Death Over Batting : ಧೋನಿ ದಾಖಲೆ ಮುರಿದ ಮಿಲ್ಲರ್, ಇದು ಡೆತ್ ಓವರ್ ಬ್ಯಾಟಿಂಗ್ ಕಮಾಲ್
ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ (T20I) ಕಿಲ್ಕರ್ ಮಿಲ್ಲರ್ ಖ್ಯಾತಿಯ ಡೇವಿಡ್ ಮಿಲ್ಲರ್ (David Miller) ಹೊಸ ದಾಖಲೆ ಬರೆದಿದ್ದಾರೆ. ಭಾನುವಾರ ಗುವಾಹಟಿಯ (Guwahati) ಬರ್ಸಾಪುರ ಕ್ರಿಕೆಟ್ ಸ್ಟೇಡಿಯಂನಲ್ಲಿ ಡೇವಿಡ್ ಮಿಲ್ಲರ್ ಬೌಲರ್ಗಳನ್ನು ಬೆಂಡೆತ್ತಿ ಸ್ಪೋಟಕ ಶತಕ ಸಿಡಿಸಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. ಶತಕ ಸಿಡಿಸಿದರೂ ತಂಡವನ್ನು ಗೆಲ್ಲಿಸಲಿಲ್ಲ ಅನ್ನುವ ಅಪರೂಪದ ದಾಖಲೆಯನ್ನು ಮಿಲ್ಲರ್ ಬರೆದರು. ಆದರೆ ಮಿಲ್ಲರ್ ಈಗ ಟಿ20ಯ ಡೆತ್ ಓವರ್ಗಳಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್ಮನ್ (Death Over Batting) ಅನ್ನುವ ಗೌರವ ಪಡೆದುಕೊಂಡಿದ್ದಾರೆ.
ಡೆತ್ ಓವರ್ ಬ್ಯಾಟಿಂಗ್ ಸ್ಪೆಷಲಿಸ್ಟ್ ಪಟ್ಟವನ್ನು ಮಿಲ್ಲರ್ ಧೋನಿ (MS Dhoni) ಕೈಯಿಂದ ಕಿತ್ತುಕೊಂಡಿದ್ದಾರೆ. ಮಿಲ್ಲರ್ ಕೊನೆಯ ಐದು ಓವರುಗಳಲ್ಲಿ 175.24 ಸ್ಟ್ರೈಕ್ರೇಟ್ನಲ್ಲಿ 1083 ರನ್ ಸಿಡಿಸಿದ್ದಾರೆ. ಸದ್ಯ ಮಿಲ್ಲರ್ ಆಟವನ್ನು ಮೀರಿಸುವಂತೆ ಆಡಬಲ್ಲ ಕ್ರಿಕೆಟರ್ ಈ ಲಿಸ್ಟ್ನಲ್ಲಿರುವುದು ವಿರಾಟ್ (Virat Kohli) ಮಾತ್ರ. ಆದರೆ ಮಿಲ್ಲರ್ ಸಾಕಷ್ಟು ಮುಂದೆ ಇರುವುದರಿಂದ ಸುಲಭವಾಗಿ ಈ ಸ್ಥಾನವನ್ನು ಹಲವು ವರ್ಷಗಳ ಕಾಲ ತನ್ನಲ್ಲಿಟ್ಟುಕೊಳ್ಳಬಹುದು. ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅಗ್ರ 5 ಡೆತ್ ಓವರ್ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ಗಳು ಇವರೇ ನೋಡಿ.
1083 – ಡೇವಿಡ್ ಮಿಲ್ಲರ್- ಸ್ಟ್ರೈಕ್ರೇಟ್- 175.24
1014 – MS ಧೋನಿ- ಸ್ಟ್ರೈಕ್ರೇಟ್- 152.02
954 – ಶೋಬೆನ್ ಮಲಿಕ್ (Shoib Malik) – ಸ್ಟ್ರೈಕ್ರೇಟ್- 168.55
901 – ವಿರಾಟ್ ಕೊಹ್ಲಿ- ಸ್ಟ್ರೈಕ್ರೇಟ್- 190.88
867 – ನಜಿಬುಲ್ಲಾ ಜದ್ರಾನ್ (Najibulla Zadran)- ಸ್ಟ್ರೈಕ್ರೇಟ್ – 184.86