ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆರಂಭಿಸಿತು. ಕೆ.ಎಲ್. ರಾಹುಲ್ ಮತ್ತು ಶಿಖರ್ ಧವನ್ ಮೊದಲ ವಿಕೆಟ್ಗೆ 63 ರನ್ಗಳ ಜೊತೆಯಾಟ ತಂದುಕೊಟ್ಟರು. ಈ ಜೋಡಿ ಆತಿಥೇಯ ತಂಡಕ್ಕೆ ಅಪಾಯ ತಂದೊಡ್ಡುತ್ತೆ ಅನ್ನವಾಗಲೇ ಮಾರ್ಕ್ ರಾಂ 29 ರನ್ಗಳಿಸಿದ್ದ ಧವನ್ ವಿಕೆಟ್ ಪಡೆದರು. ಕೇಶವ್ ಮಹಾರಾಜ್ ವಿರಾಟ್ ಕೊಹ್ಲಿಯನ್ನು ಖಾತೆ ತೆರೆಯಲು ಕೂಡ ಅವಕಾಶ ನೀಡಲಿಲ್ಲ.
ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾವನ್ನು ರಕ್ಷಿಸಿದ್ದು ನಾಯಕ ಕೆ.ಎಲ್. ರಾಹುಲ್ ಮತ್ತು ರಿಷಬ್ ಪಂತ್. ಪಂತ್ ದಕ್ಷಿಣ ಆಫ್ರಿಕಾದ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಈ ಜೋಡಿ 3ನೇ ವಿಕೆಟ್ಗೆ 115 ರನ್ಗಳ ಜೊತೆಯಾಟ ಆಡಿತು. ಪಂತ್ ಮೊದಲಿಗರಾಗಿ ಅರ್ಧಶತಕದ ಗಡಿ ದಾಟಿದರೆ, ರಾಹುಲ್ ನಿಧಾವಾಗಿ ಆಡಿ ಅರ್ಧಶತಕದ ಸಂಭ್ರಮ ಆಚರಿಸಿಕೊಂಡರು.
ಪಂತ್ ಮತ್ತು ರಾಹುಲ್ ಜೊತೆಯಾಟಕ್ಕೆ ಮಗಲಾ ಮಂಗಳ ಹಾಡಿದರು. 79 ಎಸೆತಗಳಲ್ಲಿ 55 ರನ್ಗಳಿಸಿ ರಾಹುಲ್ ಔಟಾದರು. ಪಂತ್ 71 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 85 ರನ್ಗಳಿಸಿ ಶಂಸಿಗೆ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಅಯ್ಯರ್ (11) ಮತ್ತು ವೆಂಕಟೇಶ್ ಅಯ್ಯರ್ (22) ದೊಡ್ಡ ರನ್ ಪೇರಿಸುವಲ್ಲಿ ಎಡವಿದರು.
ಶಾರ್ದೂಲ್ ಥಾಕೂರ್ ಮತ್ತು ರವಿಚಂದ್ರನ್ ಅಶ್ವಿನ್ ಸ್ಲಾಗ್ ಓವರುಗಳಲ್ಲಿ ಬ್ಯಾಟ್ ಬೀಸಿದರು. ಈ ಜೋಡಿ ಅಜೇಯ 48 ರನ್ಗಳನ್ನು ಸೇರಿಸಿತು. ಥಾಕೂರ್ 38 ಎಸೆತಗಳಲ್ಲಿ ಅಜೇಯ 40 ರನ್ಗಳಿಸಿದರೆ, ಅಶ್ವಿನ್ 24 ಎಸೆತಗಳಲ್ಲಿ ಅಜೇಯ 25 ರನ್ಗಳಿಸಿದರು. 50 ಓವರುಗಳಲ್ಲಿ ಟೀಮ್ ಇಂಡಿಯಾ 6 ವಿಕೆಟ್ ಕಳೆದುಕೊಂಡು 287 ರನ್ಗಳಿಸಿತು.
ಚೇಸಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಕ್ವಿಂಟಾನ್ ಡಿಕಾಕ್ ಮತ್ತು ಜೆನಮನ್ ಮಲಾನ್ ಮೂಲಕ ಅಬ್ಬರದ ಆರಂಭ ಪಡೆಯಿತು. ಡಿ ಕಾಕ್ ಅಬ್ಬರಿಸಿ ಬೊಬ್ಬಿರಿದರೆ, ಮಲಾನ್ ಅವಕಾಶ ಸಿಕ್ಕಾಗಲೆಲ್ಲ ರನ್ಗಳಿಸಿದರು. ಮೊದಲ ವಿಕೆಟ್ಗೆ ಈ ಜೋಡಿ 131 ರನ್ಗಳನ್ನು ಸೇರಿಸಿತು. 66 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 7 ಫೋರ್ಗಖ ಮೂಲಕ 78 ರನ್ಗಳಿಸಿದ ಡಿ ಕಾಕ್ ಥಾಕೂರ್ಗೆ ವಿಕೆಟ್ ಒಪ್ಪಿಸಿದರು.
ನಾಯಕ ತೆಂಬ ಬವುಮಾ ಮತ್ತು ಮಲಾನ್ ನಡುವೆ 2ನೇ ವಿಕೆಟ್ಗೆ 80 ರನ್ಗಳ ಜೊತೆಯಾಟ ಬಂತು. ಮಲಾನ್ 91 ರನ್ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿ ಶತಕ ವಂಚಿತರಾದರು. ಬವುಮಾ 35 ರನ್ಗಳಿಸಿ ಪವೆಲಿಯನ್ ಸೇರಿಕೊಂಡರು.
ಏಡಿಯನ್ ಮಾರ್ಕ್ ರಾಂ ಮತ್ತು ರಾಸಿ ವಾಂಡರ್ ಡ್ಯುಸನ್ 4ನೇ ವಿಕೆಟ್ಗೆ ಅಜೇಯ 74 ರನ್ಗಳನ್ನು ಸೇರಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ವಾಂಡರ್ ಡ್ಯಸನ್ ಅಜೇಯ 37 ರನ್ಗಳಿಸಿದರೆ, ಮಾರ್ಕ್ ರಾಂ ಕೂಡ ಅಜೇಯ 37 ರನ್ಗಳಿಸಿದರು. ದಕ್ಷಿಣ ಅಫ್ರಿಕಾ 48.1 ಓವರುಗಳಲ್ಲಿ ಗುರಿ ತಲುಪಿ ಪಂದ್ಯ ಹಾಗೂ ಸರಣಿ ಗೆದ್ದು ಬೀಗಿತು.