ipl 2022 ಅರ್ಜುನ್ ತೆಂಡುಲ್ಕರ್ ನನ್ನು ಬಿಟ್ಟು ಕೊಡದ ಮುಂಬೈ ಇಂಡಿಯನ್ಸ್..!
ಸಚಿನ್ ತೆಂಡುಲ್ಕರ್ ಮಗ ಅರ್ಜುನ್ ತೆಂಡುಲ್ಕರ್ ಮತ್ತೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಅರ್ಜುನ್ ತೆಂಡುಲ್ಕರ್ ಅವರನ್ನು ಕೊನೆಯ ಕ್ಷಣದಲ್ಲಿ ಮುಂಬೈ ಇಂಡಿಯನ್ಸ್ ತಂಡ 20 ಲಕ್ಷ ರೂಪಾಯಿ ನೀಡಿ ತನ್ನದಾಗಿಸಿಕೊಂಡಿದೆ.
ಅರ್ಜುನ್ ತೆಂಡುಲ್ಕರ್ ಅವರು ಕಳೆದ ಐಪಿಎಲ್ ನಲ್ಲಿ ಮುಂಬೈ ತಂಡ 20 ಲಕ್ಷ ಮೂಲ ಬೆಲೆಗೆ ಖರೀದಿ ಮಾಡಿತ್ತು. ಆದ್ರೆ ಗಾಯದಿಂದಾಗಿ ಅರ್ಜುನ್ ತೆಂಡುಲ್ಕರ್ ಅವರು ಟೂರ್ನಿಯ ಅರ್ಧದಿಂದ ಹೊರಬಂದಿದ್ದರು. ipl 2022 – Arjun Tendulkar has re-joined Mumbai Indians
ಸದ್ಯ ಮುಂಬೈ ರಣಜಿ ತಂಡದಲ್ಲಿರುವ ಅರ್ಜುನ್ ತೆಂಡುಲ್ಕರ್ ಈ ಬಾರಿಯ ಐಪಿಎಲ್ ನಲ್ಲಿ ಕೊಂಚ ಬೇಡಿಕೆಯನ್ನು ಪಡೆದುಕೊಂಡಿದ್ದರು. ಇದಕ್ಕೆ ಕಾರಣ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ.
ಅಂದ ಹಾಗೇ ಅರ್ಜುನ್ ತೆಂಡುಲ್ಕರ್ ಅವರ ಮೂಲ ಬೆಲೆ 20 ಲಕ್ಷ ರೂಪಾಯಿ ಆಗಿತ್ತು. ಮುಂಬೈ ಇಂಡಿಯನ್ಸ್ ತಂಡ 20 ಲಕ್ಷ ರೂಪಾಯಿ ನೀಡಿ ಖರೀದಿ ಮಾಡುವ ಲೆಕ್ಕಚಾರದಲ್ಲಿತ್ತು. ಆದ್ರೆ ಸಡನ್ ಅಗಿ ಗುಜರಾತ್ ಟೈಟಾನ್ಸ್ 25 ಲಕ್ಷ ಏರಿಕೆ ಮಾಡಿತ್ತು. ಕೊನೆಗೆ ಮುಂಬೈ ಇಂಡಿಯನ್ಸ್ ತಂಡ 30 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ.
ಈ ಬಗ್ಗೆ ಅರ್ಜುನ್ ತೆಂಡುಲ್ಕರ್ ಗೆ ಅಕ್ಕ ಸಾರಾ ತೆಂಡುಲ್ಕರ್ ಅಭಿನಂದನೆ ಸಲ್ಲಿಸಿದ್ದಾರೆ.