ಭಾರತ ಮತ್ತು ಆತಿಥೇಯ ನ್ಯೂಜಿಲೆಂಡ್ ನಡುವಿನ ಮೂರನೆ ಏಕದಿನ ಪಂದ್ಯ ಮಳೆಗೆ ಬಲಿಯಾಯಿತು. ನ್ಯೂಜಿಲೆಂಡ್ ತಂಡ 1-0 ಅಂತರದಿಂದ ಸರಣಿ ಗೆದ್ದುಕೊಂಡಿತು.
ಇಲ್ಲಿನ ಒವೆಲ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 47.3 ಓವರ್ಗಳಲ್ಲಿ 219 ರನ್ಗಳಿಗೆ ಆಲೌಟ್ ಆಯಿತು.
ನ್ಯೂಜಿಲೆಂಡ್ ತಂಡ 18 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 104 ರನ್ ಕಲೆ ಹಾಕಿತು. ಡ್ಯಾರಿಲ್ ಮಿಚೆಲ್ ಹಾಗೂ ಆ್ಯಡಮ್ ಮಿಲ್ನೆ ದಾಳಿಗೆ ಧವನ್ ಪಡೆ ತತ್ತರಿಸಿತು. ವಾಷಿಂಗ್ಟನ್ ಸುಂದರ್ 51 ರನ್, ಶ್ರೇಯಸ್ ಅಯ್ಯರ್ 49 ರನ್ ಹೊಡೆದರು.
ನ್ಯೂಜಿಲೆಂಡ್ ತಂಡ 18 ಓವರ್ಗಳಲ್ಲಿ 104 ರನ್ಗಳಿಸಿದ್ದಾಗ ಮಳೆ ಅಡ್ಡಿಯಾಯಿತು. ನಂತರವೂ ಮಳೆ ಬಿಡದ ಕಾರಣ ಪಂದ್ಯವನ್ನು ರದ್ದು ಮಾಡಲಾಯಿತು. ಟಾಮ್ ಲಾಥಮ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.