ಟಿ20 ಸರಣಿ ಗೆದ್ದು ಬೀಗಿರುವ ಟೀಮ್ ಇಂಡಿಯಾ ಗುರುವಾರದಿಂದ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡಲಿದೆ. ಲಕ್ನೊದ ವಾಜಪೇಯಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ನಾಯಕ ಶಿಖರ್ ಧವನ್ ನೇತೃತ್ವ ದ ಭಾರತ ತಂಡ ದ.ಆಫ್ರಿಕಾ ತಂಡವನ್ನು ಎದುರಿಸಲಿದೆ. ಶಿಖರ್ ಧವನ್ ನಾಯಕತ್ವದಡಿಯಲ್ಲಿ ಯುವ ಆಟಗಾರರಿಗೆ ವಿಭಿನ್ನ ಅನುಭವ ಸಿಗಲಿದೆ.
ನಾಯಕ ಶಿಖರ್ ಧವನ್ ಅಡಿಯಲ್ಲಿ ಭಾರತ ತಂಡ ಶ್ರೀಲಂಕಾ, ವೆಸ್ಟ್ಇಂಡೀಸ್ ಮತ್ತು ಜಿಂಬಾಬ್ವೆ ವಿರುದ್ಧ ಗೆಲುವು ಕಂಡಿದೆ. ತಂಡದ
ಯುವ ಆಟಗಾರರಾದ ಶುಭಮನ್ ಗಿಲ್, ಸಾಮ್ಸನ್ ಮತ್ತು ಆವೇಶ್ ಖಾನ್ ಚೆನ್ನಾಗಿ ಆಡಿದ್ದಾರೆ.
ಏಕದಿನ ವಿಶ್ವಕಪ್ ದೃಷ್ಟಿಯಿಂದ ತಂಡ ಒಳ್ಳೆಯ ಲಯ ಪಡೆಯಲು ಆಡಲಿದೆ. ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಮುಖೇಶ್ ಕುಮಾರ್, ಶಾಬಾಜ್ ಅಹ್ಮದ್ ತಂಡದಲ್ಲಿದ್ದಾರೆ.
ಇತ್ತ ರಾಂಕಿಂಗ್ ದೃಷ್ಟಿಯಿಂದ ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಸರಣಿ ಮಹತ್ವದ್ದಾಗಿದೆ. ಏಕದಿನ ರಾಂಕಿಂಗ್ನಲ್ಲಿ ದ.ಆಫ್ರಿಕಾ 11ನೇ ಸ್ಥಾನದಲ್ಲಿದ್ದು ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯುವುದು ಬಹಳ ಮುಖ್ಯವಾಗಿದೆ.
ಈ ಸರಣಿ ಮೂಲಕ ದಕ್ಷಿಣ ಆಫ್ರಿಕಾ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯಬೇಕಿದ್ದಲ್ಲಿ ಹೆಚ್ಚು ಹೆಚ್ಚು ಪಂದ್ಯಗಳನ್ನು ಗೆಲ್ಲುತ್ತಾ ಸಾಗಬೇಕು. ಈ ಸರಣಿಗೆ ಹೊಸ ಆಟಗಾರರು ತಂಡಕ್ಕೆ ಹೊಸ ಶಕ್ತಿ ತುಂಬಲಿದ್ದಾರೆ ಎಂದು ನಾಯಕ ಟೆಂಬಾ ಬಾವುಮೆ ಹೇಳಿದ್ದಾರೆ.
ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಭಾರತ : ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ರಜತ್ ಪಾಟಿದಾರ್, ಇಶನ್ ಕಿಶನ್, ಸಂಜು ಸ್ಯಾಮ್ಸ್ನ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಕುಲದೀಪ್ ಯಾದವ್, ಆವೇಶ್ ಖಾನ್, ಮೊಹ್ಮದ್ ಸೀರಜ್.
ದ.ಆಫ್ರಿಕಾ: ಜಾನೆಮಾನ್ ಮಲನ್, ಕ್ವಿಂಟಾನ್ ಡಿಕಾಕ್, ಟೆಂಬಾ ಬಾವುಮೆ, ಏಡಿನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಫೆಹ್ಲುಕುವಾಯೊ, ಪ್ರಿಟೋರಿಯಸ್, ಪಾರ್ನೆಲ್, ಕೇಶವ್ ಮಹರಾಜ್, ರಬಾಡ, ಶಂಶಿ.
ಸಮಯ : 1 ಗಂಟೆ ಮಧ್ಯಾಹ್ನ
ನೇರ ಪ್ರಸಾರ : ಸ್ಟಾರ್ ಸೋರ್ಟ್ಸ್