ಕೊನೆ ನಿಮಿಷದಲ್ಲಿ ಗೋಲು ಹೊಡೆದ ಭಾರತ ಪುರುಷರ ಹಾಕಿ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ 4-3 ಗೋಲುಗಳಿಂದ ರೋಚಕ ಗೆಲುವು ದಾಖಲಿಸಿದೆ. 13 ವರ್ಷಗಳ ಬಳಿಕ ಟೆಸ್ಟ್‍ನಲ್ಲಿ ಆಸಿಸ್ ವಿರುದ್ಧ ಮೊದಲ ಗೆಲುವು ದಾಖಲಿಸಿದೆ.
ಈ ಗೆಲುವಿನೊಂದಿಗೆ ಭಾರತ ಹಾಕಿ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನ ಜೀವಂತವಾಗಿರಿಸಿಕೊಂಡಿದೆ. ಆಸ್ಟ್ರೇಲಿಯಾ 2-1 ಅಂಕಗಳಿಂದ ಮುನ್ನಡೆ ಸಾಧಿಸಿದೆ.
ಭಾರತ ಪರ ನಾಯಕ ಹರ್ಮನ್‍ಪ್ರೀತ್ ಸಿಂಗ್ (12ನೇ ನಿಮಿಷ), ಅಭಿಷೇಕ್ (47), ಶಂಶೀರ್ ಸಿಂಗ್ (57), ಆಕಾಶ್‍ದೀಪ್ (60) ಗೋಲುಗಳನ್ನು ಹೊಡೆದರು.
ಆಸ್ಟ್ರೇಲಿಯಾ ಪರ ಜಾಕ್‍ವೆಲ್ಚ್ (25ನೇ ನಿಮಿಷ), ನಾಯಕ ಅರ್ರಾನ್ ಜಾಲೆವಿಸ್ಕಿ (32ನೇ ನಿಮಿ), ನಾಥನ್ ಎರ್ಮಸ್ (59ನೇ ನಿಮಿಷ) ಗೋಲುಗಳನ್ನು ದಾಖಲಿಸಿದರು.
ಆಸ್ಟ್ರೇಲಿಯಾ ವಿರುದ್ಧದ ಗೆಲುವು ಅಪರೂಪದ್ದಾಗಿದ್ದು ಕಳೆದ ವರ್ಷ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ 7-0 ಗೋಲುಗಳಿಂದ ಮಣಿಸಲಾಗಿತ್ತು.