Ind VS SA : ಇಂದೋರ್‌ನಲ್ಲಿ ಔಪಚಾರಿಕ ಪಂದ್ಯ, ಕ್ಲೀನ್‌ಸ್ವೀಪ್ ಕನಸಲ್ಲಿ ಭಾರತ
ಭಾರತ ಮತ್ತು ದಕ್ಷಿಣ ಆಫ್ರಿಕಾ (Ind VS SA) ನಡುವಿನ ಟಿ20 ಸರಣಿಯಲ್ಲಿ (T20 Series) ಎಲ್ಲಾ ಲೆಕ್ಕಾಚಾರಗಳು ಮುಗಿದಿವೆ. ತಿರುವನಂತರಪುರ ಮತ್ತು ಗುವಾಹಟಿಯಲ್ಲಿ ಗೆದ್ದ ಭಾರತ (Ind) ಸರಣಿ ಗೆದ್ದಿದೆ. ಇಂದೋರ್‌ನಲ್ಲಿ (Indore) ಅಂತಿಮ ಪಂದ್ಯ ಶೆಡ್ಯೂಲ್ ಆಗಿದ್ದರೂ ಜಸ್ಟ್ ಔಪಚಾರಿಕವಾಗಿದೆ. ಕ್ಲೀನ್‌ಸ್ವೀಪ್ ಕನಸು (Clean Sweep) ಭಾರತದ್ದಾದರೆ, ದಕ್ಷಿಣ ಆಫ್ರಿಕಾ (SA) ಮಾನ ಉಳಿಸಿಕೊಳ್ಳಲು ಪರದಾಟ ನಡೆಸುತ್ತಿದೆ.
ಟೀಮ್ ಇಂಡಿಯಾದಲ್ಲಿ (India) ಸಣ್ಣ ಬದಲಾವಣೆಯಾಗಬಹುದು. ನಾಯಕ ರೋಹಿತ್ ಶರ್ಮಾ (Rohit Sharma), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ (Virat kohli) ಮತ್ತು ಸೂರ್ಯ ಕುಮಾರ್ (Surya Kumar Yadav) ಪೈಕಿ ಇಬ್ಬರಿಗೆ ವಿರಾಮ ಸಿಗಬಹುದು. ಇವರ ಜಾಗದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಸಿರಾಜ್ ಅವಕಾಶ ಪಡೆಯಬಹುದು. ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್‌ಗೆ ಹೆಚ್ಚಿನ ಬ್ಯಾಟಿಂಗ್‌ಗೆ ಅವಕಾಶ ಸಿಗಲಿದೆ. ಅಕ್ಸರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಬೌಲಿಂಗ್ ಆಲ್‌ರೌಂಡರ್‌ಗಳು. ಇವರ ಜೊತೆ ಯಜುವೇಂದ್ರ ಚಹಲ್ ಕೂಡ ಆಡಬಹುದ. ದೀಪಕ್ ಚಹರ್, ಅರ್ಶದೀಪ್ ಮತ್ತು ಹರ್ಷಲ್ ಪಟೇಲ್ ಫಾಸ್ಟ್ ಬೌಲರ್‌ಗಳು. ಇವರಿಗೆ ಇನ್ನೂ ಹೆಚ್ಚಿನ ಅಭ್ಯಾಸ ಸಿಗಲು ಈ ಪಂದ್ಯವನ್ನು ಬಳಸಿಕೊಳ್ಳಬಹುದು.
ದಕ್ಷಿಣ ಆಫ್ರಿಕಾ (South Africa) ತಂಡ ಬ್ಯಾಟಿಂಗ್ ಕಡೆ ಹೆಚ್ಚು ಗಮನಕೊಡಬೇಕಿದೆ. ಕ್ವಿಂಟಾನ್ ಡಿ ಕಾಕ್ (Quinton decock) ಮತ್ತು ತೆಂಬಾ ಬವುಮಾ (Temba Bavuma) ಉತ್ತಮ ಆರಂಭ ತಂದುಕೊಡಬೇಕಿದೆ. ರಿಲೇ ರುಸ್ಸೋ, ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಮಿಲ್ಲರ್ ಮತ್ತು ಮಾರ್ಕ್‌ರಾಂ ದೊಡ್ಡ ಇನ್ನಿಂಗ್ಸ್ ಕಟ್ಟಲೇಬೇಕಿದೆ. ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್ ಆಲ್‌ರೌಂಡರ್‌ಗಳು. ಕಗಿಸೋ ರಬಾಡಾ, ಪಾರ್ನೆಲ್ ಮತ್ತು ಅನ್ರಿಚ್ ನೋರ್ಟ್ಜೆ ಫಾಸ್ಟ್ ಬೌಲರ್‌ಗಳು. ತಬ್ರೈಜ್ ಶಂಸಿ ಮತ್ತು ಮಹಾರಾಜ ಸ್ಪಿನ್ನರ್‌ಗಳು. ಆದರೆ ಪರಿಣಾಮಕಾರಿ ಬೌಲರ್‌ಗಳಿಗಾಗಿ ಹರಿಣಗಳ ತಂಡ ಪರದಾಡುತ್ತಿದೆ ಅನ್ನುವುದು ಸುಳ್ಳಲ್ಲ.
ಇಂದೋರ್‌ನಲ್ಲಿ ಪಿಚ್ ಮೇಲಿನ ಗಮನಕ್ಕಿಂತ ಮೈದಾನದ ಬೌಂಡರಿಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಬ್ಯಾಟಿಂಗ್ ಜೊತೆಗೆ ಚಿಕ್ಕ ಬೌಂಡರಿಗಳು ಬ್ಯಾಟ್ಸ್‌ಮನ್‌ಗಳಿಗೆ ಲಾಭ ಎಂದು ಹೇಳಲಾಗುತ್ತಿದೆ. ಇದರ ಜೊತಗೆ ಡ್ಯೂಫ್ಯಾಕ್ಟರ್ ಮೇಲೂ ಹೆಚ್ಚು ಚರ್ಚೆ ನಡೆಯುತ್ತಿದೆ. ಒಟ್ಟಿನಲ್ಲಿ ಇಂದೋರ್ ಗೇಮ್ ಔಪಚಾರಿಕವಾದರೂ ಅದರಲ್ಲಿರುವ ಲೆಕ್ಕಾಚಾರ ಬೇರೆಯದ್ದೇ ಇದೆ.