IPL-2022 – virat kohli and rcb -ಆರ್ ಸಿಬಿ ನಂಟು… 15 ವರ್ಷದ ಗಂಟು.. ವಿರಾಟ್ ಕೊಹ್ಲಿಯ ಐಪಿಎಲ್ ಜರ್ನಿ..!

ವಿರಾಟ್ ಕೊಹ್ಲಿ.. ಹುಟ್ಟಿದ್ದು, ಬೆಳೆದಿದ್ದು, ಆಡಿದ್ದು, ನೆಲೆನಿಂತಿರುವುದು ಎಲ್ಲವೂ ರಾಜಧಾನಿ ದೆಹಲಿಯಲ್ಲಿ. ವಕೀಲನ ಮಗನಾಗಿರುವ ವಿರಾಟ್ ಕೊಹ್ಲಿ ಮುಂದೊಂದು ದಿನ ವಿಶ್ವದ ಶ್ರೇಷ್ಠ ಕ್ರಿಕೆಟಿಗನಾಗುತ್ತಾನೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಆದ್ರೆ ವಿರಾಟ್ ಬದ್ಧತೆ, ಕ್ರಿಕೆಟ್ ಮೇಲಿನ ಪ್ರೀತಿ, ಆಕ್ರಮಣಕಾರಿ ಪ್ರವೃತ್ತಿ, ಸೋಲಲೇಬಾರದು ಅನ್ನೋ ದಿಟ್ಟ ಹೆಜ್ಜೆಯೇ ಇಂದು ದಾಖಲೆಗಳ ಮೈಲುಗಲ್ಲುಗಳಾಗಿವೆ.
ಅದೇನೇ ಇರಲಿ, ವಿರಾಟ್ ಕೊಹ್ಲಿಗೂ ಬೆಂಗಳೂರಿಗೂ ಅವಿನಾಭಾವ ಸಂಬಂಧವಿದೆ. ಬೆಂಗಳೂರು ಅಂದ್ರೆ ವಿರಾಟ್ ಹೃದಯದಲ್ಲಿ ವಿಶೇಷ ಸ್ಥಾ£ವಿದೆ. ಅದಕ್ಕೆ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು.
ಅಷ್ಟೇ ಅಲ್ಲ, ನಮ್ಮ ಕರ್ನಾಟಕ ತಂಡದ ವಿರುದ್ಧವೇ ಶತಕ ದಾಖಲಿಸಿ ತನ್ನ ಕ್ರಿಕೆಟ್ ಬದ್ಧತೆಯನ್ನು ತೋರಿಸಿಕೊಟ್ಟಿದ್ದರು. ತಂದೆಯ ನಿಧನದ ಸುದ್ದಿಯ ನಡುವೆಯೂ ಕರ್ನಾಟಕದ ವಿರುದ್ಧ ಶತಕ ದಾಖಲಿಸಿ ತಂದೆಗೆ ಅರ್ಪಣೆ ಮಾಡಿದ್ದರು ವಿರಾಟ್ ಕೊಹ್ಲಿ.
ಇನ್ನು 2008, ಮಾರ್ಚ್ 11ರಂದು ವಿರಾಟ್ ಕೊಹ್ಲಿ ಆರ್ ಸಿಬಿ ಜೊತೆಗಿನ ಒಪ್ಪಂದಕ್ಕೆ ಸಹಿ ಮಾಡಿದ್ದರು. ಅಲ್ಲಿಂದ ಇಲ್ಲಿಯ ತನಕ ಅಂದ್ರೆ 15 ವರ್ಷಗಳ ಕಾಲ ವಿರಾಟ್ ಕೊಹ್ಲಿ ಆರ್ ಸಿಬಿ ತಂಡದ ಜೊತೆಗಿದ್ದಾರೆ.
ಕಿರಿಯ ಆಟಗಾರನಾಗಿ ಆರ್ ಸಿಬಿ ತಂಡಕ್ಕೆ ಸೇರಿಕೊಂಡಿದ್ದ ವಿರಾಟ್ ನಂತರ ತಂಡದ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ರು. ಅಷ್ಟೇ ಅಲ್ಲ, ನಾಯಕನಾಗಿ 9 ವರ್ಷಗಳ ಕಾಲ ಆರ್ ಸಿಬಿ ತಂಡವನ್ನು ಮುನ್ನಡೆಸಿದ್ದರು.

