Womens Asia Cup ಪಾಕ್ ವಿರುದ್ಧ ರೋಚಕ ಜಯ-ಥಾಯ್ ಲ್ಯಾಂಡ್
ಓಪನರ್ ನಟ್ಠಾಕಾನ್ ಚಾಂತಮ್ ಅವರ ಅರ್ಧ ಶತಕದ ನೆರೆವಿನಿಂದ ಥಾಯಲ್ಯಾಂಡ್ ವನಿತೆಯರ ತಂಡ ಪಾಕಿಸ್ತಾನವನ್ನು ರೋಚಕವಾಗಿ ಸೋಲಿಸಿ ಅಚ್ಚರಿ ನೀಡಿದೆ.
ಬಾಂಗ್ಲಾದೇಶದ ಸಿಲೆಟ್ ನಲ್ಲಿ ನಡೆದ ಏಷ್ಯಾಕಪ್ ನ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿತು. ಥಾಯ್ ಲ್ಯಾಂಡ್ ತಂಡ 19.5 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿತು.
117 ರನ್ ಗುರಿ ಬೆನ್ನತ್ತಿದ ಥಾಯ್ ಲ್ಯಾಂಡ್ ನನ್ನಪತ್ ಕೊಂಚರೊಯೆಂಕೈ ಹಾಗೂ ನಟ್ಠಾಕಾನ್ ಚಾಂತಮ್ ಮೊದಲ ವಿಕೆಟ್ಗೆ 40 ರನ್ ಸೇರಿಸಿದರು. ನಾಯಕಿ ನುರುಮುಲ್ ಚೈವಾಯ್ 17 ರನ್ ಗಳಿಸಿದರು.
ಕೊನೆಯ ಓವರ್ ನಲ್ಲಿ ಥಾಯ್ ಲ್ಯಾಂಡ್ಗೆ ಗೆಲ್ಲಲು 10 ರನ್ ಬೇಕಿತ್ತು. ಡೈನಾ ಬೈಗ್ ಎರಡನೆ ಎಸೆತದಲ್ಲಿ ಬೌಂಡರಿ ಹೊಡೆದು ಪಂದ್ಯಕ್ಕೆ ತಿರುವು ನೀಡಿದರು. ಒಂದು ಎಸೆತ ಬಾಕಿ ಇರುವಂತೆ ಥಾಯ್ ಲ್ಯಾಂಡ್ ಗೆಲುವಿನ ದಡ ಸೇರಿತು.
ಇದಕ್ಕೂ ಮುನ್ನ ಪಾಕ್ ಪರ ಮುನಿಬಾ ಅಲಿ 15, ಸದ್ರಾ ಅಮೆನ್ 56, ನೀದಾ ದಾರ್ 12, ಅಲಿಯಾ ರಿಯಾಜ್ 10 ರನ್ ಗಳಿಸಿದರು. ನಟ್ಠಾಕಾನ್ ಚಾಂತಮ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.