ಮುಂಬೈ ಟೆಸ್ಟ್ನ ಮೊದಲ ದಿನ ಆರಂಭವಾಗಿದ್ದೇ ಮಧ್ಯಾಹ್ನದ ಬಳಿಕ. ಆರಂಭದಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ರನ್ ಕಲೆಹಾಕಿದರೂ, ನ್ಯೂಜಿಲೆಂಡ್ ಕಂ ಬ್ಯಾಕ್ ಮಾಡಿತ್ತು. ಪೂಜಾರಾ ಮತ್ತು ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಔಟ್ ಮಾಡಿ ಮೇಲುಗೈ ಸಾಧಿಸಿತು. ಆದರೆ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಶತಕ ಸಿಡಿಸಿ ಟೀಮ್ ಇಂಡಿಯಾವನ್ನು ಕಾಪಾಡಿದರು.
ಮಳೆಯಿಂದ ಔಟ್ ಫೀಲ್ಡ್ ಒದ್ದೆಯಾಗಿದ್ದರಿಂದ ತಡವಾಗಿ ಪಂದ್ಯ ಆರಂಭವಾಯಿತು. ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆರಿಸಿಕೊಂಡಿತು. ಜಡೇಜಾ, ಗಾಯಗೊಂಡಿದ್ದ ಜಡೆಜಾ, ಇಶಾಂತ್ ಮತ್ತು ರಹಾನೆ ಬದಲಿಗೆ ಜಯಂತ್, ಸಿರಾಜ್ ಮತ್ತು ವಿರಾಟ್ ತಂಡವನ್ನು ಸೇರಿಕೊಂಡಿದ್ದರು. ಇನ್ನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್ ಮತ್ತು ಮಯಾಂಕ್ ಅಗರ್ವಾಲ್ ನ್ಯೂಜಿಲೆಂಡ್ ಬೌಲರ್ಗಳನ್ನು ಸಾಕಷ್ಟು ಹೊತ್ತು ಕಾಡಿದರು. ಮೊದಲ ವಿಕೆಟ್ಗೆ ಈ ಜೋಡಿ 80 ರನ್ ಕಲೆಹಾಕಿತ್ತು. ಈ ಹಂತದಲ್ಲಿ ದಾಳಿಗಿಳಿದ ಎಡಗೈ ಸ್ಪಿನ್ನರ್ ಅಜಝ್ ಪಟೇಲ್ 44 ರನ್ಗಳಿಸಿದ್ದ ಗಿಲ್ ವಿಕೆಟ್ ಹಾರಿಸಿಸದರು.
ಸತತ ವೈಫಲ್ಯ ಅನುಭವಿಸುತ್ತಿರುವ ಚೇತೇಶ್ವರ ಪೂಜಾರಾ ಮುಂಬೈನಲ್ಲೂ ವೈಫಲ್ಯ ಕಂಡರು. ಪೂಜಾರಾ ಪಟೇಲ್ ಎಸೆತದಲ್ಲಿ ಖಾತೆ ತೆರೆಯುವ ಮುನ್ನವೇ ಕ್ಲೀನ್ ಬೌಲ್ಡ್ ಆಗಿದ್ದರು. ವಿರಾಟ್ ಕೊಹ್ಲಿ ಕೂಡ ಖಾತೆ ತೆರೆಯದೆ ಔಟಾದಾಗಸ ಟೀಮ್ ಇಂಡಿಯಾಕ್ಕೆ ಶಾಕ್ ಆಗಿತ್ತು. ಆದರೆ ನಾಲ್ಕನೇ ವಿಕೆಟ್ಗೆ ಮಯಾಂಕ್ ಮತ್ತು ಶ್ರೇಯಸ್ ಅಯ್ಯರ್ 80 ರನ್ಗಳನ್ನು ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು.
ಮಯಾಂಕ್ ಅರ್ಧಶತಕದ ಬಳಿಕ ಬೌಂಡರಿ, ಸಿಕ್ಸರ್ಗಳ ಮೂಲಕ ಕಿವೀ ಬೌಲರ್ಗಳನ್ನು ಬೆಂಡೆತ್ತಿದ್ದರು. ಆದರೆ ಶ್ರೇಯಸ್ ಅಜಝ್ ಎಸೆತದಲ್ಲಿ 18 ರನ್ಗಳಿಸಿದ್ದಾಗ ಔಟ್ ಆದರು. ಮಯಾಂಕ್ ವೃದ್ಧಿಮಾನ್ ಸಾಹಾ ಜೊತೆ ಸೇರಿಕೊಂಡು ಇನ್ನಿಂಗ್ಸ್ ಕಟ್ಟಿದರು. ಅಷ್ಟೇ ಅಲ್ಲ ಟೆಸ್ಟ್ ಕ್ರಿಕೆಟ್ನಲ್ಲಿ 4ನೇ ಶತಕದ ಸಂಭ್ರಮ ಆಚರಿಸಿಕೊಂಡರು. ಮಯಾಂಕ್ ಮತ್ತು ವೃದ್ಧಿಮಾನ್ 5ನೇ ವಿಕೆಟ್ಗೆ ಅಜೇಯ 61 ರನ್ಗಳನ್ನು ಸೇರಿಸಿದ್ದಾರೆ. ದಿನದ ಅಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು 221 ರನ್ಗಳಿಸಿದೆ. ಮಯಾಂಕ್ ಅಜೇಯ 120 ರನ್ಗಳಿಸಿದ್ದರೆ, ವೃದ್ಧಿಮಾನ್ ಸಾಹಾ ಅಜೇಯ 25 ರನ್ಗಳಿಸಿ 2ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.