ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೆ ಟಿ20 ಪಂದ್ಯ ಇಂದು ನಡೆಯಲಿದೆ.
ಮೌಂಟ್ ಮೌಂಗನೂಯಿಯ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಭೀತಿ ಇದೆ. ಮೊನ್ನೆ ವೆಲ್ಲಿಂಗ್ಟನ್ನಲ್ಲಿ ನಡೆಯಬೇಕಿದ್ದ ಮೊದಲ ಟಿ20 ಕದನ ಮಳೆಗೆ ಆಹುತಿಯಾಗಿತ್ತು.
ಎರಡೂ ತಂಡಗಳಿಗೂ ಪ್ರಯೋಗ ನಡೆಸಲು ಈ ಸರಣಿ ನೆರವಾಗಲಿದೆ. ಕದನಕ್ಕೆ ಟಿಕೆಟ್ಗಳು ಭಾರೀ ಪ್ರಮಾಣದಲ್ಲಿ ಮಾರಾಟವಾಗಿವೆ.
ಈ ದೊಡ್ಡ ಮೈದಾನದಲ್ಲಿ ಹೆಚ್ಚು ರನ್ಗಳನ್ನು ನಿರೀಕ್ಷಿಸಲಾಗಿದೆ.
ಮೌಂಟ್ ಮೌಂಗನೂಯಿಗೆ ಬಂದಿಳಿದ ಟೀಮ್ ಇಂಡಿಯಾಗೆ ಇಲ್ಲಿನ ಕಲಾವಿದರು ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.