India -Zimbabwe ODI series – ಭಾರತ -ಜಿಂಬಾಬ್ವೆ ಏಕದಿನ ಸರಣಿಯ ವೇಳಾಪಟ್ಟಿ ಪ್ರಕಟ..!

ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಏಕದಿನ ಪಂದ್ಯಗಳ ಸರಣಿ ನಡೆಯುವುದು ಖಚಿತವಾಗಿದೆ.
ಜಿಂಬಾಬ್ವೆ ಕ್ರಿಕೆಟ್ ಮಂಡಳಿಯು ಇಂದು ಅಧಿಕೃತವಾಗಿ ಭಾರತ ವಿರುದ್ಧದ ಏಕದಿನ ಸರಣಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸುಮಾರು ಏಳು ವರ್ಷಗಳ ನಂತರ ಭಾರತ ಜಿಂಬಾಬ್ವೆ ಪ್ರವಾಸ ಕೈಗೊಳ್ಳುತ್ತಿದೆ.
ಈ ಸರಣಿಯ ಮೊದಲ ಪಂದ್ಯ ಆಗಸ್ಟ್ 18ರಂದು ನಡೆದ್ರೆ, ಎರಡನೇ ಏಕದಿನ ಪಂದ್ಯ ಆಗಸ್ಟ್ 20ರಂದು ಮತ್ತು ಅಂತಿಮ ಪಂದ್ಯ ಆಗಸ್ಟ್ 22ರಂದು ನಡೆಯಲಿದೆ. ಸರಣಿಯು ಐಸಿಸಿ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಮಾನ್ಯತೆಯನ್ನು ಪಡೆದುಕೊಂಡಿದೆ.

ಹರಾರೆಯಲ್ಲಿ ನಡೆಯಲಿರುವ ಈ ಸರಣಿಗೆ ಟೀಮ್ ಇಂಡಿಯಾದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಏಷ್ಯಾಕಪ್ ಟೂರ್ನಿಯು ನಡೆಯುತ್ತಿರುವುದರಿಂದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಜಾಸ್ತಿ ಇದೆ.
2016ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಯಂಗ್ ಟೀಮ್ ಇಂಡಿಯಾ ಜಿಂಬಾಬ್ವೆ ನೆಲದಲ್ಲಿ ಏಕದಿನ ಸರಣಿಯನ್ನು 3-0ಯಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಹಾಗೇ ಟಿ-20 ಸರಣಿಯನ್ನು 2-1ರಿಂದ ಗೆದ್ದುಕೊಂಡಿತ್ತು.
ಇನ್ನೊಂದೆಡೆ ಜಿಂಬಾಬ್ವೆ ತಂಡ ಈ ಬಾರಿಯ ಐಸಿಸಿ ಟಿ-20 ವಿಶ್ವಕಪ್ ನಲ್ಲೂ ಅರ್ಹತೆಯನ್ನು ಪಡೆದುಕೊಂಡಿದೆ. ಅರ್ಹತಾ ಸುತ್ತಿನಲ್ಲಿ ಜಿಂಬಾಬ್ವೆ ಪ್ರಶಸ್ತಿ ಗೆದ್ದುಕೊಂಡು ನೇರ ಪ್ರವೇಶವನ್ನು ಪಡೆದುಕೊಂಡಿದೆ.