ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಸಿದ್ಧವಾಗುತ್ತಿದೆ. ಸರಣಿಯಲ್ಲಿ 3 ಏಕದಿನ ಪಂದ್ಯಗಳು ಮತ್ತು 3 ಟಿ 20 ಪಂದ್ಯಗಳು ನಡೆಯಲಿದೆ. ಏಕದಿನ ಸರಣಿ ಒಂದು ಮೈದಾನದಲ್ಲಿ ನಡೆದರೆ, ಟಿ20 ಸರಣಿ ಇನ್ನೊಂದು ಮೈದಾನದಲ್ಲಿ ನಡೆಯಲಿದೆ.
ಏಕದಿನ ಸರಣಿ ಫೆಬ್ರವರಿ 6 ರಂದು ಆರಂಭವಾಗಲಿದೆ. ಫೆಬ್ರವರಿ 9 ರಂದು 2ನೇ ಹಾಗೂ ಫೆಬ್ರವರಿ 11 ರಂದು ಕೊನೆಯ 2 ಏಕದಿನ ಪಂದ್ಯಗಳು ನಡೆಯಲಿವೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಏಕದಿನ ಸರಣಿಯ ಎಲ್ಲಾ ಪಂದ್ಯಗಳು ನಡೆಯಲಿವೆ. ಪಂದ್ಯ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ.
ಟಿ20 ಸರಣಿಯಲ್ಲಿ 3 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಫೆಬ್ರವರಿ 16 ರಂದು ನಡೆದರೆ, ಫೆಬ್ರವರಿ 18 ಮತ್ತು 20 ರಂದು ಇನ್ನೆರಡು ಪಂದ್ಯಗಳು ನಡೆಯಲಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಟಿ20 ಪಂದ್ಯಗಳು ನಡೆಯಲಿವೆ. ಚುಟುಕು ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.