ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಫೋರ್ ಸಿಕ್ಸರ್ಗಳ ಸುರಿಮಳೆ. ಸೂರ್ಯ ಕುಮಾರ್ ಯಾದವ್ 360 ಡಿಗ್ರಿ ಆಟಕ್ಕೆ ಕೆರಿಬಿಯನ್ಸ್ ಮಕಾಡೆ ಮಲಗಿದ್ರು. ಬೌಲಿಂಗ್ನಲ್ಲಿ ಹರ್ಷಲ್, ಶಾರ್ದೂಲ್ ಮತ್ತು ವೆಂಕಟೇಶ್ ಅಯ್ಯರ್ ಮೋಡಿಗೆ ವಿಂಡೀಸ್ ಸೋತು ಹೋಯಿತು. 3 ಪಂದ್ಯಗಳ ಟಿ20 ಸರಣಿಯಲ್ಲೂ ವೆಸ್ಟ್ಇಂಡೀಸ್ ವೈಟ್ವಾಷ್ ಮುಖಭಂಗಕ್ಕೆ ಒಳಗಾಯಿತು.
2ನೇ ಪಂದ್ಯದಲ್ಲೇ ಸರಣಿ ಗೆದ್ದಿದ್ದ ಟೀಮ್ ಇಂಡಿಯಾ ಹಲವು ಬದಲಾವಣೆ ಜೊತೆ ಕಣಕ್ಕಿಳಿಯಿತು. ರುತುರಾಜ್ ಗಾಯಕ್ವಾಡ್ ಮತ್ತು ಇಶನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ರುತುರಾಜ್ 4 ರನ್ನಷ್ಟೇ ಗಳಿಸಿದರು. ಶ್ರೇಯಸ್ ಅಯ್ಯರ್ 16 ಎಸೆತಗಳಲ್ಲಿ 25 ರನ್ ಸಿಡಿಸಿ ಔಟಾದರು. 31 ಎಸೆತಗಳಲ್ಲಿ 34 ರನ್ಗಳಿಸಿದ್ದ ಇಶನ್ ಕಿಶನ್ ಚೇಸ್ಗೆ ವಿಕೆಟ್ ಒಪ್ಪಿಸಿದರು. ನಾಯಕ ರೋಹಿತ್ ಶರ್ಮಾ ಗಳಿಕೆ ಕೇವಲ 7 ರನ್ ಮಾತ್ರ.
14 ಓವರುಗಳಲ್ಲಿ 93 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು 93 ರನ್ಗಳಿಸಿದ್ದ ಭಾರತಕ್ಕೆ ಆಸರೆಯಾಗಿದ್ದು ಸೂರ್ಯಕುಮಾರ್ ಯಾದವ್ ಮತ್ತು ವೆಂಕಟೇಶ್ ಅಯ್ಯರ್. ವಿಂಡೀಸ್ ಬೌಲರ್ಗಳ ಪ್ರತಿಯೊಂದು ಎಸೆತವನ್ನೂ ಬೆಂಡೆತ್ತಿದ್ದ ಈ ಜೋಡಿ ಎಲ್ಲಾ ಲೆಕ್ಕಾಚಾರಗಳನ್ನು ಬದಲಿಸಿತು. ಸೂರ್ಯ ಶಿಖಾರಿಯಲ್ಲಿ 7 ಅಮೋಘ ಸಿಕ್ಸರ್ಗಳು ಮತ್ತು 1 ಫೋರ್ ಒಳಗೊಂಡಿತ್ತು. ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ಔಟಾಗುವ ಮೊದಲು ಸೂರ್ಯ ಕೇವಲ 31 ಎಸೆತಗಳಲ್ಲಿ 65 ರನ್ ಸಿಡಿಸಿದ್ದರು. ಇನ್ನೊಂದೆಡೆ ವೆಂಕಟೇಶ್ ಅಯ್ಯರ್ 19 ಎಸೆತಗಳಲ್ಲಿ 4 ಫೋರ್ ಮತ್ತು 2 ಸಿಕ್ಸರ್ ನೆರವಿನಿಂದ ಅಜೇಯ 35 ರನ್ಗಳಿಸಿದರು. 20 ಓವರುಗಳಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 184 ರನ್ಗಳಿಸಿತು.
ಮತ್ತೊಮ್ಮೆ ದೊಡ್ಡ ಗುರಿಯನ ಚೇಸಿಂಗ್ ಆರಂಭಿಸಿದ ವಿಂಡೀಸ್ ಮೊದಲ ಓವರ್ನಲ್ಲಿ ಕೈಲ್ ಮೇಯರ್ಸ್ ರನ್ನು ಕಳೆದುಕೊಂಡಿತು. ದೀಪಕ್ ಚಾಹರ್ ಶಾಯ್ ಹೋಪರನ್ನು 2ನೇ ಬಲಿಯಾಗಿ ಪಡೆದರು. ನಿಕೊಲಸ್ ಪೂರನ್ ಮತ್ತು ರೋಮ್ವನ್ ಪೊವೆಲ್ ಮತ್ತೆ ಸಿಡಿಯುವ ಸೂಚನೆ ನೀಡಿದರು. ಪ 14 ಎಸೆತಗಳಲ್ಲಿ 25 ರನ್ಗಳಿಸಿದ್ದ ಪೊವೆಲ್ ಹರ್ಷಲ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. ದಾಳಿಗಿಳಿದ ವೆಂಕಟೇಶ್ ಅಯ್ಯರ್ ಪೊಲ್ಲಾರ್ಡ್ (5) ಹಾಗೂ ಹೋಲ್ಡರ್ (2) ವಿಕೆಟ್ಗಳನ್ನು ಬೇಗನೆ ಪಡೆದರು. ಹರ್ಷಲ್ ರೋಸ್ಟನ್ ಚೇಸ್ (12) ರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಟೀಮ್ ಇಂಡಿಯಾ ಇನ್ನೇನು ಪಂದ್ಯ ಗೆದ್ದೇ ಬಿಡ್ತು ಅನ್ನುವಾಗ ಕಾಡಿದ್ದು ಪೂರನ್ ಮತ್ತು ರೊಮರಿಯೋ ಶೆಫರ್ಡ್. ಪೂರನ್ 47 ಎಸೆತಗಳಲ್ಲಿ 61ರನ್ ಸಿಡಿಸಿ ಥಾಕೂರ್ಗೆ ವಿಕೆಟ್ ಒಪ್ಪಿಸಿದಾಗ ಟೀಮ್ ಇಂಡಿಯಾ ನಿರಾಳವಾಗಿತ್ತು. ರೊಮರಿಯೊ ಶೆರ್ಫಡ್ 29 ರನ್ಗಳಿಸಿ ನಿರ್ಗಮಿಸಿದರು. ಡಾಮಿನಿಕ್ ಡ್ರೇಕ್ಸ್ ಥಾಕೂರ್ಗೆ ಬಲಿಯಾದರು. ವಿಂಡೀಸ್ 20 ಒವರುಗಳಲ್ಲಿ 167 ರನ್ಗಳಿಸಿ 17 ರನ್ಗಳ ಸೋಲನುಭವಿತು. 3 ಪಂದ್ಯಗಳ ಟಿ20 ಸರಣಿಯಲ್ಲಿ ವೈಟ್ವಾಷ್ ಅವಮಾನ ಅನುಭವಿಸಿತು.