ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ಟೀಮ್ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ (Bhuvaneshwar Kumar) ಕ್ಲಾಸ್ ಬೌಲಿಂಗ್ ಪ್ರದರ್ಶನ ನೀಡಿದ್ದರು. ಇನ್ಸ್ವಿಂಗ್, ಔಟ್ಸ್ವಿಂಗ್ ಮೂಲಕ ಕಾಡುತ್ತಿದ್ದ ಭುವಿ ಶಾರ್ಟ್ ಬಾಲ್ ಮೂಲಕವೂ ಪಾಕ್ ಬ್ಯಾಟರ್ಗಳಿಗೆ ನೀರು ಕುಡಿಸಿದ್ದರು.
ಮೊದಲ ಓವರ್ನಲ್ಲೇ ಭುವನೇಶ್ವರ್ ಕುಮಾರ್ ಪಾಕಿಸ್ತಾನಕ್ಕೆ(Pakistan) ಕಾಟ ಕೊಡಲು ಆರಂಭಿಸಿದ್ದರು. ಇನ್ನಿಂಗ್ಸ್ನ ಮೂರನೇ ಎಸೆತದಲ್ಲಿ ರಿಜ್ವಾನ್ ಎಲ್ಬಿ ಎಂದು ಅಂಪೈರ್ ಔಟ್ ನೀಡಿದ್ದರು. ಆದರೆ ರಿವೀವ್ಯೂನಲ್ಲಿ ಅಂಪೈರ್ ನಿರ್ಧಾರ ಬದಲಿಸಬೇಕಿತ್ತು. ಮೊದಲ ಓವರ್ನ ಅಂತಿಮ ಎಸೆತದಲ್ಲಿ ಭಾರತ ಕಾಟ್ ಬಿಹೈಂಡ್ಗಾಗಿ ರಿವಿವ್ಯೂ ಮೊರೆ ಹೋಯಿತು. ಅಲ್ಲೂ ರಿಜ್ವಾನ್ ಬಚಾವಾದರು.
ಬಾಬರ್ ಅಜಂ ವಿಕೆಟ್ ಭಾರತಕ್ಕೆ ತುಂಬಾ ಮುಖ್ಯವಾಗಿತ್ತು. ಆದರೆ ಬಾಬರ್ ಭುವಿ ಸ್ವಿಂಗ್ ಬೌಲಿಂಗ್ ಮಾಡಬಹುದು ಅನ್ನುವ ಲೆಕ್ಕಾಚಾರದಲ್ಲಿ ಬಾಬರ್ ಎರಡು ಹೆಜ್ಜೆ ಮುಂದಿಟ್ಟು ಆಡುತ್ತಿದ್ದರು. ಆದರೆ ಭುವನೇಶ್ವರ್ ಬೇರೆ ಯೋಚನೆ ಮಾಡಿದ್ದರು. ಶಾರ್ಟ್ ಪಿಚ್ ಮೂಲಕ ಬಾಬರ್ಗೆ ಶಾಕ್ ಕೊಟ್ಟರು. ದೊಡ್ಡ ಹೊಡೆತಕ್ಕೆ ಯತ್ನಿಸಿದ್ದ ಬಾಬರ್ 10 ರನ್ಗಳಿಗೆ ಆಟ ಮುಗಿಸಿದ್ದರು.
ಸ್ಲಾಗ್ ಓವರ್ನಲ್ಲಿ ಭುವಿ ಮತ್ತೆ ದಾಳಿಗಿಳಿದರು. ಮೊದಲು ಡೇಂಜರಸ್ ಬಿಗ್ ಹಿಟ್ಟರ್ ಆಸೀಫ್ ಅಲಿ ವಿಕೆಟ್ ಪಡೆದರು. ಸ್ಲೋವರ್ ಸ್ಲೈಡರ್ ಮೂಲ ಭುವಿ ಅಲಿ ವಿಕೆಟ್ ಕಿತ್ತಿದ್ದರು. 19ನೇ ಓವರ್ನಲ್ಲಂತೂ ಭುವನೇಶ್ವರ್ ಕಮಾಲ್ ಮಾಡಿದ್ದರು. ಮೊದಲು ಶದಾಬ್ ವಿಕೆಟ್ ಪಡೆದರೆ, ನಂತರ ನಸೀಮ್ ಶಾ ವಿಕೆಟ್ ಅನ್ನು ಸತತ ಎರಡು ಎಸೆತಗಳಲ್ಲಿ ಪಡೆದರು. ಈ ಎರಡು ಬ್ಯಾಟರ್ಗಳು ಎಲ್ಬಿಡಬ್ಲ್ಯೂ ಬಲೆಗೆ ಬಿದ್ದಿದ್ದರು.
ಬೌಲಿಂಗ್ ಮೇಲೆ ಉತ್ತಮ ಕಂಟ್ರೋಲ್ ತೋರಿಸಿದ್ದ ಭುವಿ 4 ಓವರುಗಳಲ್ಲಿ ಕೇವಲ 26 ರನ್ ಮಾತ್ರ ನೀಡಿ 4 ವಿಕೆಟ್ ಹಾರಿಸಿದ್ದರು. ಇದು ಪಾಕ್ ದೊಡ್ಡ ಮೊತ್ತ ಕಲೆ ಹಾಕುವುದನ್ನು ತಡೆಯಿತು. ಭುವಿ ಪ್ರದರ್ಶನ ಭಾರತಕ್ಕೆ ಹೊಸ ಬೂಸ್ಟ್ ನೀಡಿತ್ತು.