ಆಸ್ಟ್ರೇಲಿಯನ್ ಓಪನ್ ಮಿಕ್ಸೆಡ್ ಡಬಲ್ಸ್ – ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾನಿಯಾ – ರಾಜೀವ್ ರಾಮ್
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಿಕ್ಸೆಡ್ ಡಬಲ್ಸ್ ನಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕಾದ ರಾಜೀವ್ ರಾಮ್ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತು ರಾಜೀವ್ ರಾಮ್ ಅವರು ಎಲೆನ್ ಪೆರೇಝ್ ಮತ್ತು ಮ್ಯಾಟ್ವೆ ಮಿಡೆಲ್ ಕೂಪ್ ಅವರನ್ನು ಸೋಲಿಸಿದ್ರು.
ಟೂರ್ನಿಯಲ್ಲಿ ಶ್ರೇಯಾಂಕವಿಲ್ಲದೆ ಕಣಕ್ಕಿಳಿದಿದ್ದ ಸಾನಿಯಾ ಮಿರ್ಜಾ ಮತ್ತು ರಾಜೀವ್ ರಾಮ್ ಅವರು ಒಂದು ಗಂಟೆ 27 ನಿಮಿಷಗಳ ಹೋರಾಟದಲ್ಲಿ 7-6, 6-4ರಿಂದ ಆಸ್ಟ್ರೇಲಿಯಾದ ಎಲೆನ್ ಪರೇಝ್ ಮತ್ತು ಡಚ್ ನ ಮ್ಯಾಟ್ವಿ ಮಿಡೆಲ್ ಕೂಪ್ ಅವರನ್ನು ಪರಾಭವಗೊಳಿಸಿದ್ರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತು ರಾಜೀವ್ ರಾಮ್ ಅವರು ಸ್ಯಾಮ್ ಸ್ಟೋಸುರ್ ಮತ್ತು ಮ್ಯಾಥ್ಯು ಎಡೆನ್ ಅಥವಾ ಜಾಮಿ ಫೊರ್ಲಿಸ್ ಮತ್ತು ಜೇಸನ್ ಕುಬ್ಲೇರ್ ಅವರನ್ನು ಎದುರಿಲಿಸದ್ದಾರೆ.
ಈ ಹಿಂದೆ ಸಾನಿಯಾ ಮಿರ್ಜಾ ಡಬಲ್ಸ್ ನಲ್ಲಿ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದ್ದರು. ಅಲ್ಲದೆ ವೃತ್ತಿ ಪರ ಟೆನಿಸ್ ಬದುಕಿಗೆ 2022ರ ಅಂತ್ಯಕ್ಕೆ ವಿದಾಯ ಹೇಳುವುದಾಗಿಯೂ ಹೇಳಿದ್ದರು.