ಚೀನಾದ ಹ್ಯಾಂಗ್ಝೌ (Hangzhou)ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ಕ್ರಿಕೆಟ್ ತಂಡ ಪಾಲ್ಗೊಳ್ಳುವುದು ಅನುಮಾನವಾಗಿದೆ. 8 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್ನಲ್ಲಿ ಕ್ರಿಕೆಟ್ ಕಾಣಿಸಿಕೊಂಡಿದ್ದರೂ ಭಾರತದ ಪುರುಷರ ಮತ್ತು ಮಹಿಳೆಯರ ತಂಡ ಭಾಗವಹಿಸುವುದು ಅನುಮಾನವಾಗಿದೆ. ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್ಗೆ ಮೊದಲು, ಆಟಗಾರರ ಇಂಜುರಿ ಸಮಸ್ಯೆ ತಪ್ಪಿಸಲು ಟೀಂ ಇಂಡಿಯಾ ಏಷ್ಯನ್ ಗೇಮ್ಸ್ನಿಂದ ಹಿಂದೆ ಸರಿಯಲಿದೆ ಎಂದು ಹೇಳಲಾಗುತ್ತಿದೆ.
ಏಷ್ಯನ್ ಗೇಮ್ಸ್ ವೇಳೆಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ಗೆ 3 ODI ಮತ್ತು 3 T20 ಸರಣಿಗಳನ್ನು ಆಡಲು ತೆರಳಲಿದೆ. ಹೀಗಾಗಿ ಮಹಿಳಾ ತಂಡದ ಭಾಗವಹಿಸುವಿಕೆ ಕೂಡ ಅನುಮಾನವಾಗಿದೆ.
2010 ಮತ್ತು 2014ರ ಏಷ್ಯನ್ ಗೇಮ್ಸ್ನಲ್ಲಿ ಕ್ರಿಕೆಟ್ ಕೂಟದ ಭಾಗವಾಗಿತ್ತು. ಆದರೆ ಬ್ಯುಸಿ ಶೆಡ್ಯುಲ್ ಕಾರಣದಿಂದ ಭಾರತ ತಂಡ ಭಾಗವಹಿಸಿರಲಿಲ್ಲ. 2018ರಲ್ಲಿ ಕ್ರಿಕೆಟ್ ಏಷ್ಯನ್ ಗೇಮ್ಸ್ ಭಾಗವಾಗಿರಲಿಲ್ಲ. ಈ ಬಾರಿ ಏಷ್ಯನ್ ಗೇಮ್ಸ್ ಸೆಪ್ಟಂಬರ್ 10 ರಿಂದ ಸೆಪ್ಟಂಬರ್ 25ರವರೆಗೆ ನಡೆಯಲಿದೆ.