ಐಪಿಎಲ್ ನಲ್ಲಿ ಆರ್ ಸಿಬಿ ಪರ 207 ಪಂದ್ಯಗಳನ್ನು ಇಲ್ಲಿಯವರೆಗೆ ಆಡಿದ್ದಾರೆ. 6,283 ರನ್ ದಾಖಲಿಸಿದ್ದಾರೆ. ಇದರಲ್ಲಿ ಐದು ಶತಕ ಹಾಗೂ 42 ಅರ್ಧಶತಕಗಳಿವೆ. ಹಾಗೇ 546 ಬೌಂಡರಿ ಮತ್ತು 210 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. 85 ಕ್ಯಾಚ್ ಗಳನ್ನು ಹಿಡಿದಿದ್ದಾರೆ.
2008ರಲ್ಲಿ 12 ಲಕ್ಷ ರೂಪಾಯಿಗೆ ಆರ್ ಸಿಬಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ವಿರಾಟ್ ಕೊಹ್ಲಿಯವರ ಈಗೀನ ಸಂಭಾವಣೆ 15 ಕೋಟಿ ರೂ.
ವಿರಾಟ್ ಕೊಹ್ಲಿ ಐಪಿಎಲ್ ಸಂಭಾವಣೆ
2022- 15 ಕೋಟಿ ರೂಪಾಯಿ
2018ರಿಂದ 2021- 17 ಕೋಟಿ ರೂ.
2014ರಿಂದ 2017- 12.5 ಕೋಟಿ ರೂ.
2011ರಿಂದ 2013- 8.28 ಕೋಟಿ ರೂ.
2008ರಿಂದ 2010 – 12 ಲಕ್ಷ ರೂಪಾಯಿ
ವಿರಾಟ್ ಕೊಹ್ಲಿ ಒಟ್ಟು ಐಪಿಎಲ್ ಸಂಭಾವಣೆ – 158.2 ಕೋಟಿ ರೂ.

ಹೌದು, ವಿರಾಟ್ ಕೊಹ್ಲಿಯವರನ್ನು ಈ ಬಾರಿ ಆರ್ ಸಿಬಿ ತಂಡ 15 ಕೋಟಿಗೆ ರಿಟೇನ್ ಮಾಡಿಕೊಂಡಿದೆ. Virat Kohli’s IPL journey in royal challengers bengaluru
ಹಾಗೇ ನೋಡಿದ್ರೆ ಈ ಬಾರಿಯ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿಯವರ ಸಂಭಾವಣೆ ಕಡಿಮೆಯಾಗಿದೆ.
2018ರಿಂದ 2021ರವರೆಗೆ ವಿರಾಟ್ ಕೊಹ್ಲಿ ತಲಾ 17 ಕೋಟಿ ರೂಪಾಯಿ ಸಂಭಾವಣೆಯನ್ನು ಆರ್ ಸಿಬಿ ನೀಡುತ್ತಿತ್ತು. ಹಾಗೇ 2014ರಿಂದ 2017ರವರೆಗೆ ತಲಾ 12.50 ಕೋಟಿ ರೂಪಾಯಿ ಸಂಭಾವಣೆ ಪಡೆಯುತ್ತಿದ್ದರು. 2011ರಿಂದ 2013ರವರೆಗೆ ತಲಾ 8.28 ಕೋಟಿ ಸಂಭಾವಣೆ ಪಡೆದಿದ್ದರು. ಇನ್ನು 2008ರಿಂದ 2010ರವರೆಗೆ ವಿರಾಟ್ ಕೊಹ್ಲಿ ತಲಾ 12 ಲಕ್ಷ ರೂಪಾಯಿಗೆ ಸಮಧಾನಪಟ್ಟುಕೊಂಡಿದ್ದರು. ಒಟ್ಟು ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ 158.2 ಕೋಟಿ ರೂಪಾಯಿಯನ್ನು ಸಂಭಾವಣೆಯಾಗಿ ಪಡೆದುಕೊಂಡಿದ್ದಾರೆ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಒಂದೇ ತಂಡದ ಪರ 15 ವರ್ಷಗಳ ಕಾಲ ಆಡಿದ್ದ ಏಕೈಕ ಐಪಿಎಲ್ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.