Harbhajan Singh – ಲೆಜೆಂಡ್ ಕ್ರಿಕೆಟ್ ಲೀಗ್ ಗೆ ಹರ್ಭಜನ್ ಸಿಂಗ್ ಎಂಟ್ರಿ..!
ಟೀಮ್ ಇಂಡಿಯಾದ ಟರ್ಬನೇಟರ್ ಹರ್ಭಜನ್ ಸಿಂಗ್ ಅವರು ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೌದು, ಸೆಪ್ಟಂಬರ್ ನಲ್ಲಿ ನಡೆಯಲಿರುವ ಲೆಜೆಂಡರಿ ಕ್ರಿಕೆಟ್ ಲೀಗ್ ನಲ್ಲಿ ಹರ್ಭಜನ್ ಸಿಂಗ್ ಆಡುವುದು ಖಚಿತವಾಗಿದೆ.
ಇದರೊಂದಿಗೆ ಹರ್ಭಜನ್ ಸಿಂಗ್ ಅವರು, ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಯುಸೂಫ್ ಪಠಾಣ್, ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೇಟ್ ಲೀ ಮತ್ತು ಇವರೊಂದಿಗೆ ಸೇರಿಕೊಂಡಿದ್ದಾರೆ.
ಎರಡನೇ ಆವೃತ್ತಿಯ ಲೆಜೆಂಡ್ ಕ್ರಿಕೆಟ್ ಸರಣಿಗೆ ಒಟ್ಟು 110 ಮಾಜಿ ಆಟಗಾರರು ಭಾಗವಹಿಸಲಿದ್ದಾರೆ. ಒಟ್ಟು ನಾಲ್ಕು ತಂಡಗಳು ಭಾಗವಹಿಸಲಿವೆ.
ಗ್ಲೋಬಲ್ ಲೆಜೆಂಡರಿ ಕ್ರಿಕೆಟ್ ಆಡುವ ಮೂಲಕ ನನಗೆ ಮತ್ತೊಮ್ಮೆ ಮೈದಾನದಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಸೆಪ್ಟಂಬರ್ ನಲ್ಲಿ ಆಡುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಇದೇ ವೇಳೆ ವೆಸ್ಟ್ ಇಂಡೀಸ್ ನ ಮಾಜಿ ಆಟಗಾರ ಲೆಂಡ್ಲ್ ಸಿಮೋನ್ಸ್ ಮತ್ತು ದಿನೇಶ್ ರಾಮ್‍ದಿನ್ ಕೂಡ ಈ ಬಾರಿಯ ಟೂರ್ನಿಯಲ್ಲಿ ಆಡಲಿದ್ದಾರೆ.
ಮೊದಲ ಆವೃತ್ತಿಯ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳ ಮಾಜಿ ಆಟಗಾರರು ಆಡಿದ್ದರು. ಆಗ ಮೂರು ತಂಡಗಳಿದ್ದವು. ಭಾರತ, ಏಷ್ಯಾ ಮತ್ತು ವಿಶ್ವ ಇಲೆವೆನ್ ತಂಡಗಳು ಭಾಗವಹಿಸಿದ್ದವು.