ನ್ಯೂಜಿಲೆಂಡ್ ಆತಿಥ್ಯ ನೀಡುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಟೌರಂಗದ ಮೌಂಟ್ ಮಂಗ್ನುಯಿ ಮೈದಾನದಲ್ಲಿ ಭಾರತ ಮತ್ತು ಪಾಕ್ ಮಹಿಳಾ ತಂಡಗಳ ನಡುವೆ ಜಿದ್ದಾಜಿದ್ದಿ ನಡೆಯಲಿದೆ.
ಎರಡೂ ತಂಡಗಳ ಬಲಾಬಲವನ್ನು ನೋಡಿದರೆ ಭಾರತೀಯ ವನಿತೆಯರು ಸಾಕಷ್ಟು ಮುಂದೆ ನಿಲ್ಲುತ್ತಾರೆ. ಆದರೆ ಪಾಕ್ ತಂಡವನ್ನು ನೆಗ್ಲೆಕ್ಟ್ ಮಾಡುವ ಹಾಗಿಲ್ಲ. ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಸ್ತಿಕಾ ಭಾಟಿಯಾ ಭಾರತದ ಟಾಪ್ ಆರ್ಡರ್ ಬ್ಯಾಟಿಂಗ್ ಶಕ್ತಿಗಳು. ನಾಯಕಿ ಮಿಥಾಲಿ ರಾಜ್ ಎಂದಿನಂತೆ ರನ್ ಕಲೆ ಹಾಕಿದರೆ ನೋ ಪ್ರಾಬ್ಲಂ. ಉಪನಾಯಕಿ ಹರ್ಮನ್ ಪ್ರಿತ್ ಕೌರ್, ದೀಪ್ತಿ ಶರ್ಮಾ ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ ಕೂಡ ಬ್ಯಾಟಿಂಗ್ ಮಾಡಬಲ್ಲರು. ಬೌಲಿಂಗ್ನಲ್ಲಿ ಜುಲಾನ್ ಗೋಸ್ವಾಮಿಯ ಅನುಭವದ ಮುಂದೆ ಮಾತೇ ಇಲ್ಲ. ರಾಜೇಶ್ವರಿ ಗಾಯಕ್ವಾಡ್, ದೀಪ್ತಿ ಶರ್ಮಾ ಕೂಡ ಬೌಲಿಂಗ್ ಅಸ್ತ್ರಗಳು.
ಪಾಕಿಸ್ತಾನ ತಂಡ ನಾಯಕಿ ಬಿಸ್ಮಾ ಮರೂಫ್ ಹಾಗೂ ಆಲ್ರೌಂಡರ್ ನಿದಾ ದಾರ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅಲಿಯಾ ರಿಯಾಜ್, ಐಮನ್ ಅನ್ವರ್, ಡಯಾನ ಬೇಗರಂತಹ ಆಲ್ರೌಂಡರ್ಳಿದ್ದರೂ ಅನುಭವದ ಕೊರತೆ ಇದೆ.
ಮೌಂಟ್ ಮಂಗ್ನುಯಿ ಪಿಚ್ ಬ್ಯಾಟಿಂಗ್ಗೆ ಸಹಕಾರಿಯಾಗಿರಲಿದೆ. ಶುಭಾರಂಭದ ಕನಸು ಕಾಣುತ್ತಿರುವ ಭಾರತಕ್ಕೆ ಮೊದಲ ಎದುರಾಳಿಯೇ ಪಾಕಿಸ್ತಾನ ಆಗಿರುವುದರಿಂದ ಉತ್ಸಾಹ ಹೆಚ್ಚಿದೆ.