ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು ಕ್ರಿಕೆಟ್ ಮೈದಾನದ ಕಡುಬದ್ಧ ವೈರಿಗಳು. ಆದರೆ ರಾಜತಾಂತ್ರಿಕ ಕಾರಣದಿಂದ ಎಡು ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ. ಆದ್ರೆ ಐಸಿಸಿ ಈವೆಂಟ್ನಲ್ಲಿ ಎರಡೂ ತಂಡಗಳು ಮುಖಾಮುಖಿಯಾದಾಗ ಸಿಕ್ಕಾಪಟ್ಟೆ ಕ್ರೇಜ್ ಇರುತ್ತದೆ. ಈ ವರ್ಷ ಒಟ್ಟು 5 ಬಾರಿ ಇಂಡೋ-ಪಾಕ್ ಮ್ಯಾಚ್ ನಡೆಯುವ ಸಾಧ್ಯತೆ ಇದೆ.
ಈ 5 ಪಂದ್ಯಗಳು ಕೂಡ ಟಿ20 ಹೋರಾಟವಾಗಿರುತ್ತದೆ. ಮೊದಲಿಗೆ ಏಷ್ಯಕಪ್ ಲೀಗ್ನಲ್ಲಿ ಈ ಎರಡು ತಂಡಗಳು ಹೋರಾಟ ಮಾಡಲಿವೆ. ಇವೆರಡು ಬಲಿಷ್ಠ ತಂಡಗಳಾಗಿರುವುದರಿಂದ ಸೂಪರ್ 4 ಹಂತಕ್ಕೆ ಏರುತ್ತವೆ ಅನ್ನುವ ಲೆಕ್ಕಾಚಾರವಿದೆ. ಸೂಪರ್ 4 ನಲ್ಲಿ ಮತ್ತೆ ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದರೆ ಮತ್ತೆ ಫೈನಲ್ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಶ್ರೀಲಂಕಾದಲ್ಲಿ ನಡೆಯುವ ಏಷ್ಯಾಕಪ್ ಟೂರ್ನಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ.
ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ನಡುವೆ ಎಷ್ಟು ಪಂದ್ಯ ನಡೆದರೂ ಅಭಿಮಾನಿಗಳಿಗೆ ಬೋರ್ ಆಗುವುದಿಲ್ಲ. ಕಳೆದ ಟಿ20 ವಿಶ್ವಕಪ್ ಲೀಗ್ ಪಂದ್ಯದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಪಂದ್ಯಗಳು ನಡೆದಿಲ್ಲ.