ಇಂಗ್ಲೆಂಡ್ ಕ್ರಿಕೆಟ್ ತಂಡದ ಅವಳಿ ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಬರ್ಮಿಂಗ್ ಹ್ಯಾಂ ಟೆಸ್ಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಜೇಮ್ಸ್ ಆ್ಯಂಡರ್ಸನ್ 32 ಬಾರಿಗೆ 5 ವಿಕೆಟ್ಗಳ ಸಾಧನೆ ಮಾಡಿದರೆ, ಬ್ರಾಡ್ ಟೆಸ್ಟ್ನಲ್ಲಿ 550 ವಿಕೆಟ್ ಕಿತ್ತ ಸಂಭ್ರಮ ಆಚರಿಸಿಕೊಂಡರು.
ಸ್ಟುವರ್ಟ್ ಬ್ರಾಡ್ 550 ವಿಕೆಟ್ಗಳ ಸಾಧನೆ ಮಾಡಿದ ಇಂಗ್ಲೆಂಡ್ನ 2ನೇ ಬೌಲರ್. ಇವರಿಗಿಂತ ಹೆಚ್ಚು ವಿಕೆಟ್ ಪಡೆದಿರುವುದು ಜೇಮ್ಸ್ ಆ್ಯಂಡರ್ಸನ್. ಬ್ರಾಡ್ ಸದ್ಯ ಅತೀ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 800 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದರೆ. ಲೆಗ್ ಸ್ಪಿನ್ ದಂತಕಥೆ ದಿವಂಗತ ಶೇನ್ ವಾರ್ನ್ 708 ವಿಕೆಟ್ ಸಂಪಾದಿಸಿದ್ದರು.ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ 656 ವಿಕೆಟ್ಗಳ ಮೂಲಕ 3ನೇ ಸ್ಥಾನದಲ್ಲಿದ್ದಾರೆ. ಭಾರತದ ಲೆಗ್ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ 619 ವಿಕೆಟ್ ಪಡೆದಿದ್ರು. ಈಗ ಬ್ರಾಡ್ 550 ವಿಕೆಟ್ಗಳ ಗಡಿ ತಲುಪಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಮಾತ್ರ 2 ಬೌಲರ್ಗಳು 550ಕ್ಕಿಂತಲೂ ಅಧಿಕ ವಿಕೆಟ್ ಪಡೆದಿದ್ದಾರೆ.
ಜೇಮ್ಸ್ ಆ್ಯಂಡರ್ಸನ್ ಬರ್ಮಿಂಗ್ ಹ್ಯಾಂ ಟೆಸ್ಟ್ನಲ್ಲಿ ಮತ್ತೆ ಮಿಂಚಿದರು. 39 ವರ್ಷ 337 ದಿನ ವಯಸ್ಸಿನಲ್ಲಿ ಟೆಸ್ಟ್ನಲ್ಲಿ 5 ವಿಕೆಟ್ ಪಡೆದ ಏಕೈಕ ಬೌಲರ್ ಆ್ಯಂಡರ್ಸನ್. ಆ್ಯಂಡರ್ಸನ್ ಟೀಮ್ಇಂಡಿಯಾದ ಶುಭ್ಮನ್ ಗಿಲ್, ಚೇತೇಶ್ವರ ಪೂಜಾರಾ, ಶಾರ್ದೂಲ್ ಥಾಕೂರ್, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ವಿಕೆಟ್ ಪಡೆದು ಈ ಸಾಧನೆ ಮಾಡಿದರು.