ಮೊಹಾಲಿ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಅಂತರದಿಂದ ಗೆದ್ದ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ಎಂತಹ ಬಲಿಷ್ಠ ತಂಡವನ್ನು ಕೂಡ ಸ್ಪಿನ್ ಮೂಲಕವೇ ಬುಡಮೇಲು ಮಾಡುವ ಆತ್ಮವಿಶ್ವಾಸ ಹೊಂದಿದೆ. ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಜೊತೆಗೆ ಸ್ಪಿನ್ ಬೌಲಿಂಗ್ನ ಡೆಡ್ಲಿ ಕಾಂಬಿನೇಷನ್ ಭಾರತಕ್ಕೆ ಸತತ ಟೆಸ್ಟ್ ಗೆಲುವುಗಳನ್ನು ತಂದುಕೊಡುತ್ತಿದೆ. ಈಗ ಬೆಂಗಳೂರಿನ ಚಿನ್ನಸ್ವಾಮಿ ಮೈದಾನಕ್ಕೆ ಫೋಕಸ್ ಶಿಫ್ಟ್ ಆಗಿದೆ.
ಚಿನ್ನಸ್ವಾಮಿ ಮೈದಾನ ಚೊಚ್ಚಲ ಡೇ-ನೈಟ್ ಟೆಸ್ಟ್ಗೆ ಸಜ್ಜಾಗಿದೆ. ಭಾರತ ತವರಿನಲ್ಲಿ 3ನೇ ಡೇ-ನೈಟ್ ಟೆಸ್ಟ್ ಆಡಲಿದೆ. ಈ ಹಿಂದಿನ 2 ಡೇ-ನೈಟ್ ಟೆಸ್ಟ್ಗಳಲ್ಲೂ ಭಾರತ ಗೆಲುವು ಸಾಧಿಸಿತ್ತು. ಈಗ 3ನೇ ಹಗಲು ರಾತ್ರಿ ಪಂದ್ಯದಲ್ಲೂ ಗೆಲ್ಲುವ ಉತ್ಸಾಹದಲ್ಲಿದೆ.
ಟೀಮ್ ಇಂಡಿಯಾ ಬಲಿಷ್ಠವಾಗಿದೆ. ಮಯಾಂಕ್ ಅಗರ್ವಾಲ್ ಮತ್ತು ರೋಹಿತ್ ಶರ್ಮಾ ಓಪನರ್ಗಳು. ಭಾರತ ಮಯಾಂಕ್ ಜಾಗದಲ್ಲಿ ಪ್ರಿಯಾಂಕ್ ಪಾಂಚಾಲ್ಗೂ ಅವಕಾಶ ನೀಡುವ ಬಗ್ಗೆ ಯೋಚನೆ ಮಾಡುತ್ತಿದೆ. ಹನುಮ ವಿಹಾರಿ 3ನೇ ಕ್ರಮಾಂಕದಲ್ಲಿ ಸೆಟ್ ಆದ ಹಾಗಿದೆ. ವಿರಾಟ್ 4ನೇ ಕ್ರಮಾಂಕದಲ್ಲಿ ಫಿಕ್ಸ್. ಶ್ರೇಯಸ್ ಅಯ್ಯರ್ ಮತ್ತು ಶುಭ್ಮನ್ ಗಿಲ್ ನಡುವೆ 5ನೇ ಕ್ರಮಾಂದ ಫೈಟ್ ನಡೆಯುತ್ತಿದ್ದರೂ ಶ್ರೇಯಸ್ಗೆ ಅಡ್ವಾಂಟೇಜ್ ಹೆಚ್ಚಿದೆ. ರಿಷಬ್ ಪಂತ್ ವಿಕೆಟ್ ಕೀಪರ್ ಕಂ 6ನೇ ಕ್ರಮಾಂಕದ ಬ್ಯಾಟ್ಸ್ಮನ್. ಜಡೇಜಾ ಮತ್ತು ಆಶ್ವಿನ್ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಕೊಡುಗೆ ನೀಡಬಲ್ಲ ಆಲ್ರೌಂಡರ್ಗಳು. ಜಯಂತ್ ಯಾದವ್ ಬದಲು ಅಕ್ಸರ್ ಪಟೇಲ್ ಎಂಟ್ರಿ ಕೊಡಬಹುದು. ಮೊಹಮ್ಮದ್ ಶಮಿ ಮತ್ತು ಜಸ್ಪ್ರಿತ್ ಬುಮ್ರಾ ವೇಗದ ಬೌಲಿಂಗ್ನ ಸಾರಥಿಗಳು.
