ಟಿ20 ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ವಿಶ್ವಚಾಂಪಿಯನ್. ಇಂಗ್ಲೆಂಡ್ ಸ್ಪೋಟಕ ಆಟಗಾರರ ದಂಡನ್ನೇ ಹೊಂದಿರುವ ತಂಡ. ವೆಸ್ಟ್ಇಂಡೀಸ್ ಚುಟುಕು ಕ್ರಿಕೆಟ್ನ ಎಕ್ಸ್ಪರ್ಟ್ಗಳು. ಆದರೆ ಇದ್ಯಾವ ತಂಡಗಳು ಕೂಡ ಐಸಿಸಿ ಶ್ರೇಯಾಂಕದಲ್ಲಿ ನಂಬರ್ ವನ್ ಸ್ಥಾನದಲ್ಲಿಲ್ಲ. ಬದಲಾಗಿ ಭಾರತ ಟಿ20 ಕ್ರಿಕೆಟ್ನ ಅಗ್ರ ತಂಡವಾಗಿ ಹೊಸ ದಾಖಲೆ ಬರೆದಿದೆ.
ವೆಸ್ಟ್ಇಂಡೀಸ್ ವಿರುದ್ಧದ ಕೊನೆಯ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಐಸಿಸಿ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿತ್ತು. ಇಂಗ್ಲೆಂಡ್ ಮೊದಲ ಸ್ಥಾನದಲ್ಲಿತ್ತು. ಆದರೆ ವೆಸ್ಟ್ಇಂಡೀಸ್ ವಿರುದ್ಧದ ಕೊನೆಯ ಪಂದ್ಯದ ಗೆಲುವು ಭಾರತವನ್ನು ನಂಬರ್ ವನ್ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಇಂಗ್ಲೆಂಡ್ನ್ನು 2ನೇ ಸ್ಥಾನಕ್ಕೆ ಜಾರಿಸಿದೆ.
ಟಿ20 ಕ್ರಿಕೆಟ್ನಲ್ಲಿ ಭಾರತ ಮೊದಲ ಬಾರಿಗೆ ಈ ಸಾಧನೆ ಮಾಡಿದೆ. ರೋಹಿತ್ ಶರ್ಮಾ ಟಿ20 ತಂಡವನ್ನು ನಂಬರ್ ವನ್ ಮಾಡಿದ ಮೊದಲ ನಾಯಕನಾಗಿ ದಾಖಲೆ ಬರೆದಿದ್ದಾರೆ. ವಿಂಡೀಸ್ ವಿರುದ್ಧದ ಟಿ20 ಸರಣಿಯನ್ನು ಭಾರತ 3-0ಯಿಂದ ಕ್ಲೀನ್ ಸ್ವೀಪ್ ಮಾಡಿ ಗೆದ್ದುಕೊಂಡಿತ್ತು.