ಇಂಡೋ-ಪಾಕ್ (Ind VS Pak) ಏಷ್ಯಾಕಪ್ (Asia Cup) ಕದನದ ಮೊದಲ ಇನ್ನಿಂಗ್ಸ್ ಅಂತ್ಯ ಕಂಡಿದೆ. ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಭಾರತದ ಬಿಗು ದಾಳಿ ಮುಂದೆ ಪಾಕಿಸ್ತಾನ ಹೆಚ್ಚು ರನ್ಗಳಿಸಲು ಸಾಧ್ಯವಾಗಿಲ್ಲ. ಪಾಕಿಸ್ತಾನ 19.5 ಓವರುಗಳಲ್ಲಿ 147 ರನ್ಗಳಿಗೆ ಆಲೌಟ್ ಆಯಿತು.
ಟಾಸ್ ಗೆದ್ದ ಭಾರತ (Ind) ಮೊದಲು ಫೀಲ್ಡಿಂಗ್ ಆರಿಸಿಕೊಂಡಿತು. ಮೊದಲ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಮೊದಲ ಓವರ್ನಲ್ಲಿ ಮೊಹಮ್ಮದ್ ರಿಜ್ವಾನ್ ವಿರುದ್ಧ 2 ರಿವೀವ್ಯೂ ತೆಗೆದುಕೊಂಡಾಗಿತ್ತು. ಆದರೆ ರಿಜ್ವಾನ್ ಇದರಲ್ಲಿ ಬಚಾವಾಗಿದ್ದರು. ಆದರೆ ನಾಯಕ ಬಾಬರ್ ಅಜಂ 10 ರನ್ಗಳಿಸಿದ್ದಾಗ ಭುವನೇಶ್ವರ್ಗೆ ವಿಕೆಟ್ ಒಪ್ಪಿಸಿದರು. ಫಖರ್ ಜಮಾನ್ ಕೂಡ 10 ರನ್ಗಳಿಸಿ ಆವೇಶ್ ಖಾನ್ಗೆ ಬಲಿಯಾದರು.
ರಿಜ್ವಾನ್ ಮತ್ತು ಇಫ್ತಿಕಾರ್ ನಡುವೆ 45 ರನ್ಗಳ ಜೊತೆಯಾಟ ಬಂದಾಗ ಭಾರತ ತಂಡಕ್ಕೆ ಸಣ್ಣ ಟೆನ್ಷನ್ ಆಗಿತ್ತು. ಆದರೆ ಹಾರ್ದಿಕ್ಪಾಂಡ್ಯಾ 28 ರನ್ಗಳಿಸಿದ್ದ ಇಫ್ತಿಕರ್ ಅವರನ್ನು ಔಟ್ ಮಾಡಿದರು. 42 ಎಸೆತಗಳಲ್ಲಿ 43 ರನ್ಗಳಿಸಿದ್ದ ರಿಜ್ವಾನ್ ಮತ್ತು 2 ರನ್ಗಳಿಸಿದ್ದ ಕುಶ್ದಿಲ್ ಶಾ ಹಾರ್ದಿಕ್ಗೆ ಒಂದೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಸ್ಲಾಗ್ ಓವರ್ನ ಆರಂಭದಲ್ಲೇ ಭುವನೇಶ್ವರ್ ಕುಮಾರ್ 9 ರನ್ಗಳಿಸಿದ್ದ ಬಿಗ್ ಹಿಟ್ಟರ್ ಆಸಿಫ್ ಅಲಿ ವಿಕೆಟ್ ಹಾರಿಸಿದರು. 1 ರನ್ಗಳಿಸಿದ್ದ ಮೊಹಮ್ಮದ್ ನವಾಜ್ ಅರ್ಶದೀಪ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ಭುವಿ ಶದಾಬ್ ಖಾನ್ ಆಟಕ್ಕೆ ಮಂಗಳಹಾಡಿದರು. ಮುಂದಿನ ಎಸೆತದಲ್ಲಿ ಖಾತೆ ತೆರಯದ ನಸೀಮ್ ಶಾ ಕೂಡ ಔಟಾದರು. ಧಹಾನಿ ಭುವಿಗೆ ಹ್ಯಾಟ್ರಿಕ್ ನಿರಾಕರಿಸಿದರು. ಅಷ್ಟೇ ಅಲ್ಲ ಕೊನೆಯ ಓವರ್ನಲ್ಲಿ ಸಿಕ್ಸರ್ ಸಿಡಿಸಿ ಪಾಕ್ (Pak)ಸ್ಕೋರ್ ಹೆಚ್ಚಿಸಿದರು. ಆದರೆ ಅರ್ಶದೀಪ್ ಅವರನ್ನು ಕ್ಲೀನ್ಬೌಲ್ಡ್ ಮಾಡಿದರು. ಪಾಕ್ 19.5 ಓವರುಗಳಲ್ಲಿ 147 ರನ್ಗಳಿಗೆ ಆಲೌಟ್ ಆಯಿತು. ಭಾರತದ ಪರ ಭುವನೇಶ್ವರ್ 26 ರನ್ಗೆ 4 ವಿಕೆಟ್ ಪಡೆದರೆ, ಹಾರ್ದಿಕ್ 3 ವಿಕೆಟ್ ಪಡೆದರು.