ಪ್ರತಿಷ್ಠಿತ ಇಂಟರ್ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ನಲ್ಲಿ ಇಂದು ಆತಿಥೇಯ `ಭಾರತ ಬಲಿಷ್ಠ ಲೆಬನಾನ್ ತಂಡವನ್ನು ಎದುರಿಸಲಿದೆ.
ಭಾರತದ ಮುಖ್ಯ ಕೋಚ್ ಐಗೊರ್ ಸ್ಟಿಮಾಕ್ ಮತ್ತು ಲೆಬನಾನ್ ತಂಡದ ಕೋಚ್ ಅ್ಯಲೆಕ್ಸೆಂಡರ್ ದೀರ್ಘ ಕಾಲದ ಗೆಳೆಯರಾಗಿದ್ದು. ಇಂದು ಇಬ್ಬರಿಗೆ ಪ್ರತಿಷ್ಠೆಯ ಕದನವಾಗಿದೆ.
ಮೊನ್ನೆ ಗುರುವಾರ ಲೆಬನಾನ್ ವಿರುದ್ಧದ ಪಂದ್ಯದಲ್ಲಿ ಚೆಟ್ರಿ ಪಡೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳದೇ ಡ್ರಾ ಮಾಡಿಕೊಂಡಿತ್ತು. ಇಂದಿನ ಪಂದ್ಯದಲ್ಲಿ ಅವಕಾಶವನ್ನು ಕೈಚೆಲ್ಲುವುದಿಲ್ಲ ಎಂದು ಕೋಚ್ ಸ್ಟಿಮಾಕ್ ತಿಳಿಸಿದ್ದಾರೆ.
ಕ್ರೋವಿಷಿಯಾ ಕೋಚ್ ಅ್ಯಲೆಕ್ಸೆಂಡರ್ ಮೂರು ತಂಡಗಳ ವಿರುದ್ಧವೂ ತಂತ್ರ ಫಲ ಕೊಟ್ಟಿದೆ.
2018ರ ಚೊಚ್ಚಲ ಟೂರ್ನಿ ಗೆದ್ದಿದ್ದ ಭಾರತ ಮತ್ತೊಮ್ಮೆ ಪ್ರಶಸ್ತಿ ಗೆಲ್ಲಲು ಹೋರಾಡಲಿದೆ. ಮಂಗೋಲಿಯಾ ವಿರುದ್ಧ ಭಾರತ 2-0 ಗೋಲುಗಳಿಂದ ಗೆದ್ದಿತ್ತು.
ನಂತರ ವನವಾತು ವಿರುದ್ಧ 9 ಬದಲಾವಣೆ ಮಾಡಿ ಯಶಸ್ಸು ಕಂಡಿತ್ತು. ನಂತರ ಲೆಬನಾನ್ ವಿರುದ್ಧ 10 ಬದಲಾವಣೆಗಳನ್ನು ಮಾಡಿ ಕೋಚ್ ಸ್ಟಿಮಾಕ್ ಅಚ್ಚರಿ ನೀಡಿದ್ದರು.