Ind Vs Eng test match – ರಿಷಬ್ ಪಂತ್ ಬೆಸ್ಟ್ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ – ಮಾಜಿ ಕ್ರಿಕೆಟಿಗರ ಬಣ್ಣನೆ..!
ರಿಷಬ್ ಪಂತ್ ಅವರ ಮಹೋನ್ನತ ಟೆಸ್ಟ್ ಶತಕಕ್ಕೆ ಮಾಜಿ ಕ್ರಿಕೆಟಿಗರು ಫಿದಾ ಆಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಅಮೋಘ ಆಟವನ್ನು ಆಡಿದ್ದರು. ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾವನ್ನು ಶತಕದ ಮೂಲಕ ರಿಷಬ್ ಪಂತ್ ಪಾರು ಮಾಡಿದ್ದರು. ರಿಷಬ್ ಪಂತ್ ಅವರ ಭರ್ಜರಿ ಆಟಕ್ಕೆ ಮತ್ತೊಂದು ಕಡೆ ರವೀಂದ್ರ ಜಡೇಜಾ ಕೂಡ ಉತ್ತಮ ಸಾಥ್ ನೀಡಿದ್ರು.
98ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾಗೆ ಆಧಾರವಾಗಿದ್ದು ಪಂತ್ ಮತ್ತು ಜಡೇಜಾ ಅವರ ಜೊತೆಯಾಟ. ಆರನೇ ವಿಕೆಟ್ ಗೆ 222 ರನ್ ಪೇರಿಸಿ ತಂಡದ ಮೊತ್ತವನ್ನು ಮೊದಲ ದಿನವೇ 300ರ ಗಡಿ ದಾಟಿಸಿದ್ರು.
ಕಳೆದ ಐಪಿಎಲ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ರಿಷಬ್ ಪಂತ್ ಬ್ಯಾಟ್ ನಿಂದ ನಿರೀಕ್ಷಿತ ಮಟ್ಟದ ರನ್ ಗಳು ಹರಿದು ಬರಲಿಲ್ಲ. ಹೀಗಾಗಿ ಮುಂಬರುವ ಟಿ-20 ವಿಶ್ವಕಪ್ ನಲ್ಲಿ ರಿಷಬ್ ಪಂತ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಾರೋ ಇಲ್ವೋ ಅನ್ನೋ ಅನುಮಾನ ಕೂಡ ಇತ್ತು. ಆದ್ರೆ ರಿಷಬ್ ಪಂತ್ ಈಗ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ.
ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದ ರಿಷಬ್ ಪಂತ್, ದಕ್ಷಿಣ ಆಫ್ರಿಕಾ ಸರಣಿಯ ವೇಳೆ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನ ಮತ್ತು ಸಲಹೆಗಳನ್ನು ಕೂಡ ಪಡೆದುಕೊಂಡಿದ್ದರು. ರಾಹುಲ್ ದ್ರಾವಿಡ್ ಸಲಹೆ ಟಿ-20 ಪಂದ್ಯಗಳಲ್ಲಿ ವರ್ಕ್ ಔಟ್ ಆಗಿರಲಿಲ್ಲ. ಆದ್ರೆ ಇದೀಗ ಟೆಸ್ಟ್ ಪಂದ್ಯದಲ್ಲಿ ದ್ರಾವಿಡ್ ಕಿವಿ ಮಾತು ರಿಷಬ್ ಪಂತ್‍ಗೆ ವರದಾನವಾಗಿದೆ. ಹೀಗಾಗಿಯೇ ರಿಷಬ್ ಪಂತ್ ಶತಕ ದಾಖಲಿಸುತ್ತದ್ದಂತೆ ಪೆವಿಲಿಯನ್ ನಲ್ಲಿ ಹೆಡ್ ಕೋಚ್ ದ್ರಾವಿಡ್ ಸಂಭ್ರಮಾಚರಣೆ ಮಾಡಿದ್ದರು.
