ಬರ್ಮಿಂಗ್ಹ್ಯಾಂ ಟೆಸ್ಟ್ನ 2ನೇ ದಿನದ ಮೊದಲ ಸೆಷನ್ನಲ್ಲೇ ಟೀಮ್ ಇಡಿಯಾ ಆಲೌಟ್ ಆಗಿದೆ. ಮೊದಲ ದಿನ ಅಜೇಯರಾಗುಳಿದಿದ್ದ ರವೀಂದ್ರ ಜಡೇಜಾ ಶತಕ ಸಿಡಿಸಿ ಸಂಭ್ರಮ ಆಚರಿಸಿಕೊಂಡರೆ, ಜಸ್ಪ್ರಿತ್ ಬುಮ್ರಾ ಒಂದೇ ಓವರ್ನಲ್ಲಿ 29 ರನ್ ಸಿಡಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದರು. ಸ್ಟುವರ್ಟ್ ಬ್ರಾಡ್ ಒಂದೇ ಓವರ್ನಲ್ಲಿ 35 ರನ್ ಬಿಟ್ಟುಕೊಟ್ಟು ಬೇಡವಾದ ದಾಖಲೆಗೆ ಪಾತ್ರರಾದರು.
ಮೊದಲ ದಿನ 7ವಿಕೆಟ್ಕಳೆದುಕೊಂಡು 338 ರನ್ಗಳಿಸಿದ್ದ ಭಾರತ ಆಟ ಮುಂದುವರೆಸಿತು. ರವೀಂದ್ರ ಜಡೇಜಾಗೆ ಮೊಹಮ್ಮದ್ ಶಮಿ ಉತ್ತಮ ಸಾಥ್ ನೀಡಿದರು. ಈ ಜೋಡಿ 48 ರನ್ಗಳ ಜೊತೆಯಾಟವನ್ನು ಆಡಿತು. 83 ರನ್ಗಳಿಂದ ಬ್ಯಾಟಿಂಗ್ ಆರಂಭಿಸಿದ್ದ ಜಡೇಜಾ ಬೌಂಡರಿ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 3ನೇ ಶತಕ ಸಂಭ್ರಮ ಆಚರಿಸಿಕೊಂಡರು.
ಮೊಹಮ್ಮದ್ ಸಿರಾಜ್ ಆ್ಯಂಡರ್ಸನ್ಗೆ 5 ನೇ ಬಲಿಯಾಗುವುದರೊಂದಿಗೆ ಟೀಮ್ ಇಂಡಿಯಾದ ಇನ್ನಿಂಗ್ಸ್ 416 ರನ್ಗಳಿಗೆ ಮುಕ್ತಾಯ ಕಂಡಿತು. ಜೇಮ್ಸ್ ಆ್ಯಂಡರ್ಸನ್ 60 ರನ್ಗಳಿಗೆ 5 ವಿಕೆಟ್ ಪಡೆದು ಮಿಂಚಿದರು.