ಟಾಸ್ ಗೆದ್ದ ರೋಹಿತ್ ಶರ್ಮಾ ಮೊದಲು ವೆಸ್ಟ್ಇಂಡೀಸ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದರು. ಭುವನೇಶ್ವರ್ ಕುಮಾರ್ ಮೊದಲ ಓವರ್ನಲ್ಲೇ ಬ್ರೆಂಡನ್ ಕಿಂಗ್ (4)ರನ್ನು ಪವೆಲಿಯನ್ಗೆ ಕಳಹಿಸಿದರು. ಕೈಲ್ ಮೇಯರ್ಸ್ ಮತ್ತು ನಿಕೊಲಸ್ ಪೂರನ್ ಪವರ್ ಪ್ಲೇನಲ್ಲಿ ಅಬ್ಬರಿಸಿದರು.
ಈ ಹಂತದಲ್ಲಿ ರೋಹಿತ್ ಸ್ಪಿನ್ನರ್ಗಳನ್ನು ದಾಳಿಗಿಳಿಸಿದರು. ಚಹಲ್ 31 ರನ್ಗಳಿಸಿದ್ದ ಮೇಯರ್ಸ್ ವಿಕೆಟ್ ಕಬಳಿಸಿ ಬ್ರೇಕ್ ನೀಡಿದರು. ಮೊದಲ ಪಂದ್ಯ ಆಡಿದ ರವಿ ಬಿಷ್ಣೋಯಿ ಗೂಗ್ಲಿ ಮೇಲೆ ಗೂಗ್ಲಿ ಹಾಕಿದರು. ಅಷ್ಟೇ ಅಲ್ಲ ರೋಸ್ಟನ್ ಚೇಸ್ (4) ಮತ್ತು ರೋವ್ ಮನ್ ಪೊವಲ್ (2) ವಿಕೆಟ್ ಪಡೆದು ವಿಂಡೀಸ್ ಆಟಕ್ಕೆ ಕಡಿವಾಣ ಹಾಕಿದರು. ಅಕಿಲ್ ಹೊಸೈನ್ ದೀಪಕ್ ಚಹರ್ಗೆ ವಿಕೆಟ್ ಒಪ್ಪಿಸಿದರು.
ಈ ಮಧ್ಯೆ ನಿಕೊಲಸ್ ಪೂರನ್ 5 ಸಿಕ್ಸರ್ ಮತ್ತು 4 ಫೋರ್ಗಳ ಮೂಲಕ ಅಬ್ಬರಿಸುತ್ತಾ ಸಾಗಿದರು. 61 ರನ್ಗಳಿಸಿದ್ದ ಪೂರನ್ ಹರ್ಷಲ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. ಕೈರನ್ ಪೊಲಾರ್ಡ್ ಅಜೇಯ 24 ರನ್ಗಳಿಸಿದರು. ಒಡಿನ್ ಸ್ಮಿತ್ ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ಪಟೇಲ್ಗೆ ವಿಕೆಟ್ ಒಪ್ಪಿಸಿದರು. 20 ಓವರುಗಳಲ್ಲಿ ವಿಂಡೀಸ್ 7 ವಿಕೆಟ್ ಕಳೆದುಕೊಂಡು 157 ರನ್ಗಳಿಸಿತ್ತು.
ಚೇಸಿಂಗ್ ಆರಂಭಿಸಿದ ಭಾರತಕ್ಕೆ ರೋಹಿತ್ ಶರ್ಮಾ ಮತ್ತು ಇಶನ್ ಕಿಶನ್ ಬಿರುಗಾಳಿ ಆರಂಭ ತಂದುಕೊಟ್ಟರು. 64 ರನ್ಗಳ ಮೊದಲ ವಿಕೆಟ್ ಜೊತೆಯಾಟ ಬಂತು. ರೋಹಿತ್ ಕೇವಲ 19 ಎಸೆತಗಳಲ್ಲಿ 4 ಫೋರ್ ಮತ್ತು 3 ಸಿಕ್ಸರ್ ನೆರವಿನಿಂದ 40 ರನ್ಗಳಿಸಿ ನಿರ್ಗಮಿಸಿದರು. ಇಶನ್ ಕಿಶನ್ 35 ರನ್ಗಳಿಸಿ ಚೇಸ್ಗೆ 2ನೇ ವಿಕೆಟ್ ಒಪ್ಪಿಸಿದರು.
ವಿರಾಟ್ ಕೊಹ್ಲಿ (17) ಮತ್ತು ರಿಷಬ್ ಪಂತ್ (8) ವಿಕೆಟ್ ಬೇಗನೆ ಕಳೆದುಕೊಂಡಿದ್ದರಿಂದ ಕೊಂಚ ಗಲಿಬಿಲಿಗೊಂಡಿತ್ತು. ಆದರೆ ಸೂರ್ಯ ಕುಮಾರ್ ಯಾದವ್ ಮತ್ತು ವೆಂಕಟೇಶ್ ಅಯ್ಯರ್ 48 ರನ್ಗಳ ಅಜೇಯ ಜೊತೆಯಾಟ ಆಡಿ ತಂಡವನ್ನು ಗೆಲ್ಲಿಸಿದರು. ಸೂರ್ಯಕುಮಾರ್ 18 ಎಸೆತಗಳಲ್ಲಿ 5 ಫೋರ್ ತಮ್ತು 1 ಸಿಕ್ಸರ್ ನೆರವಿನಿಂದ ಅಜೇಯ 34 ರನ್ ಮತ್ತು ವೆಂಕಟೇಶ್ ಅಯ್ಯರ್ 123 ಎಸೆತಗಳಲ್ಲಿ 2 ಫೋರ್ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 24 ರನ್ಗಳಿಸಿದರು. ಭಾರತ 18.5 ಓವರುಗಳಲ್ಲಿ ಗುರಿ ತಲುಪಿ 3ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಮೊದಲ ಪಂದ್ಯ ಆಡಿದ ರವಿ ಬಿಷ್ಣೋಯಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.