ಏಷ್ಯಾಕಪ್‌ನಲ್ಲಿ ಭಾರತ ಹಾಕಿ ತಂಡ ಕಂಚಿನ ಸಾಧನೆ ಮಾಡಿದೆ. ಮೂರನೇ ಸ್ಥಾನಕ್ಕಾಗಿ ಬುಧವಾರ ನಡೆದ ಪಂದ್ಯದಲ್ಲಿ ಭಾರತ 1-0 ಗೋಲುಗಳಿಂದ ಜಪಾನ್ ತಂಡವನ್ನು ಮಣಿಸಿತು.
ರಾಜ್‌ಕುಮಾರ್ ಪಾಲ್ ಏಕೈಕ ಗೋಲು ದಾಖಲಿಸಿದರು. ಸೂಪರ್-4 ರ ತಮ್ಮ ಕೊನೆಯ ಪಂದ್ಯದಲ್ಲಿ, ದಕ್ಷಿಣ ಕೊರಿಯಾ ವಿರುದ್ಧ 4-4 ಡ್ರಾ ಸಾಧಿಸಿದ ಕಾರಣ ಭಾರತ ತಂಡವು ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಆ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲುವುದು ಅನಿವಾರ್ಯವಾಗಿತ್ತು. ಫೈನಲ್ ಪಂದ್ಯ ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ನಡುವೆ ನಡೆಯಲಿದೆ.

ಟೀಂ ಇಂಡಿಯಾ ಆರಂಭದಿಂದಲೂ ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು. ಮೊದಲ ಕ್ವಾರ್ಟರ್ ನ 7ನೇ ನಿಮಿಷದಲ್ಲಿ ರಾಜ್ ಕುಮಾರ್ ಪಾಲ್ ಟೀಮ್ ಇಂಡಿಯಾ ಪರ ಗೋಲು ದಾಖಲಿಸಿದರು. ಇದಾದ ಬಳಿಕ ಜಪಾನ್ ತಂಡ ನಿರಂತರವಾಗಿ ಗೋಲು ಗಳಿಸಲು ಯತ್ನಿಸಿದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಭಾರತದಿಂದಲೂ ಯಾವುದೇ ಗೋಲು ಬರಲಿಲ್ಲ.
2017ರಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಟೀಮ್ ಇಂಡಿಯಾ ವಿಜೇತವಾಗಿತ್ತು. ನಂತರ ಮಲೇಷ್ಯಾವನ್ನು 2-1 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಈ ಬಾರಿಯ ಟೂರ್ನಿಯಲ್ಲಿ ಭಾರತ ಹೊಸ ಪ್ರಯೋಗಗಳನ್ನು ಮಾಡಿ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದೆ. ತಂಡದ ನಾಯಕತ್ವವನ್ನು ಬಿರೇಂದರ್ ಲಾಕ್ರಾ ಅವರಿಗೆ ನೀಡಲಾಗಿತ್ತು.