ಇನ್ನೊಂದು ಕಡೆ ರಿಷಬ್ ಪಂತ್ ಅವರ ಶತಕದ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಕೂಡ ರಿಷಬ್ ಪಂತ್ ಅವರ ಇನಿಂಗ್ಸ್ ಗೆ ಫಿದಾ ಆಗಿದ್ದಾರೆ ಸಿಂಪಲ್ ಆಗಿ ಹೇಳುವುದಾದ್ರೆ ಅದ್ಭುತವಾಗಿದೆ. ವೆಲ್ ಡನ್ ರಿಷಬ್ ಪಂತ್. ಇನ್ನೊಂದೆಡೆ ರವೀಂದ್ರ ಜಡೇಜಾ ಕೂಡ ಉತ್ತಮವಾಗಿ ಸಾಥ್ ನೀಡಿದ್ರು ಎಂದು ಸಚಿನ್ ತೆಂಡುಲ್ಕರ್ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅದ್ಭುತ ಇನಿಂಗ್ಸ್… ಟೆಸ್ಟ್ ಕ್ರಿಕೆಟ್ ನ ಬೆಸ್ಟ್ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಎಂದು ವಾಸಿಂ ಜಾಫರ್ ಅವರು ಟ್ವಿಟ್ ಮಾಡಿದ್ದಾರೆ. Ind Vs Eng test match -Rishan Pant Best WK batter in Tests: Tendulkar, Jaffer lead reactions
ಟೆಸ್ಟ್ ಕ್ರಿಕೆಟ್ ನಲ್ಲಿ ರಿಷಬ್ ಪಂತ್ ಅವರು ಪಂಚ್ ಆಟ ಮುಂದುವರಿದಿದೆ. ಈ ಕಾರಣಕ್ಕಾಗಿಯೇ ಅವರನ್ನು ಸೂಪರ್ ಸ್ಟಾರ್ ಎಂದು ಕರೆಯಬಹುದು ಎಂದು ಇರ್ಫಾನ್ ಪಠಾಣ್ ತನ್ನ ಟ್ವಿಟರ್ ಖಾತೆಯಲ್ಲಿ ರಿಷಬ್ ಪಂತ್ ಆಟವನ್ನು ಗುಣಗಾನ ಮಾಡಿದ್ದಾರೆ.
ಅದ್ಭುತವಾದ ಶತಕ ರಿಷಬ್ ಪಂತ್..ಕಿಪ್ ಇಟ್ ಅಪ್ ಅಂತ ಹರ್ಭಜನ್ ಸಿಂಗ್ ಬರೆದುಕೊಂಡಿದ್ದಾರೆ.
ಪಂತ್ ಅವರ ಟೆಸ್ಟ್ ಕ್ರಿಕೆಟ್ ನ ಇನಿಂಗ್ಸ್ ನಲ್ಲಿ ಮೋಜಿನ ಆಟವಿತ್ತು. ಹ್ಯಾಟ್ಸ್ ಆಫ್ ಎಂದು ಸಂಜಯ್ ಮಾಂಜ್ರೆಕರ್ ಟ್ವಿಟರ್ ನಲ್ಲಿ ಬಣ್ಣಿಸಿದ್ದಾರೆ.
ಅಲ್ಲದೆ ರಿಷಬ್ ಪಂತ್ ಆಟಕ್ಕೆ ಕ್ರಿಕೆಟ್ ಅಭಿಮಾನಿಗಳು ನಾನಾ ರೀತಿಯ ಕಮೆಂಟ್ ಗಳನ್ನು ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಇಂಗ್ಲೆಂಡ್ ನೆಲದಲ್ಲಿ ರಿಷಬ್ ಪಂತ್ ಟೀಮ್ ಇಂಡಿಯಾದ ಮರ್ಯಾದೆಯನ್ನು ಉಳಿಸಿದ್ದಾರೆ. ಇಂಗ್ಲೀಷ್ ಬೌಲರ್ ಗಳ ಅಟ್ಟಹಾಸದ ಎದುರು ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಟೆಸ್ಟ್ ಕ್ರಿಕೆಟ್ ನಲ್ಲೂ ಟಿ-20 ಮತ್ತು ಏಕದಿನ ಕ್ರಿಕೆಟ್ ನಂತೆ ಆಡಬಲ್ಲೇ ಎಂಬುದನ್ನು ರಿಷಬ್ ಪಂತ್ ತೋರಿಸಿಕೊಟ್ಟಿದ್ದಾರೆ. ಇದಕ್ಕೆ ಕಾರಣ ರಿಷಬ್ ಪಂತ್ ಅವರಲ್ಲಿರುವ ಆತ್ಮವಿಶ್ವಾಸ. ಬ್ಯಾಟಿಂಗ್ ಮಾಡುವಾಗ ಬೌಲರ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದ್ರೆ ಆತ ಯಾವ ರೀತಿ ಬೌಲಿಂಗ್ ಮಾಡುತ್ತಾನೆ ಎಂಬುದರ ಕಡೆ ಗಮನ ಹರಿಸುತ್ತೇನೆ ಎಂದು ರಿಷಬ್ ಪಂತ್ ತನ್ನ ಬ್ಯಾಟಿಂಗ್ ಕೌಶಲ್ಯದ ಬಗ್ಗೆಯೂ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ರಿಷಬ್ ಪಂತ್ ಮಾಡುವ ಸಾಧನೆಗಳು ಇನ್ನಷ್ಟಿದೆ. ಆದ್ರೆ ನೋಡಿಕೊಂಡು, ಜವಾಬ್ದಾರಿಯುತವಾಗಿ ಆಡಿದ್ರೆ ಟೀಮ್ ಇಂಡಿಯಾದ ಭವಿಷ್ಯದ ಆಟಗಾರನಾಗಿ ಹೊರಹೊಮ್ಮಬಹುದು.