Ind VS WI : ಭಾರತ VS ವೆಸ್ಟ್‌ಇಂಡೀಸ್ ಸರಣಿ ಕಂಪ್ಲೀಟ್ ಶೆಡ್ಯೂಲ್, ಮ್ಯಾಚ್ ಯಾವಾಗ? ಎಲ್ಲಿ..?

ಟೀಮ್ ಇಂಡಿಯಾ ಮತ್ತು ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಗೆ ಲೆಕ್ಕಾಚಾರ ಶುರುವಾಗಿದೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸಮಬಲ, ಏಕದಿನ ಸರಣಿ ಹಾಗೂ ಟಿ20 ಸರಣಿಯಲ್ಲಿ ಗೆಲುವು ಸಾಧಿಸಿರುವುದು ಟೀಮ್ ಇಂಡಿಯಾದ ಆತ್ಮವಿಶ್ವಾಸ ಹೆಚ್ಚಿಸಿದೆ. ಪೋರ್ಟ್ ಆಫ್ ಸ್ಪೇನ್‌ಗೆ ಕಾಲಿಟ್ಟಿರುವ ಭಾರತ ಹೊಸ ಭರವಸೆಗಳನ್ನು ಹೊಂದಿದೆ.
ವೆಸ್ಟ್‌ಇಂಡೀಸ್‌ನಲ್ಲಿ ಭಾರತ ಒಟ್ಟು 8 ಪಂದ್ಯಗಳನ್ನು ಆಡಲಿದೆ. ಈ ಪೈಕಿ ೫ ಪಂದ್ಯಗಳು ಟಿ20 ಪಂದ್ಯ ಆಗಿದೆ. ಉಳಿದ 3 ಪಂದ್ಯಗಳು ಏಕದಿನ ಸರಣಿಯ ಭಾಗವಾಗಿದೆ. ಏಕದಿನ ಸರಣಿಯಲ್ಲಿ ತಂಡವನ್ನು ಶಿಖರ್ ಧವನ್ ಮುನ್ನಡೆಸುತ್ತಿದ್ದಾರೆ. ಟಿ20ಯಲ್ಲಿ ರೋಹಿತ್ ಶರ್ಮಾ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ.
ಏಕದಿನ ಸರಣಿ ಶೆಡ್ಯೂಲ್
ಮೊದಲ ಏಕದಿನ: ಜುಲೈ 22, ಪೋರ್ಟ್ ಆಫ್ ಸ್ಪೇನ್
2ನೇ ಏಕದಿನ: ಜುಲೈ 24, ಪೋರ್ಟ್ ಆಫ್ ಸ್ಪೇನ್
3ನೇ ಏಕದಿನ: ಜುಲೈ 27, ಪೋರ್ಟ್ ಆಫ್ ಸ್ಪೇನ್
ಏಕದಿನ ಸರಣಿಯ ಬೆನ್ನಹಿಂದೆಯೇ ಟಿ20 ಸರಣಿಯ ಪಂದ್ಯಗಳು ನಡೆಯಲಿವೆ. ಟೀಮ್ ಇಂಡಿಯಾಕ್ಕೆ ಈ ಸರಣಿಯಲ್ಲಿ ಹೆಚ್ಚು ವಿರಾಮ ಸಿಗುತ್ತಿಲ್ಲ. ಪ್ರತಿದಿನವೂ ಪಂದ್ಯ ಅನ್ನುವ ಮಟ್ಟಕ್ಕೆ ಟೀಮ್ ಇಂಡಿಯಾದ ಶೆಡ್ಯೂಲ್ ಫಿಕ್ಸ್ ಆಗಿದೆ.
ಟಿ20 ಶೆಡ್ಯೂಲ್
1ನೇ ಟಿ20: ಜುಲೈ 29, ಟರೌಬ
2ನೇ ಟಿ20: ಆಗಸ್ಟ್ 01, ಬಸಟೆರ್
3ನೇ ಟಿ20: ಆಗಸ್ಟ್ 02: ಬಸಟೆರ್
4ನೇ ಟಿ20: ಆಗಸ್ಟ್ 06: ಲಾಡರ್‌ಹಿಲ್
5ನೇ ಟಿ20: ಆಗಸ್ಟ್ 07: ಲಾಡರ್‌ಹಿಲ್
ವೆಸ್ಟ್ ಇಂಡೀಸ್ ಸರಣಿ ಬಳಿಕ ಭಾರತ ಸಣ್ಣ ಬ್ರೇಕ್ ಪಡೆಯಬಹುದು. ಆದರೆ ಏಷ್ಯಾಕಪ್ ಟೆನ್ಷನ್ ಎದುರಿಗಿದೆ. ಒಟ್ಟಿನಲ್ಲಿ ಭಾರತ ಫ್ರೀ ಇಲ್ಲದೆ ಕ್ರಿಕೆಟ್ ಆಡುತ್ತಿದೆ ಅನ್ನುವುದು ಸತ್ಯ.