Sri Lanka T-20 squad –ಟೀಮ್ ಇಂಡಿಯಾ ವಿರುದ್ದದ ಟಿ-20 ಸರಣಿಗೆ ಲಂಕಾ ತಂಡ… ಡಸನ್ ಶನಾಕ ಸಾರಥ್ಯ..!

ಟೀಮ್ ಇಂಡಿಯಾ ವಿರುದ್ದದ ಟಿ-20 ಸರಣಿಗೆ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. ಡಸನ್ ಶನಕಾ ಅವರು ಲಂಕಾ ತಂಡದ ಸಾರಥ್ಯ ವಹಿಸಲಿದ್ದಾರೆ.
ಆದ್ರೆ ಆರಂಭಿಕ ಬ್ಯಾಟ್ಸ್ ಮೆನ್ ಆವಿಶ್ಕಾ ಫರ್ನಾಂಡೊ, ನುವಾನ್ ತುಶಾರ ಹಾಗೂ ಆಲ್ ರೌಂಡರ್ ರಮೇಶ್ ಮೆಂಡೀಸ್ ಅವರು ಭಾರತ ಪ್ರವಾಸವನ್ನು ಮಿಸ್ ಮಾಡಿಕೊಂಡಿದ್ದಾರೆ. ಈ ಮೂವರು ಆಟಗಾರರು ಆಸ್ಟ್ರೇಲಿಯಾ ಸರಣಿಯಲ್ಲಿ ಗಾಯಗೊಂಡಿದ್ದರು.
ಮೂರು ಪಂದ್ಯಗಳ ಟಿ-20 ಸರಣಿಯು ಫೆಬ್ರವರಿ 24ರಂದು ಲಕ್ನೋದಲ್ಲಿ ನಡೆಯಲಿದೆ. ಹಾಗೇ ಫೆಬ್ರವರಿ 26 ಮತ್ತು 27ರಂದು ಧರ್ಮಶಾಲಾದಲ್ಲಿ ನಡೆಯಲಿದೆ.
ಟಿ-20 ಸರಣಿಯ ನಂತರ ಭಾರತ ಮತ್ತು ಶ್ರೀಲಂಕಾ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಮಾರ್ಚ್ 4 ರಿಂದ 8ರವರೆಗೆ ಮೊಹಾಲಿಯಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಇಲ್ಲಿ ವಿರಾಟ್ ಕೊಹ್ಲಿ ನೂರನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಬಳಿಕ ಮಾರ್ಚ್ 12ರಿಂದ 16ರವರೆಗೆ ಬೆಂಗಳೂರಿನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. IND vs SL; Dasun Shanaka to lead Sri Lanka against India in T20Is
ಶ್ರೀಲಂಕಾ ಟಿ-20 ತಂಡ
ಡಸನ್ ಶನಾಕ (ನಾಯಕ), ಪಥುಮ್ ನಿಸಾಂಕಾ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕಾ, ದಿನೇಶ್ ಚಾಂಡಿಮಲ್, ದನುಷ್ಕಾ ಗುನತಿಲಕಾ, ಕಮೀಲ್ ಮಿಶಾರ, ಜನಿತ್ ಲಿಯಾನಗೆ, ವನಿಂದು ಹಸರಂಗ, ದುಷ್ಮಂತ ಚಾಮೀರಾ, ಲಹಿರು ಕುಮಾರ, ಬಿನುರಾ ಫರ್ನಾಂಡೊ, ಶಿರನ್ ಫರ್ನಾಂಡೊ, ಮಹೀಶ್ ತಿಕ್ಷಣ, ಜೆಫ್ರಿ ವಂಡೆರ್ಸೆ, ಪ್ರವೀಣ್ ಜಯವಿಕ್ರಮ, ಆಶಿಯನ್ ಡೇನಿಯಲ್.