ನವದೆಹಲಿಯ ಜಿಮ್ಖಾನಾ ಕ್ಲಬ್ನಲ್ಲಿ ಶನಿವಾರ ನಡೆದ ಡೇವಿಸ್ ಕಪ್ ವಿಶ್ವ ಗ್ರೂಪ್ 1 ಪ್ಲೇ-ಆಫ್ ಪಂದ್ಯದಲ್ಲಿ ಡೆನ್ಮಾರ್ಕ್ ತಂಡವನ್ನು 4-0 ರಿಂದ ಸೋಲಿಸುವ ಮೂಲಕ ಭಾರತ ಡೇವಿಸ್ ಕಪ್ ತಂಡವು ವಿಶ್ವ ಗುಂಪು 1 ರಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
ಫೆಬ್ರವರಿ 2019ರ ಬಳಿಕ ಮೊದಲ ಡೇವಿಸ್ ಕಪ್ ಪಂದ್ಯವನ್ನು ಆಡುತ್ತಿರುವ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿ ಡಬಲ್ಸ್ ನಲ್ಲೂ ಸೊಗಸಾದ ಪ್ರದರ್ಶನ ನೀಡಿ ಗಮನ ಸೆಳೆದಿತ್ತು. ಡೆನ್ಮಾರ್ಕ್ ಜೋಡಿ ಫ್ರೆಡ್ರಿಕ್ ನೀಲ್ಸನ್ ಮತ್ತು ಮೈಕೆಲ್ ಟೊರ್ಪೆಗಾರ್ಡ್ ಅವರನ್ನು ಒಂದು ಗಂಟೆ 58 ನಿಮಿಷಗಳ ಕಾಲ ಕಾದಾಟದಲ್ಲಿ ಸೋಲಿಸಿ ಮೂರು ಮ್ಯಾಚ್ ಪಾಯಿಂಟ್ಗಳನ್ನು ಉಳಿಸಿದರು. ಈ ಪಂದ್ಯದಲ್ಲಿ ಭಾರತ 6-7(4), 6-4, 7-6(4) ಸೆಟ್ಗಳಿಂದ ಸೋಲಿಸಿ 3-0 ಮುನ್ನಡೆ ಸಾಧಿಸಿತು.
ರಿವರ್ಸ್ ಸಿಂಗಲ್ಸ್ನಲ್ಲಿ ರಾಮ್ಕುಮಾರ್ ರಾಮನಾಥನ್ 5-7, 7-5, 10-7 ರಲ್ಲಿ ಜೋಹಾನ್ಸ್ ಇಂಗಿಲ್ಡ್ಸೆನ್ ಅವರನ್ನು ಸೋಲಿಸಿದರು. ಈ ಮೂಲಕ ಭಾರತ 4-0 ಮುನ್ನಡೆ ಸಾಧಿಸಿದ್ದು, ಐದನೇ ಪಂದ್ಯ ಆಡುವ ಅಗತ್ಯವಿರಲಿಲ್ಲ. ಇದಕ್ಕೂ ಮುನ್ನ ಪಂದ್ಯದ ಮೊದಲ ದಿನವಾದ ಶುಕ್ರವಾರ ರಾಮ್ಕುಮಾರ್ ಮತ್ತು ಯೂಕಿ ಭಾಂಬ್ರಿ ತಮ್ಮ ತಮ್ಮ ಸಿಂಗಲ್ಸ್ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡಕ್ಕೆ ಗೆಲುವಿನ ಆರಂಭ ನೀಡಿದರು.
ಬೋಪಣ್ಣ ಮತ್ತು ದಿವಿಜ್ ಅವರ ಜೋಡಿ ದಾಖಲಿಸಿದ ಜಯ 2022 ರ ಋತುವಿನಲ್ಲಿ ಭಾರತವು ವಿಶ್ವ ಗುಂಪು 1 ರಲ್ಲಿ ಉಳಿಯುತ್ತದೆ ಎಂದು ಖಚಿತಪಡಿಸಿತು. ಆದರೆ ಡೆನ್ಮಾರ್ಕ್ ಈಗ ವಿಶ್ವ ಗುಂಪು 2 ಗೆ ಇಳಿಯುತ್ತದೆ.