ಆತಿಥೇಯ ಭಾರತ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟಗೊಂಡಿದ್ದು ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ.
ತಾಯಿಯ ನಿಧನದ ಹಿನ್ನೆಲೆಯಲ್ಲಿ ಪ್ಯಾಟ್ ಕಮಿನ್ಸ್ ತವರಿನಲ್ಲೆ ಉಳಿಯಲು ನಿರ್ಧರಿಸಿದ್ದು ಮುಂಬರುವ ಏಕದಿನ ಸರಣಿ ಆಡುತ್ತಿಲ್ಲ. ಸ್ಟೀವ್ ಸ್ಮಿತ್ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಗಾಯದ ಸಮಸ್ಯೆಯಿಂದ ಹೊರ ಬಂದಿದ್ದು ತಂಡಕ್ಕೆ ಮರಳಿದ್ದಾರೆ.
ಮಾ.17ರಂದು ಮುಂಬೈನಲ್ಲಿ ಮೊದಲ ಏಕದಿನ ಪಂದ್ಯ, ಮಾ.19 ವೈಜಾಗ್ನಲ್ಲಿ ಎರಡನೆ ಏಕದಿನ ಪಂದ್ಯ ಹಾಗೂ ಮಾ.22ರಂದು ಮೂರನೆ ಮತ್ತು ಅಂತಿಮ ಏಕದಿನ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ.
ಆಸ್ಟ್ರೇಲಿಯಾ ತಂಡ:ಸ್ಟೀವ್ ಸ್ಮಿತ್ (ನಾಯಕ), ಸಿಯಾನ್ ಅಬೋಟ್, ಆಸ್ಟನ್ ಅಗಾರ್, ಆ್ಯಲೆಕ್ಸ್ ಕ್ಯಾರಿ, ನಥೇನ್ ಎಲ್ಲಿಸ್, ಕ್ಯಾಮರೊನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲಾಬುಶೇನ್, ಮಿಚೆಲ್ ಮಾರ್ಷ್, ಗ್ಲೇನ್ ಮ್ಯಾಕ್ಸ್ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಡೇವಿಡ್ ವಾರ್ನರ್, ಆ್ಯಡಮ್ ಜಂಪಾ.