಾರೆ. IPL 2022- Axar Patel completes 100 IPL wickets, joins Ravindra Jadeja

ಅಕ್ಷರ್ ಪಟೇಲ್ ಅವರು 2013ರಿಂದ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಆಡಿದ ನಂತರ ಅಕ್ಷರ್ ಪಟೇಲ್ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದರು. ಬಳಿಕ 2019ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಇಲ್ಲಿಯವರೆಗೆ ಅಕ್ಷರ್ ಪಟೇಲ್ ಅವರು ಐಪಿಎಲ್ ನಲ್ಲಿ 121 ಪಂದ್ಯಗಳನ್ನು ಆಡಿದ್ದಾರೆ. 1116 ರನ್ ಕೂಡ ಕಲೆ ಹಾಕಿದ್ದಾರೆ.
ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲೂ ಗಮನ ಹರಿಸುವ ಅಕ್ಷರ್ ಪಟೇಲ್ ಹಲವು ಬಾರಿ ತಂಡವನ್ನು ಗೆಲುವಿನ ದಡ ಕೂಡ ಸೇರಿಸಿದ್ದಾರೆ.
ಒಟ್ಟಾರೆಯಾಗಿ ಐಪಿಎಲ್ ನಲ್ಲಿ ನೂರು ವಿಕೆಟ್ ಪಡೆದ 17ನೇ ಆಟಗಾರನಾಗಿ ಹೊರಹೊಮ್ಮಿರುವ ಅಕ್ಷರ್ ಪಟೇಲ್ ಅದ್ಭುತ ಪ್ರತಿಭಾವಂತ ಕ್ರಿಕೆಟಿಗ. ಈಗಾಗಲೇ ಅಕ್ಷರ್ ಪಟೇಲ್ ಟೀಮ್ ಇಂಡಿಯಾದಲ್ಲೂ ಸ್ಥಾನ ಪಡೆದುಕೊಂಡು ಗಮನ ಸೆಳೆಯುತ್ತಿದ್ದಾರೆ.