ಶ್ರೀಲಂಕಾ ತಂಡದ ಕಾಂಬಿನೇಷನ್ ಸಖತ್ ತಲೆನೋವಿನ ವಿಷಯ. ಲಹಿರು ತಿರಿಮನ್ನೆ, ನಾಯಕ ದಿಮುತ್ ಕರುಣರತ್ನೆ, ಪಥುನ್ ನಿಸ್ಸಾಂಕ, ಅನುಭವಿ ಆ್ಯಂಜಲೋ ಮ್ಯಾಥ್ಯೂಸ್ ಮತ್ತು ಅಸಲಂಕಾ ಆಡುವುದು ಪಕ್ಕಾ. ನಿರೋಷನ್ ಡಿಕ್ವೆಲ್ಲಾ ಸ್ಥಾನವೂ ಖಚಿತ. ಆದರೆ ದಿನೇಶ್ ಚಾಂಡಿಮಲ್ ಆಡುವ ಜಾಗ ಯಾವುದು ಅನ್ನುವುದು ಇನ್ನೂ ನಿಗೂಢ. ಧನಂಜಯ ಡಿ ಸಿಲ್ವಾ ಆಲ್ರೌಂಡರ್ ಕೋಟಾದಲ್ಲಿ ಆಡಲಿದ್ದಾರೆ. ಲಹಿರು ಕುಮಾರ, ಸುರಂಗ ಲಕ್ಮಲ್ ವೇಗದ ಬೌಲರ್ಗಳಾದರೆ, ಲಸಿತ್ ಎಂಬುಡಲ್ಡೇನಿಯಾ ಸ್ಪಿನ್ನರ್. ಬೆಂಗಳೂರು ಟೆಸ್ಟ್ಗೆ ಲಂಕಾ ಜೆಫ್ರಿ ವಾಂಡರ್ಸೆ ಅಥವಾ ಪ್ರವೀಣ್ ಜಯವಿಕ್ರಮ ರನ್ನು ಆಡಿಸುವ ಸಾಧ್ಯತೆ ಇದೆ,
ಚಿನ್ನಸ್ವಾಮಿ ಮೈದಾನ ಸ್ಪಿನ್ನರ್ಗಳಿಗೆ ನೆರವು ನೀಡಲಿದೆ. ಡೇ-ನೈಟ್ ಟೆಸ್ಟ್ ಆಗಿರುವುದರಿಂದ ಸಂಜೆ ವೇಳೆ ಡ್ಯೂ ಫ್ಯಾಕ್ಟರ್ ಪಂದ್ಯದ ಮೇಲೆ ಹೇಗೆ ಎಫೆಕ್ಟ್ ಮಾಡುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ.
ಸಂಭಾವ್ಯ XI
ಭಾರತ:
-
ರೋಹಿತ್ ಶರ್ಮಾ,2. ಮಯಾಂಕ್ ಅಗರ್ವಾಲ್/ ಪ್ರಿಯಾಂಕ್ ಪಾಂಚಲ್, 3. ಹನುಮ ವಿಹಾರಿ, 4. ವಿರಾಟ್ ಕೊಹ್ಲಿ, 5. ಶ್ರೇಯಸ್ ಅಯ್ಯರ್/ ಶುಭ್ಮನ್ ಗಿಲ್. 6. ರಿಷಬ್ ಪಂತ್, 7. ರವೀಂದ್ರ ಜಡೇಜಾ, 8. ರವಿಚಂದ್ರನ್ ಅಶ್ವಿನ್,9. ಅಕ್ಸರ್ ಪಟೇಲ್/ಜಯಂತ್ ಯಾದವ್, 10. ಜಸ್ಪ್ರಿತ್ ಬುಮ್ರಾ, 11. ಮೊಹಮ್ಮದ್ ಶಮಿ