ಭಾರತದ ಕ್ರಿಕೆಟ್ ತಂಡಕ್ಕೆ ಬಿಡುವಿಲ್ಲದಷ್ಟು ಸರಣಿಗಳು ಆಯೋಜನೆಯಾಗಿವೆ. ಬೆನ್ನು ಬೆನ್ನಿಗಿರುವ ಸರಣಿಗಳು ಆಟಗಾರರ ಫಿಟ್ನೆಸ್ ಟೆಸ್ಟ್ ಕೂಡ ಮಾಡುತ್ತಿವೆ. ಈ ಮಧ್ಯೆ ಭಾರತ ಮತ್ತೊಂದು ಸರಣಿ ಆಡಲಿದೆ. ಜಗತ್ತಿನ ದೊಡ್ಡಣ್ಣ ಅಮೆರಿಕದಲ್ಲಿ ಟೀಮ್ ಇಂಡಿಯಾ ಟಿ20 ಸರಣಿ ಆಡುವ ಸಾಧ್ಯತೆ ಇದೆ.
ಭಾರತ ತಂಡ ಈ ವರ್ಷ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ವೆಸ್ಟ್ ಇಂಡೀಸ್ ಅಮೆರಿಕಾದಲ್ಲಿ ಸರಣಿಯ ಕೆಲವು ಪಂದ್ಯಗಳನ್ನು ಆಯೋಜಿಸುವ ಯೋಚನೆ ಮಾಡುತ್ತಿದೆ. ಜುಲೈ ಮೂರನೇ ವಾರದಲ್ಲಿ ಸರಣಿ ಆರಂಭವಾಗಲಿದ್ದು, ಆಗಸ್ಟ್ ವರೆಗೆ ನಡೆಯಲಿದೆ. ಟೀಮ್ ಇಂಡಿಯಾ ಮತ್ತು ವೆಸ್ಟ್ಇಂಡೀಸ್ ಲಾಡರ್ಹಿಲ್ ಮತ್ತು ಫ್ಲೋರಿಡಾದಲ್ಲಿ ಪಂದ್ಯ ಆಡುವ ಸಾಧ್ಯತೆ ಇದೆ.
ಟೀಮ್ ಇಂಡಿಯಾ 2016 ಮತ್ತು 2019 ರಲ್ಲಿ ಅಮೆರಿಕದಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದೆ. ಭಾರತ ತಂಡ ಮೊದಲು ಇಂಗ್ಲೆಂಡ್ನಲ್ಲಿ ಒಂದು ಟೆಸ್ಟ್ ಮತ್ತು ಆರು ಸೀಮಿತ ಓವರ್ಗಳ ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ತಂಡ ವೆಸ್ಟ್ ಇಂಡೀಸ್ಗೆ ತೆರಳಲಿದೆ.