Ind Vs Eng test match – ರಿಷಬ್ ಪಂತ್ ಮನರಂಜನೆಯ ಕ್ರಿಕೆಟಿಗ – ವೀರೇಂದ್ರ ಸೆಹ್ವಾಗ್…!
ಭಾರತೀಯ ಟೆಸ್ಟ್ ಕ್ರಿಕೆಟ್ ನ ಎಂಟೈಟೇನರ್ ಅಂದ್ರೆ ಅದು ವೀರೇಂದ್ರ ಸೆಹ್ವಾಗ್.
ಏಕದಿನ ಶೈಲಿಯಂತೆ ಟೆಸ್ಟ್ ಕ್ರಿಕೆಟ್ ಅನ್ನು ಆಡಬಹುದು ಎಂದು ಮೊದಲುಪರಿಚಯಿಸಿದ್ದೇ ಸೆಹ್ವಾಗ್.
ಆನಂತರ ಟಿ-20 ಕ್ರಿಕೆಟ್ ನಂತೆ ಟೆಸ್ಟ್ ನಂತೆ ಆಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದು ರಿಷಬ್ ಪಂತ್.
ಹೌದು, ಸೆಹ್ವಾಗ್ ನಂತೆ ಹೊಡಿಬಡಿ ಆಟವನ್ನೇ ಮೂಲಮಂತ್ರವನ್ನಾಗಿರಿಸಿಕೊಂಡ ಆಟಗಾರ ರಿಷಬ್ ಪಂತ್. ಹಾಗೇ ನೋಡಿದ್ರೆ ಸೆಹ್ವಾಗ್ ಮತ್ತು ರಿಷಬ್ ಪಂತ್ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಸೆಹ್ವಾಗ್ ರಂತೆ ಎದುರಿಸುವ ಮೊದಲ ಎಸೆತವನ್ನೇ ಸಿಕ್ಸರ್ ಅಥವಾ ಬೌಂಡ್ರಿ ಬಾರಿಸಬೇಕು. ಶತಕವನ್ನು ಕೂಡ ಬೌಂಡ್ರಿ ಮತ್ತು ಸಿಕ್ಸರ್ ನೊಂದಿಗೆ ಸಂಭ್ರಮಿಸಬೇಕು. ಹಾಗೇ ಬೇಜವಾಬ್ದಾರಿ ಹೊಡೆತಗಳಿಗೆ ಔಟಾಗುವುದು.. ಎಂಥ ಸಂಕಷ್ಟದಲ್ಲೂ ನೈಜ ಆಟವನ್ನಾಡೊದು. ಸದಾ ಆಕ್ರಮಣಕಾರಿ ಆಟವನ್ನಾಡೋದು.. ಪಂದ್ಯದ ಗತಿಯನ್ನು ಬದಲಾಸಿಯೋದು ಹೀಗೆ ಸಾಕಷ್ಟು ವಿಚಾರಗಳಲ್ಲಿ ಸೆಹ್ವಾಗ್ ಬ್ಯಾಟಿಂಗ್ ಶೈಲಿಯಂತೆ ರಿಷಬ್ ಪಂತ್ ಕೂಡ ಬ್ಯಾಟ್ ಬೀಸ್ತಾರೆ.
ಇದೀಗ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಅದ್ಭುತವಾದ ಶತಕವನ್ನು ದಾಖಲಿಸಿದ್ದಾರೆ.
ರಿಷಬ್ ಪಂತ್ ಶತಕದ ಬಗ್ಗೆ ಸಚಿನ್ ತೆಂಡುಲ್ಕರ್, ಸಂಜಯ್ ಮಾಂಜ್ರೆಕರ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ವೀರೇಂದ್ರ ಸೆಹ್ವಾಗ್ ಕೂಡ ರಿಷಬ್ ಪಂತ್ ಶತಕದ ಬಗ್ಗೆ ಟ್ವಿಟ್ ಮಾಡಿದ್ದಾರೆ. Ind Vs Eng test match -Rishabh Pant – Virender Sehwag ‘most entertaining cricketer
ರಿಷಬ್ ಪಂತ್ ತಮ್ಮದೇ ಆದ ಹಾದಿಯಲ್ಲಿದ್ದಾರೆ. ವಿಶ್ವದ ಮನರಂಜನೆಯ ಕ್ರಿಕೆಟಿಗ. ಇದೊಂದು ಸ್ಪೇಷಲ್ ಎಂದು ಸೆಹ್ವಾಗ್ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಸೆಹ್ವಾಗ್ ಟ್ವಿಟ್ ಗೆ ಪ್ರತಿಕ್ರಿಯಿಸಿರುವ ರಿಷಬ್ ಪಂತ್, ವೀರೇಂದ್ರ ಸೆಹ್ವಾಗ್ ಭಯ್ಯಾ.. ಲವ್ ದಿಸ್.. ನೀವು ಅತ್ಯಂತ ಶ್ರೇಷ್ಠ ಮತ್ತು ಅತ್ಯುತ್ತಮರಲ್ಲಿ ಒಬ್ಬರು ಎಂದಿದ್ದಾರೆ.
ಒಟ್ಟಿನಲ್ಲಿ ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧ ಆಡಿದ ಪರಿಗೆ ಇಡೀ ಕ್ರಿಕೆಟ್ ಜಗತ್ತು ಕೂಡ ಅಚ್ಚರಿಗೊಂಡಿದೆ.