BenStokes : ಕಟ್ಟಕಡೆಯ ಏಕದಿನ ಪಂದ್ಯ ಆಡುತ್ತಿರುವ ಬೆನ್ ಸ್ಟೋಕ್ಸ್,
ಬೆಸ್ಟ್ ಆಲ್‌ರೌಂಡರ್‌ಗೆ ಗೆಲುವಿನ ವಿದಾಯ ಹೇಳಲು ಇಂಗ್ಲೆಂಡ್ ಪ್ಲಾನ್

ವಿಶ್ವದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಬೆನ್‌ಸ್ಟೋಕ್ಸ್‌ಗೆ ವಿಶೇಷ ಸ್ಥಾನವಿದೆ. ಆಂಡ್ರ್ಯೂ ಫ್ಲಿಂಟಾಫ್ ಬಳಿಕ ಇಂಗ್ಲೆಂಡ್‌ಗೆ ಸಿಕ್ಕ ಬೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಸ್ಟೋಕ್ಸ್ ಗೆ ಸ್ಥಾನವಿದೆ. ಇಂಗ್ಲೆಂಡ್ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಬೆನ್‌ಸ್ಟೋಕ್ಸ್ ಕೊಡುಗೆ ಅತ್ಯಮೂಲ್ಯ. ಹೀಗಾಗಿ ಬೆನ್‌ಸ್ಟೋಕ್ಸ್ ಬಗ್ಗೆ ಇಂಗ್ಲೆಂಡ್ ಆಟಗಾರರಿಗೂ ದೊಡ್ಡ ಗೌರವದ ಜೊತೆಗೆ ಆತ್ಮೀಯತೆ ಇದೆ.
ಅಚ್ಚರಿ ಅಂದರೆ ಇಂಗ್ಲೆಂಡ್ ತಂಡಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಇಯಾನ್ ಮೋರ್ಗಾನ್ ಕೂಡ ಕೆಲ ದಿನಗಳ ಹಿಂದೆ ನಿವೃತ್ತಿ ಘೋಸಿದ್ದರು. ಆದರೆ ಮೊರ್ಗಾನ್‌ಗೆ ನಿವೃತ್ತಿಯ ಪಂದ್ಯ ಆಡುವ ಅವಕಾಶವೂ ಸಿಗಲಿಲ್ಲ. ಆದರೆ ಬೆನ್ ಸ್ಟೋಕ್ಸ್‌ಗೆ ಆ ಅವಕಾಶ ಸಿಗುತ್ತಿದೆ. ಡರ್ಹಾಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಪಂದ್ಯ ಬೆನ್ ಸ್ಟೋಕ್ಸ್ ಪಾಲಿಗೆ ಕಟ್ಟಕಡೆಯ ಅಂತರಾಷ್ಟ್ರೀಯ ಪಂದ್ಯವಾಗಿದೆ.

ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ಬೆನ್‌ಸ್ಟೋಕ್ಸ್ ಆಡಿದ್ದರು. ಆದರೆ ಆ ಸರಣಿಯಲ್ಲಿ ಬೆನ್ ಸ್ಟೋಕ್ಸ್ ಹೆಚ್ಚು ಮಿಂಚಲಿಲ್ಲ. ಬೌಲಿಂಗ್‌ನಲ್ಲಾಗಲಿ ಬ್ಯಾಟಿಂಗ್‌ನಲ್ಲಾಗಲಿ ಸ್ಟೋಕ್ಸ್ ಹೆಚ್ಚು ಕೊಡುಗೆ ನೀಡಲಿಲ್ಲ. ಆದರೆ ಕೊನೆಯ ಪಂದ್ಯದಲ್ಲ ಸ್ಟೋಕ್ಸ್ ಅದ್ಭುತ ಆಟ ಆಡಬೇಕು ಅನ್ನುವ ಉತ್ಸಾಹದಲ್ಲಿದ್ದಾರೆ. ಅವರ ಅಭಿಮಾನಿಗಳು ಅದೇ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.
ಬೆನ್‌ಸ್ಟೋಕ್ಸ್ ಟಿ೨೦ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನಷ್ಟು ದಿನ ಆಡುತ್ತಾರೆ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ರಿಯಲ್ ಚಾಂಪಿಯನ್ ತರಹ ಆಡುತ್ತಿದ್ದರು. ಬ್ಯಾಟಿಂಗ್ ಮಾತ್ರ ಅಲ್ಲ, ಬೌಲಿಂಗ್, ಫೀಲ್ಡಿಂಗ್‌ನಲ್ಲೂ ಅದ್ಭುತ ಕೊಡುಗೆಗಳನ್ನು ನೀಡಿದ್ದರು. ಈಗ ಇಂಗ್ಲೆಂಡ್ ತನ್ನ ಶ್ರೇಷ್ಠ ಆಟಗಾರನಿಗೆ ಅದ್ದೂರಿಯ ವಿದಾಯ ನೀಡಲು ಸಿದ್ಧತೆ ಮಾಡಿಕೊಂಡಿದೆ. ಗೆಲುವಿನ ಮೂಲಕ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದರೆ ಬೆನ್ ಸ್ಟೋಕ್ಸ್‌ಗೂ ಒಂದು ಸಮಾಧಾನ ಇದ್ದೇ ಇರುತ್ತದೆ.
ಒಟ್ಟಿನಲ್ಲಿ ವಿಶ್ವದ ಸಾರ್ವಕಾಲೀಕ ಆಲ್‌ರೌಂಡರ್‌ನ ಕಟ್ಟಕಡೆಯ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ದಕ್ಷಿಣ ಆಫ್ರಿಕಾದ ಆಟಗಾರರು ಕೂಡ ಬೆನ್‌ಸ್ಟೋಕ್ಸ್‌ಗೆ ವಿದಾಯ ಹೇಳಲು ಸಿದ್ಧರಾಗಿದ್ದಾರೆ.