ಪಾಕ್ (Pak) ವಿರುದ್ಧದದ ಸೂಪರ್ 4 (Super 4) ಪಂದ್ಯವನ್ನು ಟೀಮ್ ಇಂಡಿಯಾ (Team India) ಸೋತಿದೆ. ಕೊನೆಯ ಎಸೆತದಲ್ಲಿ ಸೋತಿದ್ದು ಭಾರತಕ್ಕೆ (Ind) ಈಗ ದುಬಾರಿಯಾಗುವ ಸಾಧ್ಯತೆ ಇದೆ. ಏಷ್ಯಾಕಪ್ನಲ್ಲಿ (Asia Cup) ಹಾಲಿ ಚಾಂಪಿಯನ್ಸ್ ಆಗಿರುವ ಭಾರತ (India) ಉಳಿದ ಎರಡು ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆದ್ದರೆ ಮಾತ್ರ ಫೈನಲ್ ಎಂಟ್ರಿ ಸಾಧ್ಯವಿದೆ. ಜೊತೆಗೆ ರನ್ರೇಟ್ ಕಡೆಗೂ ಗಮನ ಕೊಡಬೇಕಿದೆ.
ಭಾರತಕ್ಕೆ ಸೂಪರ್ 4ನಲ್ಲಿ ಶ್ರೀಲಂಕಾ (Srilanka) ಮತ್ತು ಅಫ್ಘಾನಿಸ್ತಾನ (Afghanistan) ವಿರುದ್ಧ ಪಂದ್ಯವಿದೆ. ಶ್ರೀಲಂಕಾ ಮತ್ತು ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನ ವಿರುದ್ಧದ ಪಂದ್ಯವೂ ಬಾಕಿ ಇದೆ. ಹೀಗಾಗಿ ಭಾರತ ಎರಡು ಪಂದ್ಯ ಗೆದ್ದು ಪಾಕ್ (Pakistan) ಕೂಡ ಎರಡು ಪಂದ್ಯ ಗೆದ್ದರೆ ಭಾರತ-ಪಾಕ್ ಫೈನಲ್ ನಡೆಯುತ್ತದೆ. ಒಂದು ವೇಳೆ ಭಾರತ ಒಂದು ಪಂದ್ಯವನ್ನು ಸೋತರೂ ಫೈನಲ್ (Final)ಅಸಾಧ್ಯ
ಮತ್ತೊಂದೆಡೆ ಭಾರತ 2 ಪಂದ್ಯ ಗೆದ್ದು ಶ್ರೀಲಂಕಾ ಪಾಕ್ ವಿರುದ್ಧದ ಪಂದ್ಯ ಗೆದ್ದರೆ ರನ್ರೇಟ್ ಲೆಕ್ಕಾಚಾರ ಬರುತ್ತದೆ. ಸಧ್ಯ ಟೀಮ್ ಇಂಡಿಯಾ -0.126 ರನ್ ರೇಟ್ ಹೊಂದಿದೆ. ಪಾಕ್ ಮತ್ತು ಲಂಕಾ ಪ್ಲಸ್ ರನ್ರೇಟ್ ಹೊಂದಿದೆ. ಈ ಮಧ್ಯೆ ಪಾಕ್ ಲಂಕಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಕಳೆದುಕೊಂಡರೆ ಟೂರ್ನಿಯಿಂದ ಹೊರ ಬೀಳಲಿದೆ.
ಒಟ್ಟಿನಲ್ಲಿ ಏಷ್ಯಾಕಪ್ ಹೋರಾಟ ಈ ಎಲ್ಲಾ ತಂಡಗಳಿಗೂ ಮಾಡು ಇಲ್ಲವೆ ಮಡಿ ಹೋರಾಟದಂತಾಗಿದೆ. ಒಂದು ತಪ್ಪು ಹೆಜ್ಜೆ ಯಾವ ತಂಡವನ್ನು ಬೇಕಾದರೂ ಟೂರ್ನಿಯಿಂದ ಹೊರಗಟ್ಟಬಹುದು.