ಮೊದಲ ಭಾನುವಾರ ಪಾಕಿಸ್ತಾನ (Pakistan) ತಂಡವನ್ನು ಭಾರತ (India) 5 ವಿಕೆಟ್‌ಗಳಿಂದ ಸೋಲಿಸಿತು. ಈ ಭಾನುವಾರ (Sunday) ಪಾಕಿಸ್ತಾನ (Pak) ಭಾರತ (Ind)ವನ್ನು ಸೇಮ್ ಟು ಸೇಮ್ ಅಂತರದಿಂದ ಸೋಲಿಸಿದೆ. ಈಗಿರುವುದು ಮುಂದಿನ ಭಾನುವಾರದ ಲೆಕ್ಕಾಚಾರ. ಹ್ಯಾಟ್ರಿಕ್ ಸಂಡೇ ದಿನ ಇಂಡೋ-ಪಾಕ್ (Ind VS Pak) ಮ್ಯಾಚ್ ನಡೆಯುತ್ತಾ ಅನ್ನುವ ಚರ್ಚೆಯಂತೂ ಇದ್ದೇ ಇದೆ. ಆದರೆ ಯಾವುದೂ ಅಂದುಕೊಂಡಷ್ಟು ಸುಲಭವಾಗಿಲ್ಲ. ಹಾಗಂತ ಕಷ್ಟವೂ ಇಲ್ಲ. ಜಸ್ಟ್ ಲೆಕ್ಕಾಚಾರದ ಆಟ ಆಡಿದರೆ ಎರಡೂ ತಂಡಗಳ ಅಭಿಮಾನಿಗಳಿಗೆ ಮತ್ತೆ ಮಜಾ ಸಿಗುವುದು ಪಕ್ಕಾ.
ಭಾರತ ಏನು ಮಾಡಬೇಕು?
ಟೀಮ್ ಇಂಡಿಯಾದ (Team India) ಮುಂದಿರುವುದು ಸಿಂಪಲ್ ಟಾಸ್ಕ್. ಉಳಿದ ಎರಡು ಪಂದ್ಯಗಳನ್ನು ಗೆದ್ದು ಲಂಕಾ ತಂಡ ಪಾಕ್ ವಿರುದ್ಧ ಸೋಲುವುದನ್ನು ಕಾಯಬೇಕು. ಭಾರತ ಉಳಿದ ಎರಡು ಪಂದ್ಯಗಳ ಪೈಕಿ ಕನಿಷ್ಠ ಒಂದನ್ನಾದರೂ ಉತ್ತಮ ಅಂತರದಿಂದ ಗೆದ್ದರೆ ರನ್‌ರೇಟ್ ಹೆಚ್ಚುತ್ತದೆ. ಹೀಗಾಗಿ ರೋಹಿತ್ ಬಳಗ ಗೆಲುವನ್ನೇ ಜಪ ಮಾಡಬೇಕಿದೆ.
ಪಾಕಿಸ್ತಾನ ಏನು ಮಾಡಬೇಕು?
ಭಾರತದ ವಿರುದ್ಧದ ಸೂಪರ್ 4 ಪಂದ್ಯವನ್ನು ಗೆದ್ದ ಮೇಲೆ ಪಾಕಿಸ್ತಾನದ ನೆಟ್ ರನ್‌ರೇಟ್ ಉತ್ತಮವಾಗಿದೆ. ಇನ್ನೊಂದು ಪಂದ್ಯವನ್ನು ಗೆದ್ರೂ ಪಾಕ್ ಫೈನಲ್ ಪ್ರವೇಶ ಪಡೆಯುತ್ತದೆ. ಪಾಕಿಸ್ತಾನ ಕೊನೆಯ ಎರಡು ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳನ್ನು ಎದುರಿಸಲಿದೆ. ಈ ಪಂದ್ಯಗಳ ರಿಸಲ್ಟ್ ನೇರವಾಗಿ ಫೈನಲ್ ಮೇಲೆ ಪ್ರಭಾವ ಬೀರುತ್ತದೆ.
ಅಷ್ಟಕ್ಕೂ ಏಷ್ಯಾಕಪ್‌ನಲ್ಲಿ ಯಾರೇ ಗೆದ್ದರೂ ಏಷ್ಯನ್ ತಂಡಗಳೇ ಗೆಲ್ಲುತ್ತವೆ ಅನ್ನುವ ಮಾತಿದೆ. ಆದರೆ ಭಾರತ ಮತ್ತು ಪಾಕ್ ನಡುವಿನ ಪಂದ್ಯದ ರಣ ರೋಚಕತೆಗೆಸ ಯಾವುದೂ ಸಾಟಿಯಾಗುತ್ತಿಲ್ಲ. ಹೀಗಾಗಿ ಸೂಪರ್ ಸಂಡೇಯ ಸೂಪರ್ ಮ್ಯಾಚ್ ಬಗ್ಗೆ ಮತ್ತೆ ಹೈಪ್ ಕ್ರಿಯೇಟ್ ಆಗಿದೆ. ಒಂದು ವೇಳೆ ಇಂಡೋ-ಪಾಕ್ ಫೈನಲ್ ಕನಸು ನನಸಾದರೆ ಅಂದೇ ಅಭಿಮಾನಿಗಳಿಗೆ ಹಬ್ಬ.