Ind vs WI : ಟೀಮ್ ಇಂಡಿಯಾದ ಅಭ್ಯಾಸಕ್ಕೆ ವರುಣನ ಅಡ್ಡಿ..!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಜುಲೈ 22ರಂದು ನಡೆಯಲಿದೆ.
ರಾಹುಲ್ ದ್ರಾವಿಡ್ ಮಾರ್ಗದರ್ಶನ ಮತ್ತು ಶಿಖರ್ ಧವನ್ ಸಾರಥ್ಯದ ಟೀಮ್ ಇಂಡಿಯಾ ಈಗಾಗಲೇ ಅಭ್ಯಾಸದಲ್ಲಿ ನಿರತವಾಗಿದೆ.

ಆದ್ರೆ ಟೀಮ್ ಇಂಡಿಯಾದ ಮೊದಲ ದಿನದ ನೆಟ್ಸ್ ಅಭ್ಯಾಸಕ್ಕೆ ಮಳೆರಾಯ ಅಡ್ಡಿಯನ್ನುಂಟು ಮಾಡಿದ್ದಾನೆ. ಹೀಗಾಗಿ ಶಿಖರ್ ಧವನ್ ಬಳಗ ಒಳಾಂಗಣದಲ್ಲಿ ಅಭ್ಯಾಸ ನಡೆಸಬೇಕಾಯ್ತು.
ಟೀಮ್ ಇಂಡಿಯಾ ಆಟಗಾರರು ಒಳಾಂಗಣದ ನೆಟ್ಸ್ ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದೆ. ಅಲ್ಲದೆ ಈ ವಿಡಿಯೋದಲ್ಲಿ ಅಲ್ಲಿನ ವಾತಾವರಣದ ಬಗ್ಗೆ ಟೀಮ್ ಇಂಡಿಯಾದ ಯುವ ಆಟಗಾರ ಶುಬ್ಮನ್ ಗಿಲ್ ಮಾತನಾಡಿದ್ದಾರೆ.

ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್, ಬೂಮ್ರಾ, ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆದ್ರೆ ಟಿ-20 ಸರಣಿಗೆ ರೋಹಿತ್, ಪಂತ್, ಬೂಮ್ರಾ ಮತು ಪಾಂಡ್ಯ ತಂಡವನ್ನು ಸೇರಿಕೊಳ್ಳಲಿದ್ದಾರೆ.
Gearing up for ODI No.1 against the West Indies 💪
Here's @ShubmanGill giving a lowdown on #TeamIndia's 🇮🇳 first net session in Trinidad 🇹🇹#WIvIND pic.twitter.com/oxF0dHJfOI
— BCCI (@BCCI) July 21, 2022
ವೆಸ್ಟ್ ಇಂಡೀಸ್ ಏಕದಿನ ಸರಣಿಯ ಭಾರತ ತಂಡ ಹೀಗಿದೆ.
ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶಾನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಥಾಕೂರ್, ಯುಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ದ್ ಕೃಷ್ಣ, ಮುಹಮ್ಮದ್ ಸೀರಾಜ್, ಆರ್ಶಾದೀಪ್ ಸಿಂಗ್